ದಕ್ಷಿಣ ಆಫ್ರಿಕಾಕ್ಕೆ ಲಗ್ಗೆ ಇಟ್ಟ ಟಾಟಾ ಮೋಟಾರ್ಸ್

ಸುದ್ದಿಗಾರರೊಂದಿಗೆ ಮಾತನಾಡಿದ ಕಂಪೆನಿಯ ಭಾರತದ ವೈವಸ್ಥಾಪಕ ನಿರ್ದೇಶಕ ಪಿ ಎಮ್ ತೆಲಂಗ್ ಅವರು ಮೊದಲಿಗೆ ಸಣ್ಣ ಹಾಗೂ ಮದ್ಯಮ ವರ್ಗದ ಟ್ರಕ್ ಗಳ ಜೋಡಣಾ ಘಟಕವನ್ನು ಸ್ಥಾಪಿಸಲಾಗುವುದು ಎಂದರು.
ಮೊದಲು 3,000 ಟ್ರಕ್ ಗಳ ಜೋಡಣಾ ಸಾಮರ್ಥ್ಯದ ಘಟಕ ಸ್ಥಾಪಿಸಲಿದ್ದು ನಂತರ ಇದನ್ನಯ 4,500 ಕ್ಕೆ ಏರಿಸಲಾಗುವುದು ಎಂದರು. ಟಾಟಾ ಸಮೂಹ 1994ರಲ್ಲಿ ಟಾಟಾ ಆಫ್ರಿಕಾ ಹೋಲ್ಡಿಂಗ್ಸ್ ನ್ನು ಜೋಹಾನ್ಸ್ ಬರ್ಗ್ ನಲ್ಲಿ ಸ್ಥಾಪಿಸಿತು.
2008ರಲ್ಲಿ ಜಪಾನ್ ಮೂಲದ ನಿಸ್ಸಾನ್ ಮೋಟಾರ್ಸ್ ನ ವಾಹನ ತಯಾರಿಕಾ ಘಟಕವನ್ನು ಖರೀದಿ ಮಾಡಿತು. ಕಂಪೆನಿ ಮುಂದಿನ 2-3 ವರ್ಷಗಳಲ್ಲಿ ನೈಜೀರಿಯಾದಲ್ಲೂ ಉತ್ಪಾದನಾ ಘಟಕ ಸ್ಥಾಪಿಸಲು ಯೋಜನೆ ಹಾಕಿಕೊಂಡಿದೆ.
ಕಂಪೆನಿ ಈಗ ಥೈಲ್ಯಾಂಡ್, ಬಾಂಗ್ಲಾ ದೇಶ, ಸ್ಪೇನ್, ಇಂಗ್ಲೆಂಡ್ ಮತ್ತು ದಕ್ಷಿಣ ಕೊರಿಯಾದಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ. ಟಾಟಾ ಮೋಟಾರ್ಸ್ ಈ ಹಣಕಾಸು ವರ್ಷದಲ್ಲಿ ಒಟ್ಟು 2.2 ಲಕ್ಷ ಟ್ರಕ್ ಗಳನ್ನು ಮಾರಾಟ ಮಾಡುವ ಗುರಿ ಹೊಂದಿದ್ದು ಇದರಲ್ಲಿ 1.5 ಲಕ್ಷ ಏಸ್ ಟ್ರಕ್ ಗಳಾಗಿದ್ದು 70 ಸಾವಿರ ಮ್ಯಾಜಿಕ್ ಟ್ರಕ್ ಗಳಾಗಿವೆ.
ಕಳೆದ ವರ್ಷ ಕಂಪೆನಿ 1.1 ಲಕ್ಷ ಏಸ್ ಹಾಗೂ 48 ಸಾವಿರ ಮ್ಯಾಜಿಕ್ ಗಳನ್ನು ಮಾರಾಟ ಮಾಡಿತ್ತು. ಟಾಟಾ ಮೋಟಾರ್ಸ್ ಈ ವರ್ಷ ಪ್ರೈಮಾ ಶ್ರೇಣಿಯಲ್ಲಿ ನಾಲ್ಕು ಹೊಸ ಮಾದರಿಯ ಟ್ರಕ್ ಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಿದೆ.
ಪಂತ್ ನಗರದಲ್ಲಿರುವ ಮಿನಿ ಟ್ರಕ್ ಇ ಟನ್ ಸಾಮರ್ಥ್ಯದ ಏಸ್ ಗಳ ವಾರ್ಷಿಕ ಉತ್ಪಾದನೆಯನ್ನು 10 ಸಾವಿರದಿಂದ 20 ಸಾವಿರಕ್ಕೇರಿಸಲು ಟಾಟಾ ಯೋಜನೆ ಹಾಕಿಕೊಂಡಿದೆ .


Click it and Unblock the Notifications








