ಟೊಯೋಟಾ ವಿಟ್ಜ್ ಕಾರು ಮೈಲೇಜ್ ಚಾಲೆಂಜ್

ವಿಜ್ ಗೆ ಪ್ರತಿಸ್ಪರ್ಧಿಯಾಗಿರುವ ಮಾರ್ಚ್ ಕೂಡಾ ಪ್ರತಿ ಲೀಟರ್ ಗೆ 26 ಕಿ.ಮೀ ಹಾಗೂ ಫಿಟ್ ಕೂಡಾ 24.5 ಕಿ.ಮೀ ನೀಡುತ್ತಿವೆ. ಜಪಾನ್ ನಲ್ಲಿ ವಿಜ್ ಬೆಲೆ ಸುಮಾರು 1.06 ಮಿಲಿಯನ್ ಯೆನ್ ಆಗಿದೆ. ಪ್ರತಿ ತಿಂಗಳಿಗೆ ಸುಮಾರು 10 ಸಾವಿರ ವಾಹನಗಳನ್ನು ಮಾರಾಟ ದಾಖಲೆ ಹೊಂದಿದೆ. ಆದರೂ ಹೈಬ್ರಿಡ್ ಮಾದರಿ ಪ್ರೈರಸ್ ಮಾರಾಟದಲ್ಲಿ ಇಳಿಮುಖವಾದ್ದರಿಂದ ಸೆಪ್ಟೆಂಬರ್ ತಿಂಗಳವರೆಗೂ ಮಾರಾಟದಲ್ಲಿ ಶೇ.17 ರಷ್ಟು ಇಳಿಮುಖ ಕಂಡಿತ್ತು.
ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಆವೃತ್ತಿಗಳಿಗೆ ಸರ್ಕಾರದಿಂದ ಸಬ್ಸಿಡಿ ಲಾಭ ದೊರೆಯುತ್ತಿದ್ದರೂ, ನವೆಂಬರ್ ತಿಂಗಳಲ್ಲಿ ಟೊಯೋಟಾ ಮಾರಾಟದಲ್ಲಿ ಶೇ.35ರಷ್ಟು ಇಳಿಕೆಯಾಗಿದೆ. 1999ರಿಂದ ಮಾರುಕಟ್ಟೆಯಲ್ಲಿರುವ ವಿಜ್ ಒಟ್ಟಾರೆ 3.5ಮಿಲಿಯನ್ ಕಾರುಗಳು ಮಾರಾಟವಾಗಿದ್ದು, 70ಕ್ಕೂ ಅಧಿಕ ದೇಶಗಳ ರಸ್ತೆಗಳನ್ನು ಅಲಂಕರಿಸಿದೆ. ಟೊಯೋಟಾ ಯಾರಿಸ್ ಹಾಗೂ ಎಕೋ ಎಂಬ ಹೆಸರಿನಲ್ಲೂ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿದೆ.[ಟೊಯೋಟಾ]


Click it and Unblock the Notifications








