ಕಾರು ಮಾಲೀಕರಿಗೆ Ratan Tata ಅದ್ಬುತ ಸಲಹೆ... ಯಾರಿಗೂ ತಿಳಿಯದ ಟಾಟಾರ ಕಥೆ ಕೂಡ ಇಲ್ಲಿದೆ!
ದೇಶ ಕಂಡ ಮಹಾನ್ ವ್ಯಕ್ತಿಗಳಲ್ಲಿ ಕೈಗಾರಿಕೋದ್ಯಮಿ ರತನ್ ಟಾಟಾ ಕೂಡ ಒಬ್ಬರು. ಸದಾ ದೇಶ ಹಾಗೂ ಸಾರ್ವಜನಿಕರ ಬಗ್ಗೆ ಕಾಳಜಿ ಹೊಂದಿರುವ ರತನ್ ಟಾಟಾ ಅವರು ಕಳೆದ ಮಂಗಳವಾರದಂದು ಟ್ವಿಟರ್‌ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಕೇವಲ ಜನಸಾಮಾನ್ಯರಲ್ಲದೆ ಪ್ರಾಣಿಗಳ ಮೇಲೆ ಅವರಿಗಿರುವ ಕಾಳಜಿಯನ್ನು ಈ ಪೋಸ್ಟ್‌ನಲ್ಲಿ ನೋಡಬಹುದು.
ಈಗ ಮಾನ್ಸೂನ್ ಬಂದಿವೆ, ಬಹಳಷ್ಟು ಬೀದಿ ಪ್ರಾಣಿಗಳು ನಮ್ಮ ಕಾರುಗಳ ಕೆಳಗೆ ಆಶ್ರಯ ಪಡೆಯುತ್ತವೆ. ನಾವು ವಾಹನ ಏರುವ ಮೊದಲು ಕಾರನ್ನು ಒಮ್ಮೆ ಪರಿಶೀಲಿಸುವುದು ಮುಖ್ಯ. ಆಶ್ರಯ ಪಡೆಯುವ ದಾರಿತಪ್ಪಿದ ಪ್ರಾಣಿಗಳನ್ನು ಒಮ್ಮೆ ನೋಡಬೇಕು, ನಮ್ಮ ವಾಹನಗಳ ಅಡಿಯಲ್ಲಿ ಪ್ರಾಣಿಗಳಿರುವುದು ನಮಗೆ ತಿಳಿಯದಿದ್ದರೆ, ಅವು ಗಂಭೀರವಾಗಿ ಗಾಯಗೊಳ್ಳಬಹುದು. ಮಳೆಗಾಲದಲ್ಲಿ ಪ್ರಾಣಿಗಳಿಗೆ ತಾತ್ಕಾಲಿಕ ಆಶ್ರಯ ನೀಡಿದ್ರೆ ಅದು ಹೃದಯಸ್ಪರ್ಶಿಯಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಟಾಟಾರ ಮನಮುಟ್ಟುವ ಕಥೆ: ರತನ್ ಟಾಟಾ ಅವರು ಅತ್ಯಂತ ಸ್ಪೂರ್ತಿದಾಯಕ ಮತ್ತು ಪ್ರಮುಖ ಉದ್ಯಮಿಗಳಲ್ಲಿ ಒಬ್ಬರು. ಕೈಗಾರಿಕೋದ್ಯಮಿ ಮತ್ತು ಲೋಕೋಪಕಾರಿ, ಯಾವಾಗಲೂ ಉದಾಹರಣೆಯ ಮೂಲಕ ಮುನ್ನಡೆಸುತ್ತಿದ್ದಾರೆ. ಇದೇ ಕಾರಣಕ್ಕೆ ಲಂಡನ್ ರಾಜರಾದ ಚಾರ್ಲ್ಸ್ III ಅವರು ರತನ್ ಟಾಟಾ ಅವರಿಗೆ ಪ್ರಶಸ್ತಿ ನೀಡಲು ನಿರ್ಧರಿಸಿದ್ದರು.
ಪ್ರಿನ್ಸ್ ಚಾರ್ಲ್ಸ್ ಅವರು ಫೆಬ್ರವರಿ 6, 2018 ರಂದು ಬಕಿಂಗ್ಹ್ಯಾಮ್ ಅರಮನೆಯಲ್ಲಿ ಲೋಕೋಪಕಾರಕ್ಕಾಗಿ ಜೀವಮಾನದ ಸಾಧನೆಯ ಪ್ರಶಸ್ತಿಯನ್ನು ರತನ್ ಟಾಟಾ ಅವರಿಗೆ ನೀಡಲು ಉದ್ದೇಶಿಸಿದ್ದರು. ಆದ್ರೆ ಟಾಟಾ ಅವರು ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಇದಕ್ಕೆ ಎಲ್ಲರು ಒಮ್ಮೆಲೆ ದಂಗಾಗಿದ್ದರು, ಏಕೆಂದರೆ ಲಂಡನ್ ರಾಜರ ಆಹ್ವಾನವನ್ನು ನಿರ್ಲಕ್ಷಿಸಿದ್ದು ಆಗಿನ ಕಾಲಕ್ಕೆ ದೊಡ್ಡ ಚರ್ಚೆಯಾಗಿತ್ತು.

