ಕಾರಿನಲ್ಲಿ ಮೈಲೇಜ್ ಇಳಿಕೆಯಾಗಿದೆಯೇ? ಹಾಗಾದ್ರೆ ನೀವು ಇವನ್ನು ಫಾಲೋ ಮಾಡ್ತಿಲ್ಲ!

ಒಂದೆಡೆ ಮಿತಿ ಮೀರಿದ ಇಂಧನ ಬೆಲೆಗಳು, ಮತ್ತೊಂದಡೆ ವಿಪರೀತ ಟ್ರಾಫಿಕ್ ಮೈಲೇಜ್ ನೋಡಿದ್ರೆ ತೀರಾ ಕಡಿಮೆ. ಇದಕ್ಕೆ ಪರಿಹಾರವೇ ಇಲ್ಲವೇ? ಇದೆ ಈ ಎಲ್ಲಾ ಸಮಸ್ಯೆಗಳಿಗೆ ಯಾವುದೇ ಮಾರ್ಪಾಡುಗಳಿಲ್ಲದೆ ಕಾರುಗಳ ಮೈಲೇಜ್ ಅನ್ನು ಸುಧಾರಿಸಲು ಟಾಪ್ 5 ಸಾಬೀತಾಗಿರುವ ಸಲಹೆಗಳು ಇಲ್ಲಿವೆ.

ಗೇರ್ ಶಿಫ್ಟ್‌ಗಳು: ನಿಮ್ಮ ಕಾರಿನ ಮೈಲೇಜ್‌ನಲ್ಲಿ ಗೇರ್ ಶಿಫ್ಟ್‌ಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಉತ್ತಮ ಇಂಧನ ದಕ್ಷತೆಗಾಗಿ, ಕಡಿಮೆ ಗೇರ್‌ಗಳಲ್ಲಿ ಹೆಚ್ಚು ದೂರವನ್ನು ಕ್ರಮಿಸುವ ಬದಲು ಹೆಚ್ಚಿನ ಗೇರ್‌ಗೆ ಬದಲಾಯಿಸಲು ಯಾವಾಗಲೂ ಶಿಫಾರಸು ಮಾಡಲಾಗುತ್ತದೆ. ಹೀಗೆ ಮಾಡುವುದು ಹಲವರಿಗೆ ಗೊತ್ತಿಲ್ಲ, ಇದನ್ನೊಮ್ಮೆ ಮಾಡಿ ನೊಡಿ ನಿಮಗೆ ಉತ್ತಮ ಮೈಲೇಜ್ ನೀಡಬಹುದು.

how-to-improve-car-mileage-follow-these-tips

ಥ್ರೊಟಲ್ ಇನ್‌ಪುಟ್: ನನ್ನ ಕಾರು ತೀರಾ ಕೆಟ್ಟದಾಗಿ ಮೈಲೇಜ್ ಕೊಡ್ತಿದೆ ಎಂದು ಕಾರನ್ನು ದೂಷಿಸುವ ಮೊದಲು, ನಿಮ್ಮ ಡ್ರೈವಿಂಗ್ ಶೈಲಿಯನ್ನು ಸ್ವಲ್ಪ ಬದಲಾಯಿಸಿ ನೋಡಿ. ನಿಮ್ಮ ಕಾರಿನ ಮೈಲೇಜ್ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. ಕಾರುಗಳ ಮೈಲೇಜ್ ಅನ್ನು ಸುಧಾರಿಸಲು ಸಾಬೀತಾಗಿರುವ ಮಾರ್ಗವೆಂದರೆ ನಿಮ್ಮ ಥ್ರೊಟಲ್ ಅನ್ನು ಹೆಚ್ಚು ಸೌಮ್ಯವಾಗಿ ನಿರ್ವಹಿಸುವುದು.

ಏಕೆಂದರೆ ಹಠಾತ್ ಅಥವಾ ತೀಕ್ಷ್ಣವಾದ ಥ್ರೊಟಲ್ ಇನ್‌ಪುಟ್‌ಗಳು ನಿಮ್ಮ ಕಾರಿನ ಇಂಧನ ದಕ್ಷತೆಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಏಕೆಂದರೆ ಕಾರು ವೇಗಗೊಳ್ಳುತ್ತಿರುವಾಗ ಎಂಜಿನ್ ಹೆಚ್ಚಿನ ಇಂಧನವನ್ನು ಬಳಸುತ್ತದೆ. ಹಾಗಾಗಿ ಸೌಮ್ಯವಾದ ಮತ್ತು ನಯವಾದ ಥ್ರೊಟಲ್ ಒಳಹರಿವು ನಿಮ್ಮ ಕಾರಿನ ಇಂಧನ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡಿ ಹೆಚ್ಚಿನ ಮೈಲೇಜ್ ನೀಡುವಂತೆ ಮಾಡುತ್ತದೆ.

