ಸ್ಪೀಡ್, ಸ್ಟೈಲ್, ಲಕ್ಸುರಿಗೆ ಮತ್ತೊಂದು ಹೆಸರು ಆಡಿ

ಹೊಚ್ಚ ಹೊಸ ಆಡಿ Q7ನಲ್ಲಿ A6 ನಲ್ಲಿದ್ದಂತೆಯೇ 3.0 ಲೀ ಪೆಟ್ರೋಲ್ ಇಂಜಿನ್ ಇದೆ. ಸುಮಾರು 333bhp ಶಕ್ತಿ ಸಾಮರ್ಥ್ಯ ಹೊಂದಿದೆ. 0 ಇಂದ 100 ಕಿ.ಮೀ/ಗಂಟೆ ವೇಗವನ್ನು ಕೇವಲ 6.9 ಸೆಕೆಂಡುಗಳಲ್ಲಿ ಕ್ರಮಿಸಬಲ್ಲುದು. ಪ್ರತಿಗಂಟೆಗೆ 245ಕಿ.ಮೀ ಟಾಪ್ ಸ್ಪೀಡ್ ನಲ್ಲಿ ಚಲಿಸಬಲ್ಲುದು.
ಅತಿ ಕಡಿಮೆ CO2 ರೇಟಿಂಗ್ ಹೊಂದಿದ್ದು, ನವೀನ ತಂತ್ರಜ್ಞಾನವುಳ್ಳ ಆಡಿ Q7ನ 3.0 ಲೀ ಸಾಮರ್ಥ್ಯದ ಪೆಟ್ರೋಲ್ ಮಾದರಿ ಹಾಗೂ 4.2 ಲೀ ಇಂಜಿನ್ ಸಾಮರ್ಥ್ಯದ ಡೀಸೆಲ್ ಆವೃತ್ತಿ ಯ ಮೂಲಕ ಐಷಾರಾಮಿ ಕ್ರೀಡಾ ಉಪಯುಕ್ತ ವಾಹನಗಳ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಲು ಆಡಿ ಸಜ್ಜಾಗಿದೆ.


Click it and Unblock the Notifications








