ಮಳೆಗಾಲದಲ್ಲಿ ಕಾರಿನ ಎಲೆಕ್ಟ್ರಿಕ್‌ ವಸ್ತುಗಳನ್ನು ಹೀಗೆ ಜೋಪಾನ ಮಾಡಿ: ಟಾಪ್‌ ಫೈವ್‌ ಟಿಪ್ಸ್‌

ನಿಮ್ಮ ಕಾರಿನ ಎಲೆಕ್ಟ್ರಿಕಲ್‌ ವ್ಯವಸ್ಥೆಯು (Electrical System) ಸರಿಯಾಗಿದ್ದರೆ ಮಾತ್ರ ನಿಮ್ಮ ಕಾರಿನ ನಾನಾ ರೀತಿಯ ಕೆಲಸಗಳು ಸುಗಮವಾಗಿ ನಡೆಯಲು ಸಾಧ್ಯ. ಅದಕ್ಕಾಗಿ ಎಲೆಕ್ಟ್ರಿಕ್‌ ವ್ಯವಸ್ಥೆಗಳನ್ನು ಸರಿಯಾಗಿ ನೋಡಿಕೊಳ್ಳುವುದು ಬಹುಮುಖ್ಯ. ಮಳೆಗಾಲದಲ್ಲಿ ಒಮ್ಮೊಮ್ಮೆ ನೀರಿನಿಂದಾಗಿ ಅವು ಕೆಟ್ಟು ಹೋಗುವ ಸಾಧ್ಯತೆ ಇರುತ್ತದೆ. ಅದನ್ನು ತಡೆಯಲು ಈ ಕೆಳಗಿನ ಅಂಶಗಳನ್ನು ಗಮನಿಸಿ.

ಆಳ ನೀರಿಗೆ ಕಾರನ್ನು ಇಳಿಸಬೇಡಿ: ನಿಮ್ಮ ಕಾರನ್ನು ನೀರಿನ ಆಳಕ್ಕೆ ಇಳಿಸುವುದರಿಂದ ಕಾರಿನೊಳಗೆ ನೀರು ಬರುವ ಸಾಧ್ಯತೆಗಳಿರುತ್ತದೆ. ಇದರಿಂದ ಕಾರಿನ ಎಲೆಕ್ಟ್ರಿಕಲ್‌ ಭಾಗಗಳಿಗೆ ನೀರಿಗೆ ಖಂಡಿತಾ ಹಾಳಾಗುತ್ತದೆ. ಒಂದೊಮ್ಮೆ ನೀವು ಬರುವ ದಾರಿಯಲ್ಲಿ ನೀರಿನ ಮಟ್ಟ ಜಾಸ್ತಿ ಇದ್ದರೆ ಅದು ಕಡಿಮೆ ಆಗುವವರೆಗೆ ಕಾದು ನಂತರ ಬನ್ನಿ.

Prevent Water Damage To Your Cars

ಕಾರಿನ ಮೇಲ್ಛಾವಣಿ ಆಗಾಗ ಪರೀಕ್ಷಿಸಿ: ಮಳೆಗಾಲದಲ್ಲಿ ನಿಮ್ಮ ಕಾರಿನ ಮೇಲ್ಛಾವಣಿ ಆಗಾಗ ಪರೀಕ್ಷಿಸಬೇಕಾಗುತ್ತದೆ. ಅದರಲ್ಲೂ ಈಗಿನ ಹಲವು ಕಾರುಗಳಲ್ಲಿ ಸನ್‌ರೂಫ್‌ ಇರುವುದರಿಂದ ಮಳೆಗಾಲದಲ್ಲಿ ಕಾರನ್ನು ಹೊರಗೆ ನಿಲ್ಲಿಸುವುದಕ್ಕೂ ಮುನ್ನ ಸನ್‌ರೂಫ್‌ ಮತ್ತು ಕಿಟಕಿ, ಇವೆರಡೂ ಸರಿಯಾಗಿ ಮುಚ್ಚಿದೆಯೇ ಎಂದು ಪರೀಕ್ಷಿಸುವುದು ಉತ್ತಮ.