ಆದ್ರೆ ಯಾರಿಗೂ ತಿಳಿಯದ ವಿಷಯವೇನೆಂದರೆ ರತನ್ ಟಾಟಾ ಅವರು ಗೈರಾಗುವ ಹಿಂದಿನ ಕಾರಣ ಅವರ ನಾಯಿಯಾಗಿತ್ತು. YouTube ಸಂದರ್ಶನವೊಂದರಲ್ಲಿ, ಅಂಕಣಕಾರ ಸುಹೇಲ್ ಸೇಠ್ ಟಾಟಾ ಅವರು ಈ ಪ್ರಶಸ್ತಿ ಸ್ವೀಕರಿಸದ ಹಿಂದಿನ ಕಾರಣವನ್ನು ವಿವರಿಸಿದ್ದಾರೆ. ಅದೇ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಹೊರಟಿದ್ದ ಸುಹೇಲ್ ಸೇಠ್ ಅವರಿಗೆ ವಿಮಾನ ಪ್ರಯಾಣದಲ್ಲಿದ್ದ ಕಾರಣ ಫೋನ್ ಕರೆಗಳು ಬಂದಿರಲಿಲ್ಲ.
ಏರ್‌ಪೋರ್ಟ್ ಇಳಿಯುತ್ತಿದ್ದಂತೆ ಟಾಟಾ ಅವರಿಂದ 11 ಮಿಸ್ಡ್ ಕಾಲ್‌ಗಳನ್ನು ನೋಡಿ ಗಾಬರಿಗೊಂಡಿದ್ದರು. ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ತಕ್ಷಣ ಟಾಟಾ ಅವರನ್ನು ಸಂಪರ್ಕಿಸಿದ್ದು, ಟಾಟಾ ಅವರ ನಾಯಿಗಳಾದ ಟ್ಯಾಂಗೋ ಮತ್ತು ಟಿಟೊ ನಾಯಿಗಳಲ್ಲಿ ಒಂದು ಅಸ್ವಸ್ಥಗೊಂಡ ಕಾರಣ ರತನ್ ಟಾಟಾ ಅವರು ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ ಎಂಬುದನ್ನು ತಿಳಿಯುತ್ತಿದ್ದಂತೆ ದಿಗ್ಭ್ರಮೆಗೊಂಡಿದ್ದಾರೆ.

ಕೇವಲ ಶ್ವಾನಗಳಿಗಾಗಿ ಪ್ರಶಸ್ತಿಯನ್ನು ನಿರ್ಲಕ್ಷಿಸುವಿರಾ ಎಂದು, ಪ್ರಿನ್ಸ್ ಚಾರ್ಲ್ಸ್ ಅವರ ಬಗ್ಗೆ ಹೇಳುತ್ತಾ ಕಾರ್ಯಕ್ರಮಕ್ಕೆ ಹಾಜರಾಗಲು ಟಾಟಾ ಅವರನ್ನು ಮನವೊಲಿಸಿದ್ದರಂತೆ. ಆದರೆ ಟಾಟಾ ಅವರು ಕೊನೆಗೂ ಕಾರ್ಯಕ್ರಮಕ್ಕೆ ಹೋಗಲೇ ಇಲ್ಲ. ತಮ್ಮ ಪ್ರಶಸ್ತಿಗಾಗಿ ನಾಯಿಗಳನ್ನು ಕಡೆಗಣಿಸುವುದಿಲ್ಲ ಎಂದಿದ್ದರಂತೆ. ಇದಾದ ಬಳಿಕ ಕಾರ್ಯಕ್ರಮಕ್ಕೆ ಹಾಜರಾಗದಿರುವ ಕುರಿತು ತಿಳಿದ ಪ್ರಿನ್ಸ್ ಚಾರ್ಲ್ಸ್ ಯಾರೂ ಊಹಿಸದ ಮಾತುಗಳನ್ನಾಡಿದ್ದರಂತೆ.
"ಟಾಟಾ ಅಂದ್ರೆ ಅದು' ಇದೇ ಕಾರಣಕ್ಕೆ ರತನ್ ಟಾಟಾ ಈ ಪ್ರಶಸ್ತಿಗೆ ಅರ್ಹರು." "ಅದಕ್ಕಾಗಿಯೇ ಟಾಟಾ ಅವರು ಇರಬೇಕಾದ ಮನೆ ಇದು. ಹಾಗಾಗಿಯೇ ಇದು ಸ್ಥಿರವಾದ ಹಾದಿಯಲ್ಲಿದೆ" ಎಂದಿದ್ದರಂತೆ. ಅಲ್ಲಿಗೆ ರತನ್ ಟಾಟಾರಂತಹ ಮಹಾನ್ ವ್ಯಕ್ತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ತಮ್ಮ ಪ್ರಶ್ತಿಗಳೇ ಮೌಲ್ಯವನ್ನು ಪಡೆದುಕೊಳ್ಳಲಿವೆ ಎಂಬಂತಾಗುತ್ತದೆ. ನಮ್ಮ ಭಾರತದ ಹೆಮ್ಮೆಯ ವ್ಯಕ್ತಿಯ ಬಗ್ಗೆ ನಿಮ್ಮ ಅನ್ನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications








