FASTag: 3,000.. ಬ್ರೋ.. ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್ ಪಡೆಯುವುದು ಹೇಗೆ? ಯಾರು ಹೇಳಲ್ಲ!

ಖಾಸಗಿ ವಾಹನ ಸವಾರರಿಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ಫಾಸ್ಟ್‌ಟ್ಯಾಗ್ (FASTag) ಆಧಾರಿತ ವಾರ್ಷಿಕ ಹೆದ್ದಾರಿ ಟೋಲ್ ಪಾಸ್ ವ್ಯವಸ್ಥೆಯನ್ನು ಶುಕ್ರವಾರದಿಂದ ಜಾರಿಗೊಳಿಸಲಾಗಿದೆ. ಇದು ಕಾರು, ಜೀಪ್‌ & ವ್ಯಾನ್‌ಗಳಂತಹ ವಾಣಿಜ್ಯೇತರ ವಾಹನಗಳಿಗೆ ಮಾತ್ರ ಅನ್ವಯಿಸಲಿದೆ. ಟೋಲ್ ಶುಲ್ಕ ಪಾವತಿಗೆ ಪದೇ ಪದೇ ಫಾಸ್ಟ್‌ಟ್ಯಾಗ್ ಕಾರ್ಡ್‌ಗಳನ್ನು ರೀಚಾರ್ಜ್ ಮಾಡುವುದನ್ನು ತಪ್ಪಿಸಲಿದೆ. ಈ ಮೂಲಕ ಸುಲಭ ಸಂಚಾರಕ್ಕೆ ನೆರವಾಗಲಿದೆ.

ಎಲ್ಲಿ ಬಳಕೆ ಮಾಡಬಹುದು:

ಈ ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್‌ನ್ನು ಎಲ್ಲ ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ವೇಗಳ ಟೋಲ್ ಪ್ಲಾಜಾಗಳಲ್ಲಿ ಬಳಕೆ ಮಾಡಬಹುದು. ಅದರ ಹೊರತಾಗಿ ರಾಜ್ಯ ಅಥವಾ ಖಾಸಗಿ ಹೆದ್ದಾರಿಯಲ್ಲಿ ಉಪಯೋಗ ಮಾಡಲು ಸಾಧ್ಯವಾಗುವುದಿಲ್ಲ. ನೂತನ ಫಾಸ್ಟ್‌ಟ್ಯಾಗ್ ಪಾಸ್‌ ಪಡೆಯಲು ರೂ.3,000 ಪಾವತಿಸಿ, ನೋಂದಣಿ ಮಾಡಿಕೊಳ್ಳಬೇಕು.

Annual FASTag How To Apply You Should Must Know Details

ಎಷ್ಟು ವರ್ಷ ಚಾಲ್ತಿಯಲ್ಲಿರುತ್ತದೆ.

ಫಾಸ್ಟ್‌ಟ್ಯಾಗ್ ಪಾಸ್ 1 ವರ್ಷಗಳ ಅವಧಿಗೆ ಮಾನ್ಯವಾಗಿರಲಿದ್ದು, ಅದರಲ್ಲೂ 200 ಟ್ರಿಪ್‌ಗಳಿಗೆ ಮಾತ್ರ ಅವಕಾಶವಿರಲಿದೆ. ಆ ಬಳಿಕ ಅಂದರೆ, 1 ವರ್ಷ ಅಥವಾ 200 ಟ್ರಿಪ್‌ಗಳು ಪೂರ್ಣಗೊಂಡಾಗ, ಪುನಃ ನೋಂದಾಯಿಸಬೇಕು. ಇದರಿಂದ ವಾರ್ಷಿಕ ರೂ.5,000 ರಿಂದ 7,000 ವರೆಗೆ ಹಣವನ್ನು ಉಳಿತಾಯ ಮಾಡಬಹುದು.

ವಾಹನ ಸವಾರರಿಗೆ ಉತ್ತಮ ಸ್ಪಂದನೆ:

ಭೂ ಸಾರಿಗೆ & ಹೆದ್ದಾರಿ ಸಚಿವಾಲಯದ ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್‌ಗೆ ವಾಹನ ಸವಾರರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಟೋಲ್ ಪಾಸ್ ವ್ಯವಸ್ಥೆ ಜಾರಿಗೊಳಿಸಿದ ಮೊದಲೇ ದಿನವೇ ಸಂಜೆ 4:30 ರವರೆಗೆ, ಸರಿ ಸುಮಾರು 1.2 ಲಕ್ಷ ಜನರು ಪಾಸ್‌ನ್ನು ಖರೀದಿ ಮಾಡಿದ್ದಾರೆ.

Annual FASTag How To Apply You Should Must Know Details

ಹೀಗೆ ಮಾಡಿದರೆ ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್‌ ಕೆಲಸ ಮಾಡುವುದಿಲ್ಲ:

ಸದ್ಯ ಅಸ್ತಿತ್ವದಲ್ಲಿರುವ ವಾಹನ ನೋಂದಣಿ ಸಂಖ್ಯೆಯನ್ನು ಫಾಸ್ಟ್‌ಟ್ಯಾಗ್ ಪಾಸ್‌ನೊಂದಿಗೆ ಲಿಂಕ್ ಮಾಡಿರಬೇಕು. ಈ ಪಾಸ್‌ನ್ನು ಕಾರು, ಜೀಪ್‌ & ವ್ಯಾನ್‌ಗಳ ವಿಂಡ್‌ಶೀಲ್ಡ್ ಮೇಲೆ ಅಂಟಿಸಿರಬೇಕು. ಈ ಪಾಸ್‌ನ್ನು ವರ್ಗಾಯಿಸುವಂತಿಲ್ಲ. ಆಗೊಮ್ಮೆ ಬೇರೆ ವಾಹನದಲ್ಲಿ ಬಳಕೆ ಮಾಡಿದರೆ, ಸ್ವಯಂಚಾಲಿತವಾಗಿ ನಿಷ್ಕ್ರಿಯವಾಗಿ ಬಿಡುತ್ತದೆ.

ಇದು ಕಡ್ಡಾಯವಲ್ಲ:

ಈ ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್‌ ