ಕೇವಲ 500 ರೂ. ಒಳಗೆ ಕಾರನ್ನು ಸ್ವಚ್ಛವಾಗಿಡಲು ಸಿಗುವ 5 ಅಕ್ಸೆಸೊರಿಗಳು!
ನಿಮ್ಮ ಕಾರುಗಳ ಹೊರಾಂಗಣ ಹಾಗೂ ಒಳಾಂಗಣಕ್ಕೆ ಉಪಯುಕ್ತವಾದ ಟಾಪ್ 5 ಅಕ್ಸೆಸೊರಿಗಳನ್ನು ಈ ಲೇಖನದಲ್ಲಿ ನೀಡಿದ್ದೇವೆ. ಏಕೆಂದರೆ ನಿಮ್ಮ ಕಾರು ಅಂದವಾಗಿ ಕಾಣಲು ನಿತ್ಯ ತೊಳಿದರೆ ಸಾಲದು ಒಂದಷ್ಟು ಅಕ್ಸೆಸೊರಿಗಳನ್ನು ಕೂಡ ಬಳಸಬೇಕಾಗುತ್ತದೆ. ಅಲ್ಲದೇ ಇವೆಲ್ಲವೂ ಕೇವಲ 500 ರೂ. ಒಳಗೆ ಸಿಗುವಂತಹ ಉತ್ಪನ್ನಗಳಾದ್ದರಿಂದ ನಿಮಗೆ ಬಹಳ ಉಪಯುಕ್ತವಾಗಬಹುದು.
ಮೈಕ್ರೋಫೈಬರ್ ಬಟ್ಟೆ: ಮೈಕ್ರೋಫೈಬರ್ ಬಟ್ಟೆಯು ನಿಮ್ಮ ಕಾರಿನ ಹೊರಭಾಗ ಮತ್ತು ಒಳಭಾಗವನ್ನು ಸ್ವಚ್ಛಗೊಳಿಸಲು ಉತ್ತಮವಾದ ಪರಿಕರವಾಗಿದೆ. ಇದು ನಿಮ್ಮ ಕಾರಿನ ಬಣ್ಣದ ಮೇಲೆ ಯಾವುದೇ ಕಠಿಣವಾದ ಒತ್ತಡ ನೀಡುವುದಿಲ್ಲ. ಬದಲಾಗಿ ತುಂಬಾ ಮೃದುವಾಗಿ ಮತ್ತು ಸುಲಭವಾಗಿ ಕೊಳೆಯನ್ನು ತೆಗೆಯಲು ಸಹಕರಿಸುತ್ತದೆ. ಇದನ್ನು 500 ರೂ. ಒಳಗೆ ಖರೀದಿಸಬಹುದಾಗಿದ್ದು, ಕೆಲವೆಡೆ ಇವು ಇನ್ನೂ ಅಗ್ಗವಾಗಿ ಸಿಗುತ್ತವೆ. ಜೊತೆಗೆ ಇದು ಮರುಬಳಕೆ ಮಾಡಬಹುದಾದ ಮತ್ತು ತೊಳೆಯಲು ಸುಲಭವಾದ ಬಟ್ಟೆಯಾಗಿದೆ. ಈ ಆಕ್ಸೆಸೊರಿ ನಿಮ್ಮ ಕಾರನ್ನು ಸ್ವಚ್ಛಗೊಳಿಸುವುದರಿಂದ ಕೈಗೆಟುಕುವ ಬೆಲೆಯಲ್ಲಿ ಪ್ರಾಯೋಗಿಕತೆ ಮತ್ತು ಅನುಕೂಲತೆಯನ್ನು ನೀಡುದೆ.

ಕಾರ್ ಬಿನ್: ನಿಮ್ಮ ಕಾರಿನ ಒಳಭಾಗವನ್ನು ಅಸ್ತವ್ಯಸ್ತಗೊಳಿಸುವಂತಹ ಕಸ, ಹೊದಿಕೆಗಳು ಅಥವಾ ಇತರ ಸಣ್ಣ ವಸ್ತುಗಳನ್ನು ಸಂಗ್ರಹಿಸಲು ಕಾರ್ ಬಿನ್ ಬಳಸುವುದು ಉತ್ತಮ. ಇದು ಪ್ರತಿ ಕಾರಿನಲ್ಲಿ ಇರಬೇಕಾದ ಸೂಕ್ತ ಪರಿಕರವಾಗಿದ್ದು, ನಿಮ್ಮ ಕಾರನ್ನು ಸ್ವಚ್ಛವಾಗಿ ಮತ್ತು ವ್ಯವಸ್ಥಿತವಾಗಿಡಲು ಸಹಾಯ ಮಾಡುತ್ತದೆ. ಡ್ಯಾಶ್‌ಬೋರ್ಡ್ ಅಥವಾ ಡೋರ್ ಪಾಕೆಟ್‌ನಲ್ಲಿ ಅಳವಡಿಸಬಹುದಾದ ಈ ಕಾರ್ ಬಿನ್ ಅನ್ನು 500 ರೂ. ಒಳಗೆ ಖರೀದಿಸಬಹುದು.
ಫಾಸ್ಟ್ ಚಾರ್ಜರ್: ನಮ್ಮ ಮೊಬೈಲ್ ಫೋನ್‌ಗಳನ್ನು ಆತುರದಲ್ಲಿ ಚಾರ್ಜ್ ಮಾಡದೇ ಆಫೀಸ್ ಅಥವಾ ದೂರದ ಪ್ರಯಾಣಕ್ಕೆ ಹೊರಟಿರುತ್ತೇವೆ. ಇಂತಹ ಸಂದರ್ಭದಲ್ಲಿ ಕಾರಿನಲ್ಲಿ ಸಾಮಾನ್ಯ ಕನೆಕ್ಟರ್‌ಗಳಿಂದ ನಮ್ಮ ಮೊಬೈಲ್‌ಗೆ ಎಷ್ಟೇ ಚಾರ್ಜ್ ಮಾಡಿದ್ರು ಉಪಯೋಗವಿಲ್ಲ. ಆದ್ರೆ ಫಾಸ್ಟ್ ಚಾರ್ಜರ್ ಅನ್ನು ಬಳಸಿಕೊಂಡು ವೇಗವಾಗಿ ಚಾರ್ಜ್ ಮಾಡಿಕೊಳ್ಳಬಹುದು. ಹಲವರಿಗೆ ಫಾಸ್ಟ್ ಚಾರ್ಜರ್ ಕೇವಲ 500 ರೂ. ಒಳಗೆ ಸಿಗಲಿದೆ ಎಂದು ತಿಳಿದೇ ಇಲ್ಲ.

