ವೋಕ್ಸ್ ವ್ಯಾಗನ್ ವೆಂಟೊ ಸೆಪ್ಟೆಂಬರ್ ನಲ್ಲಿ ರಸ್ತೆಗೆ

ಈ ಕಾರುಗಳ ದರ 6.99 ಲಕ್ಷ ರೂಪಾಯಿಗಳಿಂದ 9,23 ಲಕ್ಷ ರುಪಾಯಿಗಳವರೆಗೆ ಇರಲಿದೆ. ಈ 1.6 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳು ದೇಶಾದ್ಯಂತ ಎಲ್ಲಾ ವೋಕ್ಸ್ ವ್ಯಾಗನ್ ಮಾರಾಟಗಾರರ ಬಳಿ ದೊರೆಯಲಿದೆ ಎಂದು ಕಂಪೆನಿ ತಿಳಿಸಿದೆ.
ಪೆಟ್ರೋಲ್ ಮಾದರಿಯ ಕಾರುಗಳು 6.99 ಲಕ್ಷ ರೂಪಾಯಿಗಳಿಂದ ಹಾಗೂ ಡೀಸೆಲ್ ಮಾದರಿಗಳು 7.99 ಲಕ್ಷ ರೂಪಾಯಿಗಳಿಂದ ಆರಂಭಗೊಳ್ಳಲಿವೆ ಎಂದು ಕಂಪೆನಿ ತಿಳಿಸಿದೆ.
ಈ ಕಾರುಗಳನ್ನು ಭಾರತೀಯ ಮಾರುಕಟ್ಟೆ ಅವಶ್ಯಕತೆಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದ್ದು ಉತ್ತಮ ಗುಣಮಟ್ಟ ಹಾಗೂ ಸ್ಪರ್ಧಾತ್ಮಕ ದರ ವಿಧಿಸಲಾಗಿದೆ ಎಂದು ಕಂಪೆನಿಯ ಭಾರತದ ಮುಖ್ಯ ಅಧಿಕಾರಿ ನೀರಜ್ ಗಾರ್ಗ್ ಹೇಳಿದರು.
ಕಂಪೆನಿಯ ಮಹಾರಾಷ್ಟ್ರದ ಚಕಾನ್ ಘಟಕದಲ್ಲಿ ತಯಾರಾಗಲಿರುವ ಈ ಕಾರುಗಳು ಚಾಲಿಸುವ ಮತ್ತು ಸ್ವಯಂಚಾಲಿತ ಟ್ರಾನ್ಸ್ ಮಿಷನ್ ಹೊಂದಿವೆ. ಕಂಪೆನಿ ಕಳೆದ ಜುಲೈ 6 ರಂದು ವೆಂಟೊ ಕಾರನ್ನು ಪ್ರದರ್ಶಿಸಿತ್ತು.
ಯೂರೋಪ್ ನ ಅತೀ ದೊಡ್ಡ ಕಾರು ತಯಾರಕನಾಗಿರುವ ವೋಕ್ಸ್ ವ್ಯಾಗನ್ ಕಳೆದ ಫೆಬ್ರವರಿಯಲ್ಲಿ ಪೋಲೋ ಕಾರುಗಳನ್ನು 4.34ಲಕ್ಷ ರೂಪಾಯಿಗಳಿಂದ 6.7 ಲಕ್ಷ ರೂಪಾಯಿಗಳ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿತ್ತು.


Click it and Unblock the Notifications








