ಹ್ಯುಂಡೈಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ ಟಾಟಾ

Tata motors pushes Hyundai to third spot in June
ಕಾರು ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿ ಮೆರೆಯುತ್ತಿದ್ದ ಹ್ಯುಂಡೈಯನ್ನು ಹಿಂದಿಕ್ಕಿ ಟಾಟಾ ಮೋಟಾರ್ಸ್ ದೇಶದ ಎರಡನೇ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆ ಎನಿಸಿಕೊಂಡಿದೆ. ಟಾಟಾ ಈ ಮಟ್ಟ ಮುಟ್ಟಲು ಟಾಟಾ ನ್ಯಾನೋ ಕಾರು ಬಹುಪಾಲು ಕಾರಣ ಎಂದರೆ ತಪ್ಪಾಗಲಾರದು.

ಜೂನ್ ತಿಂಗಳಿನಲ್ಲಿ 27,811 ಕಾರುಗಳನ್ನು ಟಾಟಾ ಮೋಟರ್ಸ್ ಮಾರಾಟ ಮಾಡಿದ್ದರೆ, ಇದೇ ತಿಂಗಳಲ್ಲಿ 27,366 ಕಾರುಗಳನ್ನು ಹ್ಯುಂಡೈ ಮಾರಾಟ ಮಾಡಿದೆ.ಈ ಅವಧಿಯಲ್ಲಿ 7704 ನ್ಯಾನೋ ಕಾರುಗಳು ತ್ವರಿತವಾಗಿ ಮಾರಾಟವಾಗಿದ್ದು, ಟಾಟಾದ ಏಳಿಗೆ ಕಾರಣವಾಗಿದೆ.

ದೇಶದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿ ಜೂನ್ ತಿಂಗಳಲ್ಲಿ 72,812 ಕಾರುಗಳನ್ನು ಮಾರಾಟ ಮಾಡಿದೆ. ಮುಂಗಾರು ಅವಧಿಯಲ್ಲಿ ಕಾರುಗಳ ಮಾರಾಟ ಕೊಂಚ ಇಳಿಮುಖವಾದರೂ ಮಾರುತಿ ಸುಜುಕಿ ಮಾರಾಟದಲ್ಲಿ ಶೇ. 17.28 ರಷ್ಟು ಏರಿಕೆ ಕಂಡಿದೆ.

ಮೊದಲ ಮೂರು ಸ್ಥಾನಗಳ ನಂತರ ಫೋರ್ಡ್ ಹಾಗೂ ಜಿಎಂ ಸಂಸ್ಥೆ ಕೂಡಾ ಉತ್ತಮ ಬೆಳವಣಿಗೆ ಕಂಡಿದೆ. ಟಯೋಟ ಈ ಅವಧಿಯಲ್ಲಿ ಶೇ. 41.5ರಷ್ಟು ಮಾರಾಟದಲ್ಲಿ ಏರಿಕೆ ಕಂಡಿದೆ. ಭಾರತದ ಅತ್ಯಧಿಕ SUV ಉತ್ಪಾದನಾ ಸಂಸ್ಥೆ ಮಹೀಂದ್ರಾ ಹಾಗೂ ಮಹೀಂದ್ರಾ ಹಾಗೂ ಜಪಾನಿನ ಹೋಂಡಾ ಸಂಸ್ಥೆಗಳು ಹೆಚ್ಚಿನ ಲಾಭವನ್ನೇನೂ ಗಳಿಸಿಲ್ಲ.

ದ್ವಿಚಕ್ರವಾಹನಗಳ ಪೈಕಿ ಹೀರೋಹೊಂಡಾ ಶೇ.17 ರ ಪ್ರಗತಿಯೊಂದಿಗೆ 4.26 ಲಕ್ಷ ವಾಹನಗಳನ್ನು ಮಾರಿದೆ. ಟಿವಿಎಸ್ ಶೇ. 33 ರ ಪ್ರಗತಿಯೊಂದಿಗೆ 1.39 ವಾಹನಗಳನ್ನು ಮಾರಾಟ ಮಾಡಿದೆ.

More from DriveSpark

Article Published On: Thursday, July 8, 2010, 12:56 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+