ಐಷಾರಾಮಿ ಕಾರು ಮಾರುಕಟ್ಟೆಗೆ ಇಳಿದ ವೋಲ್ವೋ

ನವದೆಹಲಿ, ಡಿ.1: ಭಾರತದಲ್ಲಿನ ವೋಲ್ವೋ ಘಟಕ ಹೊಸ ವಿನ್ಯಾಸಯುಕ್ತ ಐಷಾರಾಮಿ ವಾಹನ Volvo SUV XC60(ಕ್ರೀಡಾ ಉಪಯುಕ್ತ ವಾಹನ) ಮಾರುಕಟ್ಟೆಗೆ ಪರಿಚಯಿಸಿದೆ. D5 Twin-Turbo ಡೀಸೆಲ್ ಇಂಜಿನ್ ಅಳವಡಿಸಿರುವುದರಿಂದ ಹೆಚ್ಚಿನ ಸಾಮರ್ಥ್ಯದೊಂದಿಗೆ ರಸ್ತೆಗಿಳಿಯಲಿದೆ ಎಂದು ವೋಲ್ವೋ ಸಂಸ್ಥೆ ಹೇಳಿದೆ.

ಸುರಕ್ಷಿತೆಗಾಗಿ ಆಟೋ ಬ್ರೇಕ್ ಅಸಿಸ್ಟ್, ಆಲ್ ವ್ಹೀಲ್ ಡ್ರೈವ್, DSTC,RSC ಮುಂತಾದ ಸೌಲಭ್ಯದೊಂದಿಗೆ ಉತ್ತಮ ಗುಣಮಟ್ಟ, ಹೆಚ್ಚಿನ ತಾಂತ್ರಿಕತೆ, ಸುರಕ್ಷಣೆ, ಸ್ಕಾಂಡಿನೇವಿಯನ್ ವಿನ್ಯಾಸಯುಕ್ತ ವೋಲ್ವೋ XC60 ವಾಹನವನ್ನು ಮೊದಲ ಬಾರಿಗೆ ನೋಡಿದೊಡನೆ ಮೋಹ ಉಂಟಾಗುತ್ತದೆ ಎಂದು ವೋಲ್ವೋ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಪೌಲ್ ಡಿ ವೊಯ್ಸ್ ಹೇಳುತ್ತಾರೆ.

ವೊಲ್ವೋXC60 ದೆಹಲಿ ಎಕ್ಸ್ ಷೋರೂಂ ಬೆಲೆ ಸುಮಾರು 39.5 ಲಕ್ಷ ರುನಷ್ಟಿದೆ. ಮುಂಬೈನಲ್ಲಿ 41.1 ಲಕ್ಷ ರು ದಾಟಬಹುದು. ದೇಶದೆಲ್ಲೆಡೆ ಇರುವ ವೋಲ್ವೋ ಡೀಲರ್ ಷೋ ರೂಂಗಳಲ್ಲಿ ವೊಲ್ವೋXC60 ವಾಹನ ಲಭ್ಯವಿರುತ್ತದೆ.

ಜಾಗತಿಕ ಮಟ್ಟದಲ್ಲಿ ಹಲವಾರು ಆಟೋ ಎಕ್ಸ್ ಪೋ ಮೇಳಗಳಲ್ಲಿ ಪ್ರದರ್ಶಿತವಾಗಿರುವ Volvo XC60 ವಾಹನ ವಿವಿಧ ದೇಶಗಳಿಂದ ಸುಮಾರು 22 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಆಸ್ಟ್ರೇಲಿಯಾ 40 ಸಾವಿರ ಡಾಲರ್ ಗೂ ಅಧಿಕ ಮೊತ್ತದ ನೀಡಿ ಶ್ರೇಷ್ಠ SUV ಎಂದು ಹೆಸರಿಸಿದೆ. ಸುರಕ್ಷಿತೆಗಾಗಿ ಫ್ರಾನ್ಸ್, ತಂತ್ರಜ್ಞಾನಕ್ಕಾಗಿ ಪೋರ್ಚುಗಲ್, ಅಮೆರಿಕಾ, ಜರ್ಮನಿಗಳಲ್ಲಿ ಬಹುಮಾನ ಗಳಿಸಿದೆ. ಇದಲ್ಲದೆ ಯುಕೆ, ರಷ್ಯಾ, ಮಲೇಷಿಯಾದಲ್ಲೂ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸಿದೆ.

Twin-Turbo ಹಾಗೂ Peizo high pressure ತಂತ್ರಜ್ಞಾನ, 5 ಸಿಲೆಂಡರ್ ಇಂಜಿನ್ ನೊಂದಿಗೆ ಹೆಚ್ಚಿನ ಸಾಮರ್ಥ್ಯ, ಪ್ರತಿ ಲೀಟರಿಗೆ 13.8 ಕಿ.ಮೀ ಮೈಲೇಜ್. ಡಾಲ್ಬಿ ಪ್ರೊ ಲಾಜಿಕ್ , ಯುಎಸ್ ಬಿ ಹಾಗೂ ಐಪೊಡ್ ಮೂಸ್ ಇಂಟರ್ ಫೇಸ್ ಹಾಗೂ ಬ್ಲೂ ಟೂಥ್ ಹ್ಯಾಂಡ್ ಫ್ರೀ ವ್ಯವಸ್ಥೆ ಕೂಡ ಇದೆ. ಜೊತೆಗೆ ಚಾಲಕನ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. Suv ಮಾರುಕಟ್ಟೆಯಲ್ಲಿ ವೋಲ್ವೋ ಬಹುಕಾಲ ಉಳಿಯಬಲ್ಲುದು ಎಂಬುದು ಆಟೋಮೊಬೈಲ್ ಪಂಡಿತರ ಅಭಿಪ್ರಾಯ.

More from DriveSpark

Article Published On: Wednesday, December 1, 2010, 18:15 [IST]
English summary
The Indian wing of Volvo has just unwrapped its luxury SUV Volvo XC60 claiming to offer the latest state-of-art technology, unrivaled blend of style and power. The cost of this Volvo ranges is Rs39.5 lakhs in ex-showroom Delhi, Rs41.41 lakhs in ex-showroom Mumbai which will be available from the Volvo dealers all over the nation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+