ಭಾರತದ ಮಾರುಕಟ್ಟೆಗೆ ಫ್ರಾನ್ಸ್ ನ ರೆನಾಲ್ಟ್ ಕಾರು

ಭಾರತದ ವಾಹನ ತಯಾರಕರ ಸಂಘದ ಸಮ್ಮೇಳನದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೆನಾಲ್ಟ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಧೀರ್ ರಾವ್ ಅವರು ಈ ವಿಷಯವನ್ನು ತಿಳಿಸಿ, ಕಾರಿನ ತಯಾರಿಕೆ ಇನ್ನೂ ಪ್ರಾರಂಭಿಕ ಹಂತದಲ್ಲಿದೆ ಎಂದರಲ್ಲದೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.
ಈ ಕಾರನ್ನು ಭಾರತದಂತೆಯೇ ಇರುವ ಇತರ ದೇಶಗಳಿಗೂ ರಫ್ತು ಮಾಡಲಾಗುವುದು ಎಂದೂ ಅವರು ಹೇಳಿದರು. ರೆನಾಲ್ಟ್ ಭಾರತದಲ್ಲಿ 2012-13ರಲ್ಲಿ ಐದು ಮಾದರಿಯ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದು, ಈ ಕಾರು ಇತರೆ ಕಾರುಳಿಗಿಂತ ವಿಭಿನ್ನವಾಗಿದೆ ಎಂದೂ ಅವರು ಹೇಳಿದರು.
ಕಂಪೆನಿ ಚೆನ್ನೈನ ನಿಸ್ಸಾನ್ ಕಾರು ತಯಾರಿಕಾ ಘಟಕದಲ್ಲಿ ಕಾರುಗಳ ತಯಾರಿಕೆಗೆ 4500 ಕೋಟಿ ರೂಪಯಿ ಹೂಡಿಕೆ ಮಾಡಲಿದ್ದು, ವಾರ್ಷಿಕ ನಾಲ್ಕು ಲಕ್ಷ ಕಾರುಗಳ ಗುರಿ ಹಾಕಿಕೊಂಡಿದೆ.


Click it and Unblock the Notifications








