ನಿಸ್ಸಾನ್ ಎಲೆಕ್ಟ್ರಿಕ್ ಲೀಫ್ ಕಾರಿನ ವೇಗ 99mph ಅಷ್ಟೇ!

73 ಮೈಲಿ/ಪ್ರತಿ ಗಂಟೆ ವೇಗಮಿತಿ ನಿರ್ಬಂಧವನ್ನು ಅಮೆರಿಕದ ಪರಿಸರ ಸಂರಕ್ಷಣಾ ಏಜೆನ್ಸಿ ಹೇರಿದ್ದರೂ, ನಗರ ಮಿತಿಯಲ್ಲಿ (106 mph) ಹಾಗೂ ಹೆದ್ದಾರಿಗಳಲ್ಲಿ (92mph) ಓಡುವ ಸಾಮರ್ಥ್ಯದೊಂದಿಗೆ ನಿಸ್ಸಾನ್ ಲೀಫ್ ಯುಎಸ್ ಆಟೋ ಮಾರುಕಟ್ಟೆ ಪ್ರವೇಶಿಸಲಿದೆ.
ನಿಸ್ಸಾನ್ ಎಲೆಕ್ಟ್ರಿಕ್ 2011 ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಹೊರಬರುವ ಸಾಧ್ಯತೆಯಿದೆ ಹಾಗೂ ಸಂಪೂರ್ಣ ಎಲೆಕ್ಟ್ರಿಕ್ ಸಾಮರ್ಥ್ಯದೊಂದಿಗೆ ಪರಿಸರ ಸಂರಕ್ಷಣೆ ಸಂದೇಶವನ್ನು ಹೊತ್ತು ತರಲಿದೆ. ಅಲ್ಲದೆ, ಪರಿಸರ ಸಂರಕ್ಷಣಾ ಸಮಿತಿ(Environmental Protection Agency) ಶ್ರೇಯಾಂಕವನ್ನು ಗ್ರಾಹಕರಿಗೆ ಧೈರ್ಯವಾಗಿ ಪ್ರದರ್ಶಿಸುತ್ತಿರುವ ಮೊದಲ ವಾಹನ ಎನಿಸಲಿದೆ.
ನಿಸ್ಸಾನ್ ನ ಕಾರಿಗೆ ಪೈಪೋಟಿ ಎಂಬಂತೆ ಜನರಲ್ ಮೋಟರ್ಸ್ ಕೂಡಾ ಎಲೆಕ್ಟ್ರಿಕ್ ಮಾದರಿಯ ಶೆವರ್ಲೆ ವೋಲ್ಟ್ ಕಾರನ್ನು ಡಿಸೆಂಬರ್ ನಲ್ಲಿ ಹೊರ ತರಲಿದೆ. ಫೋರ್ಡ್ ಕಂಪೆನಿ ಕೂಡಾ 2011 ರಲ್ಲಿ ಎಲೆಕ್ಟ್ರಿಕ್ ಆವೃತ್ತಿಯ ಸಣ್ಣಕಾರನ್ನು ಪರಿಚಯಿಸುವುದಾಗಿ ಘೋಷಿಸಿದೆ.
ನಿಸ್ಸಾನ್ ಗೆ EPA ನೀಡಿರುವ ಲೇಬಲ್ ಪ್ರಕಾರ, 7 ಗಂಟೆಗಳ ಕಾಲ(240-volt charge) ಕಾರಿನ ಬ್ಯಾಟರಿ ಚಾರ್ಚ್ ಮಾಡಬೇಕು. ಇದರ ವೆಚ್ಚ $31780. ಸರ್ಕಾರಿ ಸಬ್ಸಿಡಿಯಿಂದ $7500 ಕಮ್ಮಿಯಾಗಲಿದೆ. ಕ್ಯಾಲಿಫೋರ್ನಿಯಾದಲ್ಲಿ $5000 ಕಮ್ಮಿ ಬೀಳಲಿದ್ದು, ಉತ್ತಮ ಮಾರಾಟ ದಾಖಲೆ ಹೊಂದಿರುವ ಟೊಯೋಟಾ ಪ್ರೈಯಸ್ ಕಾರಿಗೆ ನಿಸ್ಸಾನ್ ಲೀಫ್ ತೀವ್ರ ಪೈಪೋಟಿ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಒರೆಗಾನ್, ವಾಷಿಂಗ್ಟನ್, ಆರಿಜೋನಾ, ಕ್ಯಾಲಿಫೋರ್ನಿಯಾ ಹಾಗೂ ಟೆನ್ನೆಸ್ಸಿ ಈ ಐದು ರಾಜ್ಯಗಳಲ್ಲಿ ಮೊದಲಿಗೆ ನಿಸ್ಸಾನ್ ಎಲೆಕ್ಟ್ರಿಕ್ ಕಾರು ಓಡಲಿದೆ. ನಂತರ ಟೆಕ್ಸಾಸ್ ಹಾಗೂ ಹವಾಯಿ ಪ್ರಾಂತ್ಯಗಳಲ್ಲಿ ಕಾಣಿಸಲಿದೆ. 2011ರ ಕೊನೆ ತ್ರೈಮಾಸಿಕ ಅವಧಿಯ ವೇಳೆಗೆ ಯುಎಸ್ ನ ಎಲ್ಲೆಡೆ ನಿಸ್ಸಾನ್ ಕಾರು ಸಂಚರಿಸಲಿದೆ.


Click it and Unblock the Notifications







