ಮೆಕ್ಸಿಕೋದಲ್ಲಿ ಟಾಟಾ ಕಾರು ತಯಾರಿಕೆ

ಮಾತುಕತೆ ಯಶಸ್ವಿಯಾದರೆ ಮೆಕ್ಸಿಕೋದ ಮೆಟಲ್ಸ ಎಸ್ಎಡಿಸಿವಿ ಕಂಪೆನಿ ಗುತ್ತಿಗೆ ಉತ್ಪಾದನೆ ಒಪ್ಪಂದದ ಮೇರೆಗೆ ಇಂಡಿಕಾ ವಿಸ್ತ, ಇಂಡಿಗೋ ಮಾನ್ಜಾ ಸೇಡನ್ ಮತ್ತು ಅಗ್ಗದ ಬೆಲೆಯ ನ್ಯಾನೋ ಕಾರನ್ನು ತಯಾರಿಸಲಿದೆ. ಇದರಿಂದ ಟಾಟಾದ ಉತ್ಪಾದನೆಗಳು ಮೆಕ್ಸಿಕೋ ಮತ್ತು ಸಮೀಪದ ಇತರ ಮಾರುಕಟ್ಟೆಗಳಲ್ಲಿ ಮಾರಾಟವಾಗಲಿವೆ ಎನ್ನಲಾಗಿದೆ.
ಟಾಟಾ ಮೋಟಾರ್ಸ್ ನ ಹಿರಿಯ ಅಧಿಕಾರಿಗಳ ತಂಡ ಈ ಸಂಬಂದ ಮೆಕ್ಸಿಕೋಗೆ ಇತ್ತೀಚೆಗೆ ಭೇಟಿ ನೀಡಿತ್ತು ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಮೆಟಲ್ಸ ಕಂಪೆನಿ ಗ್ರುಪೊ ಪ್ರೊಜೆರ ಸಮೂಹದ ಕಂಪೆನಿಯಾಗಿದ್ದು ಕಾರು ಹಾಗೂ ವಾಣಿಜ್ಯ ವಾಹನಗಳಿಗೆ ಕಾಂಪೊನೆಂಟ್ ಗಳನ್ನು ತಯಾರಿಸುತ್ತಿದೆ. ಮೆಟಲ್ಸದ ಘಟಕವೊಂದು ಜೆಮ್ಷೆಡ್‌ಪುರದಲ್ಲಿದ್ದು ಟಾಟಾ ಟ್ರಕ್ ಗಳಿಗೆ ಚಾಸಿಗಳನ್ನು ಸರಬರಾಜು ಮಾಡುತ್ತಿದೆ. ಟಾಟಾ ಮಾರುಕಟ್ಟೆಯ ಅವಶ್ಯಕತೆ ಮತ್ತು ಬೇಡಿಕೆಯನ್ನು ಆಧರಿಸಿ ವಾಹನಗಳನ್ನು ವಿವಿಧ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ ಎಂದೂ ಪತ್ರಿಕೆ ಹೇಳಿದೆ.
ಟಾಟಾ ನ್ಯಾನೋಗೆ ಎಡಿಸನ್ ಗೋಲ್ಡ್ ಪ್ರಶಸ್ತಿ
ಟಾಟಾ ಕಂಪೆನಿ ತಯಾರಿಸಿದ ವಿಶ್ವದ ಅತ್ಯಂತ ಕಡಿಮೆ ವೆಚ್ಚದ ಕಾರು ನ್ಯಾನೋಗೆ ಅತ್ಯುತ್ತಮ ಹೊಸ ಉತ್ಪನ್ನ ದ ಸಾರಿಗೆ ವಿಭಾಗದಲ್ಲಿ ನೀಡಲಾಗುವ ಅಮೆರಿಕಾದ 2010 ಎಡಿಸನ್ ಪ್ರಶಸ್ತಿ ಲಭಿಸಿದೆ . ಖ್ಯಾತ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿ ಮಾರುಕಟ್ಟೆಯ, ವಿನ್ಯಾಸದ ಅವಿಷ್ಕಾರ, ಸಾಮಾಜಿಕ ಪ್ರಭಾವ ಮತ್ತು ಮಾರುಕಟ್ಟೆಯ ಯಶಸ್ಸಿಗಾಗಿ ನೀಡಲಾಗುತ್ತದೆ .


Click it and Unblock the Notifications








