ಹೊಸ ಟೊಯೋಟಾ ಕರೊಲ್ಲಾ ಆಲ್ಟಿಸ್ ಕಾರು

ಈ ಕಾರಿನ ದೆಹಲಿ ಎಕ್ಸ್ ಶೋ ರೂಂ ಬೆಲೆ 10.95ಲಕ್ಷ ರೂಪಾಯಿಗಳಿಂದ 13.75 ಲಕ್ಷ ರೂಪಾಯಿಗಳವರೆಗೆ ಇದೆ. ಕಂಪೆನಿ ದೇಶದ ಕಿರ್ಲೋಸ್ಕರ್ ಸಮೂಹದೊಂದಿಗೆ ಸಹಯೋಗ ಹೊಂದಿದ್ದು ಡೀಸೆಲ್ ಕಾರು 1.4 ಲೀಟರಿನ ಸಾಮರ್ಥ್ಯ ಹೊಂದಿದ್ದು 6 ಗೇರ್ ಗಳನ್ನು ಹೊಂದಿದೆ.
ಟೊಯೋಟಾದ ಉತ್ತಮ ತಂತ್ರಜ್ಞಾನ ಹಾಗೂ ಇಂಧನ ಮಿತವ್ಯಯದ ವಾಹನಗಳನ್ನು ಭಾರತಕ್ಕೆ ಪರಿಚಯಿಸಲು ನಮಗೆ ಹೆಮ್ಮೆ ಎನಿಸುತ್ತದೆ ಎಂದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ವ್ಯವಸ್ಥಾಪಕ ನಿರ್ದೇಶಕ ಹಿರೋಶೀ ನಕಾಗವ ಅವರು ಕಂಪೆನಿಯ ಆಲ್ಟಿಸ್ ಕಾರು ಪ್ರತಿ ಲೀಟರ್ ಡೀಸೆಲ್ ಗೆ 21.43 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದರು.


Click it and Unblock the Notifications