how-to-improve-car-mileage-follow-these-tips

ಐಡಲಿಂಗ್ ಅನ್ನು ನಿಲ್ಲಿಸಿ: 60 ಸೆಕೆಂಡ್‌ಗಳಿಗಿಂತ ಹೆಚ್ಚು ಕಾಲ ನಿಶ್ಚಲ ಸ್ಥಿತಿಯಲ್ಲಿದ್ದಾಗ ಕಾರಿನ ಎಂಜಿನ್ ಆಫ್ ಮಾಡಲು ಸಾಮಾನ್ಯವಾಗಿ ಶಿಫಾರಸು ಮಾಡಲಾಗುತ್ತದೆ. ಹಾಗಾಗಿ 60 ಸೆಕೆಂಡ್‌ಗಳಿಗಿಂತ ಹೆಚ್ಚು ಕಾಲ ನಿಶ್ಚಲ ಸ್ಥಿತಿಯಲ್ಲಿದ್ದಾಗ ಕಾರಿನ ಎಂಜಿನ್ ಅನ್ನು ಆಫ್ ಮಾಡುವುದು ಉತ್ತಮ. ಇಲ್ಲದಿದ್ದರೇ ಹೆಚ್ಚಿನ ಇಂಧನ ಕುಡಿಯುವುದರಿಂದ ಇದು ನಿಮ್ಮ ಕಾರಿನ ಇಂಧನ ದಕ್ಷತೆಗೆ ಗಮನಾರ್ಹವಾಗಿ ಅಡ್ಡಿಪಡಿಸುತ್ತದೆ.

ಕಡಿಮೆ ಭಾರ: ಮೊದಲೇ ಕಾರು ಹೆಚ್ಚು ತೂಕವಿರುತ್ತದೆ, ಹೆಚ್ಚು ಇಂಧನವನ್ನು ಬಳಸುತ್ತದೆ. ಹಾಗಾಗಿ ಕಾರಿನ ಮೈಲೇಜ್ ಅನ್ನು ಸುಧಾರಿಸಲು ಯಾವುದೇ ಅನಗತ್ಯ ತೂಕ ಅಥವಾ ಬಿಡಿಭಾಗಗಳನ್ನು ಸೇರಿಸದೆ ಅದನ್ನು ಹಗುರವಾಗಿರಿಸುವುದು ಉತ್ತಮ. ವಾಸ್ತವವಾಗಿ, ರೂಫ್ ಕ್ಯಾರಿಯರ್ ಬಿಡಿಭಾಗಗಳು ಬಳಕೆಯಲ್ಲಿಲ್ಲದಿದ್ದಾಗ ಅವುಗಳನ್ನು ತೆಗೆದುಹಾಕಿದ್ರೆ ಉತ್ತಮ ಮೈಲೆಜ್ ನೀಡಬಹುದು.

how-to-improve-car-mileage-follow-these-tips

ಟೈರ್ ಪ್ರಶರ್: ಕಡಿಮೆ ಟೈರ್ ಒತ್ತಡವು ಮೈಲೇಜ್‌ನಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗುವುದರಿಂದ ಕಾರಿನ ಟೈರ್ ಒತ್ತಡವನ್ನು ನಿಯತಕಾಲಿಕವಾಗಿ ಪರಿಶೀಲಿಸಬೇಕು. ಅಗತ್ಯವಿದ್ದರೆ ಮರುಪೂರಣ ಮಾಡಬೇಕು. ಟ್ರಾಕ್ಷನ್ ಮತ್ತು ರೋಲಿಂಗ್ ಪ್ರತಿರೋಧದ ನಡುವೆ ಉತ್ತಮ ಸಮತೋಲನವನ್ನು ನೀಡುವುದರಿಂದ ತಯಾರಕರು ನಿಯಮಿತವಾಗಿ ಗಾಳಿ ತುಂಬಲು ಸಲಹೆ ನೀಡುತ್ತಾರೆ.

ಟ್ರಿಪ್ ಪ್ಲಾನಿಂಗ್: ಕೆಟ್ಟ ರಸ್ತೆಗಳು ಅಥವಾ ವಿಪರೀತ ಟ್ರಾಫಿಕ್‌ನಂತಹ ಕಾರಣಗಳಿಂದಾಗಿ ನೀವು ನಿರಂತರವಾಗಿ ಗೇರ್‌ಗಳನ್ನು ಬದಲಾಯಿಸುವುದರಿಂದ ಕೆಲವೊಮ್ಮೆ ಹತ್ತಿರದ ಜಾಗಕ್ಕೆ ತೆರಳುವಾಗಲೂ ಹೆಚ್ಚು ಇಂಧನವನ್ನು ಕುಡಿಯುತ್ತದೆ. ಆದ್ದರಿಂದ ತುಸು ದೂರವಾದ್ರೂ ಸರಿಯಾದ ಮಾರ್ಗದಲ್ಲಿ ಚಲಿಸಿದರೆ ಇಂಧನ ದಕ್ಷತೆಯನ್ನು ಸುಧಾರಿಸಬಹುದು. ಹಾಗೆಯೇ ಡ್ರೈವಿಂಗ್ ಒತ್ತಡವನ್ನು ಕೂಡ ಇದು ಕಡಿಮೆ ಮಾಡುತ್ತದೆ.

how-to-improve-car-mileage-follow-these-tips

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, January 15, 2024, 10:42 [IST]
English summary
How to improve car mileage follow these tips
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+