ಹೊಸ ವಿನ್ಯಾಸದ ಹ್ಯುಂಡೈ ಐ 10 ಶೀಘ್ರದಲ್ಲೆ ರಸ್ತೆಗೆ

ಫೋರ್ಡ್ ಫಿಗೋ, ವೋಕ್ಸ್ ವ್ಯಾಗನ್ ಪೋಲೋ ಹಾಗೂ ನಿಸ್ಸಾನ್ ಮೈಕ್ರಾ ಮಾರುಕಟ್ಟೆಗೆ ಕಾಲಿಡುತ್ತಿರುವ ಬೆನ್ನಲ್ಲೇ ಮುಂಚೂಣಿಯಲ್ಲಿರುವ ಮಾರುತಿ ಹಾಗೂ ಹ್ಯುಂಡೈ ಕಂಪೆನಿಗಳು ತನ್ನ ಗ್ರಾಹಕರನ್ನು ಆಕರ್ಷಿಸಲು ನಾನಾ ತಂತ್ರಗಳನ್ನು ಹೆಣೆಯತೊಡಗಿವೆ.
ತಿಂಗಳಿಗೆ ಕನಿಷ್ಠ11,000 ಕಾರುಗಳನ್ನು ಮಾರಾಟ ಮಾಡುವ ಹ್ಯುಂಡೈತನ್ನ ಐ10 ಮಾದರಿಯಲ್ಲಿ 1.2 ಲೀ(variable valve timing) VTVT ಇಂಜಿನ್ ಅಳವಡಿಸಿ, ಹೆಚ್ಚಿನ ಸಾಮರ್ಥ್ಯ ಹಾಗೂ ಇಂಧನ ಕ್ಷಮತೆ ಒದಗಿಸುತ್ತಿದೆ. ಪ್ರತಿ ಲೀಟರ್ ಗೆ 18 ಕಿ.ಮೀ ಓಡುವ ಸಾಮರ್ಥ್ಯವಿದೆ ಎಂದಿದೆ.
ಕಾರಿನ ಮುಂಭಾಗ ಹಾಗೂ ಹಿಂಭಾಗದ ಆಕಾರದಲ್ಲಿ ಕೊಂಚ ಬದಲಾವಣೆ ಮಾಡಲಿದೆ. ಹೆಡ್ ಲ್ಯಾಂಪ್ ಹಾಊ ಟೇಲ್ ಲೈಟ್ಸ್ ಗಳಲ್ಲಿ ಬ್ಲಿಂಕರ್ ಅಳವಡಿಕೆ, ಕಾರಿನ ಸಂಪೂರ್ಣ ಬಣ್ಣ, ಡೋರ್ ಹಿಡಿಕೆ ಆಕಾರ, ಬಣ್ಣವನ್ನು ಇನ್ನಷ್ಟು ಆಕರ್ಷಕವಾಗಿಸಲಾಗಿದೆ. ಬಂಪರ್ ಗಳ ಗ್ರಿಲ್ ನಷ್ಟು ಸಾಕಷ್ಟು ಬದಲಾವಣೆ ತರಲಾಗಿದೆ. ಕ್ಯಾಬಿನ್ ನಲ್ಲಿ ಬ್ಲೂಟೂಥ್ ಸಂಪರ್ಕ, ಸ್ಟೇರಿಂಗ್ ವೀಲ್ಹ್ ಮ್ಯೂಸಿಕ್ ನಿಯಂತ್ರಣ ಅಳವಡಿಸಲಾಗಿದೆ. ಸದ್ಯ ಚಾಲ್ತಿಯಲ್ಲಿರುವ 1.2 ಲೀ ನ Kappa ಇಂಜಿನ್ ಅನ್ನು ಬದಲಿಸಲಾಗುವುದು ಎಂದು ಕಂಪೆನಿ ಹೇಳಿದೆ.
2007 ರ ಅಕ್ಟೋಬರ್ ನಲ್ಲಿ ಮಾರುಕಟ್ಟೆ ಪ್ರವೇಶಿಸಿದ ಹ್ಯುಂಡೈ 7,19,068 ಐ10 ಕಾರುಗಳನ್ನು ಮಾರಾಟ ಮಾಡಿದೆ. ಇದರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 3.61ಲಕ್ಷ ಹಾಗೂ 3.58 ಲಕ್ಷ ಕಾರುಗಳು ಸಾಗರೋತ್ತರಮಾರುಕಟ್ಟೆಯಲ್ಲಿ ಮಾರಿದೆ. ಮಾರುತಿ ಆಲ್ಟೋ, ವಾಗನ್ ಆರ್, ಸ್ವಿಫ್ಟ್ ನಂತರದ ಸ್ಥಾನದಲ್ಲಿ ಹ್ಯುಂಡೈಐ10ಕಾಣಿಸಿಕೊಂಡಿದೆ.


Click it and Unblock the Notifications








