ಅಕ್ಟೋಬರ್ ನಲ್ಲಿ ಟಾಟಾ ಆರಿಯಾ ಮಾರುಕಟ್ಟೆಗೆ

10 ಲಕ್ಷರು ಗಳಲ್ಲಿ ಸಿಗಲಿರುವ ವಾಹನ, ಗ್ರಾಹಕ ಸ್ನೇಹಿಯಾಗಿ ಜನಪ್ರಿಯತೆ ಗಳಿಸಲಿದೆ ಎಂಬ ನಂಬಿಕೆಯನ್ನು ಟಾಟಾ ಸಂಸ್ಥೆ ವ್ಯಕ್ತಪಡಿಸಿದೆ. ದೆಹಲಿಯಲ್ಲಿ ನಡೆದ ಆಟೋ ಎಕ್ಸ್ ಪೋ 2010ರಲ್ಲಿ ಜನಮೆಚ್ಚುಗೆ ಗಳಿಸಿದ್ದ ವಾಹನಗಳಲ್ಲಿ ಆರಿಯಾ ಕೂಡಾ ಒಂದು.
2.2 ಲೀ ರೈಲ್ ಡೀಸೆಲ್ ಇಂಜಿನ್ ಸಾಮರ್ಥ್ಯ ಇರುವ ಆರಿಯಾ ಎಲ್ಲಾ ಬಗೆಯ ಕಠಿಣ ರಸ್ತೆಗಳಲ್ಲಿ ನಡೆದ ಟೆಸ್ಟ್ ಡ್ರೈ ನಲ್ಲಿ ಪಾಸ್ ಆಗಿ ಸೈ ಎನಿಸಿಕೊಂಡಿದೆ. ಮಾರುಕಟ್ಟೆಯಲ್ಲಿರುವ ಕ್ರೀಡಾ ಉಪಯುಕ್ತ ವಾಹನಗಳಿಗೂ ಆರಿಯಾ ಸವಾಲೊಡ್ಡಬಲ್ಲದು. ಸುರಕ್ಷತೆಗೆ ಒತ್ತುಕೊಟ್ಟಿರುವ ಟಾಟಾ, ಭಾರತೀಯ ವಾಹನಗಳಲ್ಲಿ ಪ್ರಪ್ರಥಮಬಾರಿಗೆ 6 ಏರ್ ಬ್ಯಾಗ್ ಗಳನ್ನು ಅಳವಡಿಸಿದೆ. ಏಲೆಕ್ಟ್ರಾನಿಕ್ ಸ್ಟಬಿಲಿಟಿ ಪೋಗ್ರಾಂ ಕೂಡಾ ಇದೆ.
ದೀಪಾವಳಿ ಹಬ್ಬದ ಸೀಸನ್ ನಲ್ಲಿ ಗ್ರಾಹಕರಿಗೆ ಆರಿಯಾ ಪರಿಚಯಿಸುತ್ತಿರುವುದಕ್ಕೆ ಸಂತಸವಾಗುತ್ತದೆ. ಇನ್ನೋವ, ಸ್ಕಾರ್ಪಿಯೋ, ಬೊಲೆರೊ ಹಾಗೂ ಜೈಲೊ ವಾಹನಗಳಿಗೆ ಉತ್ತಮ ಸ್ಪರ್ಧಿ ನೀಡುವ ನಿರೀಕ್ಷೆಯಿದೆ ಎಂದು ಟಾಟಾ ಸಂಸ್ಥೆ ಹೇಳಿದೆ.


Click it and Unblock the Notifications