ಸುರಕ್ಷಿತವಾದ ಸ್ಥಳದಲ್ಲಿ ಪಾರ್ಕ್‌ ಮಾಡಿ: ಮಳೆಗಾಲದಲ್ಲಿ ನಿಮ್ಮ ಕಾರನ್ನು ಸುರಕ್ಷಿತವಾದ ಸ್ಥಳದಲ್ಲಿ ಪಾರ್ಕ್‌ ಮಾಡಬೇಕಾಗಿರುವುದು ತುಂಬಾ ಮುಖ್ಯವಾದ ವಿಷಯ. ಮಳೆ ಬಂದಾಗ ನೀರಿನ ಮಟ್ಟ ಏರುವ ಸ್ಥಳ, ನೆರೆ ಬರುವ ಸ್ಥಳಗಳಲ್ಲಿ ಅಂದರೆ ಕೆಲವೊಂದು ಕಟ್ಟಡದ ಬೇಸ್‌ಮೆಂಟ್‌ನಲ್ಲಿ ಪಾರ್ಕ್‌ ಮಾಡುವುದನ್ನು ಕಡಿಮೆ ಮಾಡಿ.

ಬ್ಯಾಟರಿಯ ನಿಯಮಿತ ಪರಿಶೀಲನೆ: ನಿಮ್ಮ ಕಾರಿನ ಬ್ಯಾಟರಿಯನ್ನು ನಿಯಮಿತವಾಗಿ, ಅದರಲ್ಲೂ ಮಳೆಗಾಲದಲ್ಲಿ ಆಗಾಗ ಪರೀಕ್ಷಿಸುತ್ತಿರಿ. ಮಳೆಗಾಲದಲ್ಲಿ ಬ್ಯಾಟರಿ ಸರಿಯಾಗಿ ಸೀಲ್ಡ್‌ ಆಗಿರದೇ ಇದ್ದರೆ ನೀರು ಅಥವಾ ತೇವಾಂಶ ಬರುವ ಸಾಧ್ಯತೆ ಇರುವುದರಿಂದ ಪರೀಕ್ಷಿಸುತ್ತಿರಿ. ಕಾರಿನಲ್ಲಿ ಬ್ಯಾಟರಿಯನ್ನು ಆದಷ್ಟು ಸುರಕ್ಷಿತವಾಗಿ ನೋಡಿಕೊಳ್ಳುವುದು ಒಳ್ಳೆಯದು.

ಬಾಹ್ಯ ಎಲೆಕ್ಟ್ರಿಕ್‌ ವಸ್ತುಗಳನ್ನು ಸುರಕ್ಷಿತವಾಗಿಡಿ: ಕಾರುಗಳಲ್ಲಿ ಹೊರಕ್ಕೆ ಎಕ್ಸ್‌ಪೋಸ್‌ ಆಗಿರುವಂತಹ ಕೆಲವು ವಸ್ತುಗಳಿರುತ್ತವೆ. ಅದರಲ್ಲಿ ಕೆಲವು ಎಂಜಿನ್ ಬೇ ನಲ್ಲೂ ಇರುತ್ತವೆ. ಕೆಲವೊಂದು ಭಾಗಗಳಿಗೆ ಗ್ರೀಸ್‌ ಹಚ್ಚುವುದರಿದ ನೀರು ಒಳಹೋಗದಂತೆ ತಡೆಯಬಹುದು. ಇದರ ಜೊತೆಗೆ ಎಲ್ಲಾ ಎಲೆಕ್ಟ್ರಿಕ್‌ ಕನೆಕ್ಷನ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂದು ಪರೀಕ್ಷಿಸಬೇಕು.

ಈ ಮೇಲಿನ ಅಂಶಗಳನ್ನು ಅವಲಂಬಿಸುವುದರಿಂದ ಮಳೆಗಾಲದಲ್ಲಿ ನಿಮ್ಮ ಕಾರಿನ ಎಲೆಕ್ಟ್ರಿಕ್‌ ವಸ್ತುಗಳು ನೀರಿಗೆ ಹಾಳಾಗದಂತೆ ನೋಡಿಕೊಳ್ಳಬಹುದು. ನೀರು ಬಂದು ವಸ್ತುಗಳು ಹಾಳಾದ ಮೇಲೆ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಕ್ಕಿಂತ ಅದಕ್ಕಿಂತ ಮುನ್ನವೇ ಹಾಳಾಗದಂತೆ ತಡೆಯುವುದು ಒಳ್ಳೆಯದು ಎಂಬುವುದು ನಮ್ಮ ಅಭಿಪ್ರಾಯ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, June 12, 2023, 19:13 [IST]
English summary
How to prevent water damage to your cars electrical system
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+