ಹಳೆ ವಾಹನಗಳಿಗೆ ಹೊಸ ರೀತಿ ತೆರಿಗೆ ಹೊರೆ

Old vehicle owners may have to pay green tax
ಮುಂಬೈ, ಆ.9: ಒಂದು ವಾಹನದ ಆಯಸ್ಸು ಎಷ್ಟು ವರ್ಷ? ಸುಮಾರು 15 ವರ್ಷ ಎನ್ನುತ್ತದೆ ಮಹಾರಾಷ್ಟ್ರ ಸರ್ಕಾರ. ಗುಜರಿ ಸೇರಲು ಯೋಗ್ಯವಾದ ಈ ಹಳೆ ವಾಹನ ಮೇಲೆ ಪರಿಸರ ತೆರಿಗೆ ವಿಧಿಸಲು ಇಲ್ಲಿನ ಸರ್ಕಾರ ನಿರ್ಧರಿಸಿದೆ. ಇದಕ್ಕೆ ಕೇಂದ್ರದ ಪರಿಸರ ಇಲಾಖೆಯ ಬೆಂಬಲ ಕೂಡ ಸಿಕ್ಕಿದೆ.

ಮಹಾರಾಷ್ಟ್ರದಲ್ಲಿ ಏನಿಲ್ಲವೆಂದರೂ 15 ವರ್ಷ ಹಳೆಯದಾದ 15 ಲಕ್ಷ ಖಾಸಗಿ ವಾಹನಗಳು ಹಾಗೂ 8 ವರ್ಷ ಹಳೆಯದಾದ 6 ಲಕ್ಷ ಸರಕು ಸಾಗಾಣಿಕೆ ವಾಹನಗಳಿವೆ. ಇವೆಲ್ಲವೂ ಹೆಚ್ಚು ಇಂಧನ ವ್ಯಯಿಸಿ ಹೆಚ್ಚು ಮಾಲಿನ್ಯ ಹೊರಸೂಸುತ್ತಿವೆ. ಆದ್ದರಿಂದ ಇವುಗಳ ಬಳಕೆ ಕಮ್ಮಿ ಮಾಡಬೇಕು ಹಾಗೂ ಮಾಲಿನ್ಯ ತಡೆಗಟ್ಟಬೇಕು ಎಂದು ಪರಿಸರ ತೆರಿಗೆ ವಿಧಿಸಲಾಗುತ್ತಿದೆ.

ಹಳೆ ಡೀಸೆಲ್ ವಾಹನಗಳ ಮಾಲೀಕರು ಐದು ವರ್ಷಕ್ಕೆ 3,500 ರು ಕಟ್ಟಬೇಕು ಹಾಗೂ ಹಳೆ ಪೆಟ್ರೋಲ್ ವಾಹನವುಳ್ಳವರು 3,000 ರು ತೆರಬೇಕು. 15 ವರ್ಷಕ್ಕೂ ಹಳೆಯದಾದ ದ್ವಿಚಕ್ರ ವಾಹನವುಳ್ಳವರು 2 ಸಾವಿರ ರು ತೆರಿಗೆ ಕಟ್ಟಬೇಕಾಗುತ್ತದೆ.

ವಾಣಿಜ್ಯ ಉದ್ದೇಶಿತ ವಾಹನ ವಿಷಯಕ್ಕೆ ಬಂದರೆ, LCV ಮಾಲೀಕರು 2500 ರು, ಟ್ಯಾಕ್ಸಿ ಮಾಲೀಕರು 1,250 ರು, ಆಟೋರಿಕ್ಷಾದಾರರು 750 ರು ಐದು ವರ್ಷಕ್ಕೆ ಕಟ್ಟಬೇಕು. ಈ ಎಲ್ಲಾ ತೆರಿಗೆ ಹಣವನ್ನು ಪರಿಸರ ಸಂರಕ್ಷಣಾ ಕಾರ್ಯಕ್ರಮಗಳಿಗೆ ಬಳಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.

ಇದು ಇತರ ರಾಜ್ಯಗಳು ಮಾದರಿಯಾಗಬಲ್ಲದು ಎಂದರೆ ತಪ್ಪಾಗಲಾರದು. ಇದರ ಮೂಲ ಉದ್ದೇಶ ಹಳೆ ವಾಹನಗಳ ಬಳಕೆ ಕಮ್ಮಿಮಾಡುವುದು ಹಾಗೂ ಮಾಲಿನ್ಯ ತಡೆಗಟ್ಟುವುದು.

ಆದರೆ, ಇದರ ಜೊತೆಗೆ ಬದಲೀ ಇಂಧನ ಮೂಲಗಳಾದ ಎಲ್ ಪಿಜಿ ಹಾಗೂ ಸಿಎನ್ ಜಿ ಬಳಕೆಗೆ ಪ್ರೋತ್ಸಾಹ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಪರಿಸರ ಸಮತೋಲನ ಕಾಪಾಡಿ, ಮುಂದಿನ ಪೀಳಿಗೆಗೆ ಒಳ್ಳೆ ವಾತಾವರಣ ರೂಪಿಸುವುದು ಸರ್ಕಾರದಷ್ಟೇ ಜನಸಾಮಾನ್ಯರ ಆದ್ಯತೆಯಾಗಲಿ.

Most Read Articles

Kannada
Story first published: Monday, August 9, 2010, 10:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X