ಪರ್ಫ್ಯೂಮ್: ನಾವು ಎಷ್ಟೇ ಒತ್ತಡದಲ್ಲಿ ಕೆಲಸ ಮುಗಿಸಿ ಬಂದರೂ ಕಾರಿಗೆ ಏರಿದ ತಕ್ಷಣ ತಣ್ಣಗೆ ಎಸಿಯೊಂದಿಗೆ ಒಂದೊಳ್ಳೆಯ ಸುವಾಸನೆ ಬಂದರೆ ಮನಸ್ಸಿಗೆ ನೆಮ್ಮದಿ ಸಿಕ್ಕಂತಾಗುತ್ತದೆ. ಕಾರ್ ಪರ್ಫ್ಯೂಮ್ ನಿಮ್ಮ ಕಾರನ್ನು ತಾಜಾ ಮತ್ತು ಆಹ್ಲಾದಕರವಾಗಿ ಮಾಡುವ ಮೂಲಕ ನಮಗೆ ಉತ್ತಮ ಡ್ರೈವಿಂಗ್ ಅನುಭವ ನೀಡುತ್ತದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಕೈಗೆಟುಕುವ ಬೆಲೆಯಲ್ಲಿ ಕಾರ್ ಪರ್ಫ್ಯೂಮ್ ಲಭ್ಯವಿದ್ದು, 500 ರೂ. ಒಳಗೆ ಖರೀದಿಸಬಹುದು. ಇವು ಆನ್‌ಲೈನ್‌ನಲ್ಲಿ ಲೆಕ್ಕವಿಲ್ಲದಷ್ಟು ಆಯ್ಕೆಯಲ್ಲೂ ಸಿಗುತ್ತವೆ. ಕಾರ್ ಪರ್ಫ್ಯೂಮ್ ಇದ್ದರೇ ಮೊದಲ ಬಾರಿಗೆ ನಿಮ್ಮ ಕಾರನ್ನು ಏರುವವರಿಗೆ ನಿಮ್ಮ ಮೇಲೆ ಒಳ್ಳೆಯ ಅಭಿಪ್ರಾಯ ಏರ್ಪಡುತ್ತದೆ.
WD40: WD40 ಎಂಬುದು ಬಹುಪಯೋಗಿ ಲೂಬ್ರಿಕಂಟ್ ಮತ್ತು ಕ್ಲೀನರ್ ಆಗಿದ್ದು, ಕಾರ್ ಸಂಬಂಧಿತ ಸಮಸ್ಯೆಗಳನ್ನು ಸರಿಪಡಿಸಲು ಇದನ್ನು ಬಳಸಬಹುದು. ಇದು ಬೋಲ್ಟ್ ಗಳನ್ನು ಸಡಿಲಗೊಳಿಸಲು, ತುಕ್ಕು ತಡೆಯಲು ಮತ್ತು ಅಂಟಿಕೊಂಡ ಕೊಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಪ್ರತಿ ಕಾರ್ ಮಾಲೀಕ ತನ್ನ ಟೂಲ್‌ಕಿಟ್‌ನಲ್ಲಿ ಹೊಂದಿರಬೇಕಾದ ವಸ್ತವಾಗಿದೆ. 500 ರೂ. ಒಳಗೆ ಇದನ್ನು ಖರೀದಿಸಬಹುದು.

ಈ ಮೇಲೆ ನೀಡಲಾದ ಎಲ್ಲಾ ಅಕ್ಸೆಸೊರಿಗಳು ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ ಸಿಗುವ ಹಾಗೂ ನಿಮ್ಮ ಕಾರಿಗೆ ಬಹಳ ಉಪಯುಕ್ತವಾದವುಗಳಾಗವೆ. ಲಕ್ಷಾಂತರ ರೂ. ವೆಚ್ಚಿಸಿ ಕಾರು ಖರೀದಿಸುವವರಿಗೆ ತಮ್ಮ ಕಾರಿನ ಬಾಳಿಕೆ ಕೂಡ ಮುಖ್ಯವಾಗಿರುತ್ತದೆ. ಹಾಗಾಗಿಯೇ ಈ ಉಪಯುಕ್ತ ಅಕ್ಸೆಸೊರಿಗಳನ್ನು ಓದುಗರಿಗಾಗಿ ನೀಡಲಾಗಿದೆ. ಇಷ್ಟವಾದಲ್ಲಿ ಇತರರಿಗೆ ಷೇರ್ ಮಾಡಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








