ಗ್ರಾಹಕರೇ ಗಮನಿಸಿ :ವಾಹನ ಸಾಲ ಬಡ್ಡಿ ದರ ಏರಿಕೆ

Car Loan set to go up
ನವದೆಹಲಿ, ಜು.5:ರಿಸರ್ವ್ ಬ್ಯಾಂಕು ಇತ್ತೀಚೆಗೆ ರೆಪೊ , ರಿವರ್ಸ್ ರೆಪೊ ದರಗಳನ್ನು 25 ಮೂಲ ಅಂಶಗಳಷ್ಟು ಏರಿಸಿದ ಬೆನ್ನಲ್ಲೇ ದೇಶದ ವಾಹನ ಸಾಲ ಉದ್ಯಮ ತನ್ನ ಬಡ್ಡಿ ದರಗಳನ್ನು 25 ರಿಂದ 50 ಮೂಲ ಅಂಶಗಳಷ್ಟು ಏರಿಸಲು ನಿರ್ಧರಿಸಿದೆ.

ದೇಶದಲ್ಲಿ ಸುಮಾರು ಶೇ.70 ರಷ್ಟು ವಾಹನಗಳು ಸಾಲದಡಿಯಲ್ಲಿ ಸಿಲುಕಿವೆ. ಕಾರುಗಳನ್ನು ಖರೀದಿಸಬಯಸುವ ಗ್ರಾಹಕರು 4 ಲಕ್ಷ ರೂಪಾಯಿಗಳ ಸಾಲ ಪಡೆದರೆ ತಮ್ಮ 36 ಮಾಸಿಕ ಕಂತಿ(EMI)ನಲ್ಲಿ ಪ್ರತಿ ತಿಂಗಳು 100 ರುಪಾಯಿಗಳನ್ನು ಹೆಚ್ಚಾಗಿ ಪಾವತಿಸಬೆಕಾಗುತ್ತದೆ.

ಈ ಹಣಕಾಸು ವರ್ಷದಲ್ಲಿ ಇದು ಎರಡನೆ ಬಾರಿಗೆ ಏರಿಕೆ ಮಾಡಲಾಗುತ್ತಿದ್ದು ಕಳೆದ ಏಪ್ರಿಲ್ ನಲ್ಲಿ ಬ್ಯಾಂಕುಗಳು ಶೇ 0.25 ರಷ್ಟು ಬಡ್ಡಿ ದರವನ್ನು ಹೆಚ್ಚಿಸಿದ್ದು ಈಗ ಬ್ಯಾಂಕ್ ಗಳ ವಾಹನ ಸಾಲ ದರ ಶೇ 9.5 ರಿಂದ ಶೇ 12.5 ರಷ್ಟಿದೆ. ದೇಶದ ಶೇ 70 ರಷ್ಟು ಕಾರುಗಳು 36 ತಿಂಗಳ ಅವಧಿಯ ಸಾಲವನ್ನು ಪಡೆದಿವೆ.

ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ದೇಶದ ಪ್ರಯಾಣಿಕರ ವಾಹನ ಮಾರಾಟದಲ್ಲಿ ಜೂನ್ ತಿಂಗಳಿನಲ್ಲಿ ಶೇ 26.8 ರಷ್ಟು ಏರಿಕೆ ದಾಖಲಾಗಿದ್ದು ಒಟ್ಟು 1,76,920 ವಾಹನಗಳು ಮಾರಾಟವಾಗಿದ್ದರೆ ೨೦೦೯ ರ ಜೂನ್ ನಲ್ಲಿ 1,39,49೦ ವಾಹನಗಳು ಮಾರಾಟವಾಗಿವೆ.

ಪ್ರಮುಖ ವಾಹನ ಹಣಕಾಸು ಕಂಪೆನಿ ಕೊಟಕ್ ಮಹೀಂದ್ರ ಪ್ರೈಮ್ ನ ಮುಖ್ಯ ಕಾರ್ಯ ನಿರ್ವಾಹಕ ಅದಿಕಾರಿ ಸಮಿತ್ ಬಾಲಿ ಪ್ರಕಾರ ಮುಂದಿನ ವಾರ ಕಂಪೆನಿ 25 ಮೂಲ ಅಂಶಗಳಷ್ಟು ಬಡ್ಡಿ ದರ ಹೆಚ್ಚಿಸಲಿದೆ ಆಕ್ಸಿಸ್ ಬ್ಯಾಂಕಿನ ರೀಟೇಲ್ ವಿಭಾಗದ ಅಧ್ಯಕ್ಷ ಮಂಜು ಶ್ರೀ ವಾಸ್ತವ ಪ್ರಕಾರ ಬ್ಯಾಂಕು ಮುಂದಿನ ವಾರ ಬಡ್ಡಿ ದರಗಳನ್ನು ಹೆಚ್ಚಿಸಲಿದೆ.

ಎರಡು ತಿಂಗಳ ಹಿಂದಷ್ಟೇ 25 ರಿಂದ 50 ಮೂಲ ಅಂಶಗಳಷ್ಟು ಬಡ್ಡಿ ದರವನ್ನು ಹೆಚ್ಚಿಸಿದೆ. ಮಾರುಕಟ್ಟೆ ಮೂಲಗಳ ಪ್ರಕಾರ ವಾಹನ ಸಾಲ ಬಡ್ಡಿ ದರ ಹೆಚ್ಚಿದರೂ ಗ್ರಾಹಕರ ಕಾರು ಕೊಳ್ಳುವ ನಿರ್ಧಾರದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುವುದಿಲ್ಲ.

ಏಕೆಂದರೆ ವಾಹನ ಮಾರಾಟ ಈಗ ಶೇ30 ರಷ್ಟು ಏರಿಕೆ ದಾಖಲಿಸತ್ತಿದ್ದು ವಾರ್ಷಿಕ ಶೇ 15-18 ಬೆಳವಣಿಗೆ ದಾಖಲಿಸಿದರೂ ಮಾರುಕಟ್ಟೆಗೆ ಉತ್ತಮವೇ ಆಗಿದೆ.

Article Published On: Monday, July 5, 2010, 17:21 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+