ಐಷಾರಾಮಿ ಕಾರು ಮಾರುಕಟ್ಟೆ ಆಳಲು ಆಡಿ ರೆಡಿ

Audi enters India auto market
ಭಾರತದಲ್ಲಿ ಸಣ್ಣಕಾರುಗಳ ಮಾರುಕಟ್ಟೆಯಲ್ಲಿ ವಿಧವಿಧದ ಕಾರುಗಳ ಪ್ರವೇಶದ ಬೆನ್ನಲ್ಲೇ ವಿಶ್ವದ ದೊಡ್ಡ ದೊಡ್ಡ ಕಂಪೆನಿಗಳು ಐಷಾರಾಮಿ ಕಾರುಗಳ ಮಾರುಕಟ್ಟೆಯಲ್ಲಿ ತಮ್ಮ ಪ್ರಾಬಲ್ಯ ಮೆರೆಯಲು ಯೋಜನೆ ಹಾಕಿಕೊಂಡಿವೆ.

ಐಷಾರಾಮಿ ಹಾಗೂ SUV ಗಳ ವಲಯಕ್ಕೆ ಕನಿಷ್ಠವೆಂದರೂ 20 ಹೊಸ ವಿನ್ಯಾಸದ ಕಾರುಗಳು ಎಂಟ್ರಿ ಕೊಡಲಿವೆ. ಭಾರತದ ಐಷಾರಾಮಿ ಮಾರುಕಟ್ಟೆಯನ್ನು ಶೇ.40 ರಷ್ಟು ಹಿಗ್ಗಿಸಿದ್ದಲ್ಲದೇ, ತನ್ನ ವ್ಯವಹಾರವನ್ನು ಶೇ.70 ರಷ್ಟು ಹೆಚ್ಚಿಸಿಕೊಂಡಿರುವ ಜರ್ಮನಿ ಮೂಲದ ಆಡಿ ಕಾರು ಕಂಪೆನಿ, ಭಾರತದ ಐಷಾರಾಮಿ ಕಾರುಗಳ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಪಡೆಯುವ ಎಲ್ಲಾ ಸೂಚನೆಗಳು ಕಂಡು ಬಂದಿವೆ.

ವಿಶ್ವದ ಪುರಾತನ ಬ್ರಾಂಡ್ ಗಳಲ್ಲಿ ಒಂದಾದ ವೋಕ್ಸ್ ವ್ಯಾಗನ್ ಸಮೂಹಕ್ಕೆ ಸೇರಿದ ಆಡಿ ಕಾರುಗಳಿಗೆ ಬಿಎಂಡಬ್ಲ್ಯು, ಮರ್ಸಿಡೀಸ್ ಬೆಂಜ್ ಕಾರುಗಳು ಸಕತ್ ಪೈಪೋಟಿ ನಡೆಲಿವೆ. ಈಗಾಗಲೇ ಈ ಎರಡು ಕಂಪೆನಿಗಳು ಹೆಚ್ಚೆಚ್ಚು ಷೋರೂಮ್ ಗಳನ್ನು ತೆರೆದು, ಕಾರು ವಿತರಣೆಯಲ್ಲಿ ವಿಸ್ತರಣೆಯನ್ನು ಕಾಣುತ್ತಿವೆ.

ಯುರೋಪಿಯನ್ ರಾಷ್ಟ್ರಗಳು ಹಾಗೂ ಚೀನಾದಲ್ಲಿ ತನ್ನ ಪ್ರಾಬಲ್ಯ ಮೆರೆದ ಮೇಲೆ, ಆಡಿ ಈಗ ಭಾರತದಲ್ಲಿ ತನ್ನ ಮಾರುಕಟ್ಟೆ ವಿಸ್ತರಣೆಗೆ ಒಂದು ವರ್ಷದ ಕಾಲಾವಾಧಿಯನ್ನು ನಿಗದಿಪಡಿಸಿಕೊಂಡಿದೆ. ಇದಕ್ಕೆ ಶೇ.40 ರಷ್ಟು ಹೆಚ್ಚಿನ ಬಂಡವಾಳ ಹೂಡಿಕೆಗೂ ಮುಂದಾಗಿದೆ.

ಸುಮಾರು 20ಕ್ಕೂ ಹೆಚ್ಚು ಹೊಸ ವಿನ್ಯಾಸಗಳನ್ನು ಹೊರತರಲಿರುವ ಆಡಿ, ಇನ್ನೂ ಬಗೆಬಗೆ ನಮೂನೆಗಳನ್ನು ಹೊರತರಲು ಚಿಂತನೆ ನಡೆಸಿದೆ. ಹೆಚ್ಚೆಚ್ಚು ವೈವಿಧ್ಯಮಯ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿ, ಗ್ರಾಹಕರ ಮನಗೆಲ್ಲಲು ಆಡಿ ಯೋಜಿಸಿದೆ.

ಆಡಿ ಕಂಪೆನಿಗೆ ಪೈಪೋಟಿ ನೀಡಲು ಬೆಂಜ್ ಹಾಗೂ ಬಿಎಂಡಬ್ಲ್ಯು ಆಲ್ಲದೆ ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್ ಕೂಡಾ ಐಷಾರಾಮಿ ಕಾರುಗಳ ಉತ್ಪಾದನಾ ಘಟಕ ಆರಂಭಿಸಲು ಮುಂದಾಗಿವೆ.

ಆಡಿ ಸುಮಾರು 30 ಮಿಲಿಯನ್ ಯುರೋಗಳನ್ನು ಹೂಡಿ ಉತ್ಪಾದನಾ ಘಟಕ ಆರಂಭಿಸಲು ಯೋಜನೆ ಹಾಕಿಕೊಂಡಿದೆ. ಬೆಂಜ್ ಈಗಾಗಲೇ ಸೆಕೆಂಡ್ಸ್ ಕಾರು ಮಾರುಕಟ್ಟೆಗೂ ಕಾಲಿರಿಸಿದ್ದು, ಉತ್ತಮ ತಂತ್ರವನ್ನು ಹೂಡಿ ಮಾರುಕಟ್ಟೆ ವಿಸ್ತರಣೆಯಲ್ಲಿ ತೊಡಗಿದೆ.

More from DriveSpark

Article Published On: Wednesday, July 14, 2010, 11:40 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+