ಕಾರು ಸಾಲ ಪಡೆಯಲು ಐದೇ ಸಲಹೆ, ಗುಡ್ ಲಕ್

ವಿವಿಧ ಸ್ಕೀಮ್ ಗಳ ತುಲನೆ: ವಿವಿಧ ಬ್ಯಾಂಕ್ ಗಳ ವೆಬ್ ಸೈಟ್ ಗೆ ಹೋದರೆ ಅವುಗಳು ನೀಡುವ ಸಾಲದ ಕುರಿತು ಪೂರ್ಣ ಮಾಹಿತಿ ದೊರಕುತ್ತವೆ. ಒಂದು ಬ್ಯಾಂಕ್ ನೀಡುವ ಬಡ್ಡಿದರ ಆಫರ್ ಗಳನ್ನು ಇತರ ಬ್ಯಾಂಕ್ ಗಳೊಂದಿಗೆ ಕಂಪೇರ್ ಮಾಡಿ ನೋಡಬಹುದು.
ಕೆಲವೊಂದು ಡೀಲರ್ ಗಳು ಬ್ಯಾಂಕ್ ಗಳೊಂದಿಗೆ ಮೈತ್ರಿ ಮಾಡಿಕೊಂಡಿರುತ್ತಾರೆ. ಅವರಲ್ಲಿಯೂ ಸಾಲದ ಆಫರ್ ಕುರಿತು ಚರ್ಚಿಸಬಹುದು. ಈ ರೀತಿ ಸಾಕಷ್ಟು ವಿಚಾರಿಸಿ ಸಾಲ ಪಡೆಯುವುದರಿಂದ ಬಡ್ಡಿ ದರ ಮತ್ತು ಇತರ ಶುಲ್ಕಗಳಲ್ಲಿ ಲಾಭ ನಿಮ್ಮದಾಗಬಹುದು.
ಡೌನ್ ಪೇಮೆಂಟ್ ಜಾಸ್ತಿ ಮಾಡಿ: ಡೌನ್ ಪೇಮೆಂಟ್ ಹೆಚ್ಚು ಪಾವತಿಸಲು ಪ್ರಯತ್ನಿಸಿ. ಇದರಿಂದ ಮುಂದಿನ ಕಂತುಗಳಲ್ಲಿ ಕಡಿಮೆ ಬಡ್ಡಿದರ ಪಾವತಿಸಲು ಸಾಧ್ಯವಾಗುತ್ತದೆ.
ಲೋನ್ ಲಾಭಗಳನ್ನು ಹೋಲಿಕೆ ಮಾಡಿನೋಡಿ: ವಿವಿಧ ಬ್ಯಾಂಕ್ ಗಳ ಲೋನ್ ಪೀಚರ್ ಗಳನ್ನು ಹೋಲಿಕೆ ಮಾಡಿನೋಡಿ. ಆದಷ್ಟು ಕಡಿಮೆ ಬಡ್ಡಿದರ ವಿಧಿಸಿರುವ ಸಾಲಗಳನ್ನು ಆಯ್ಕೆ ಮಾಡಿರಿ.
ಹೆಚ್ಚುವರಿ ಶುಲ್ಕಗಳನ್ನು ಗಮನಿಸಿರಿ: ನಿಮಗೆ ತಿಳಿಯದಂತೆ ವಾಹನ ಸಾಲದಲ್ಲಿ ಇತರೆ ಹೆಚ್ಚುವರಿ ಶುಲ್ಕಗಳಿಲ್ಲವೆಂದು ಖಾತ್ರಿ ಪಡಿಸಿರಿ. ಅಂದ್ರೆ ಶೀಘ್ರ ಮರುಪಾವತಿ ಶುಲ್ಕ, ಸಿಬ್ಬಂದಿ ಶುಲ್ಕ ಅಥವಾ ಸಂಸ್ಥೆಯ ಖರ್ಚು, ವಾರ್ಷಿಕ ಶುಲ್ಕ ಅಥವಾ ಪಾವತಿಬಾಕಿಗೆ ವಿಧಿಸಿರುವ ಹೆಚ್ಚುವರಿ ಶುಲ್ಕಗಳು ಎಲ್ಲವನ್ನೂ ಪರಿಶೀಲಿಸಿರಿ. ಇಂತಹ ಶುಲ್ಕಗಳು ನಿಮ್ಮ ಜೇಬಿಗೆ ಕತ್ತರಿ ಹಾಕುತ್ತವೆ.
ವಿಮೆಯ ಮೂಲಕ ರಿಸ್ಕ್ ಕಡಿಮೆ ಮಾಡಿ: ಸಾಲ ಮಾಡುವುದರೊಂದಿಗೆ ಕಾರಿಗೊಂದು ಸೂಕ್ತ ವಿಮಾ ಸೌಲಭ್ಯ ಕಲ್ಪಿಸಿ. ಇದರಿಂದ ಅನಿರೀಕ್ಷಿತ ಅವಘಡ ನಡೆದರೆ ಆರ್ಥಿಕ ಭದ್ರತೆ ದೊರಕುತ್ತದೆ.
ವಾಹನ ಸಾಲ ಪಡೆಯುವ ಮುನ್ನ ಮೇಲಿನ ಸಾಮಾನ್ಯ ಐದು ಸಲಹೆಗಳನ್ನು ನೆನಪಿನಲ್ಲಿಟ್ಟುಕೊಳ್ಳಿ. ಇದರಿಂದ ನಿಮಗೆ ಬೆಸ್ಟ್ ಡೀಲ್ ಮಾಡಲು ಸಾಧ್ಯವಿದೆ. ಬೆಸ್ಟ್ ಆಫ್ ಲಕ್..


Click it and Unblock the Notifications








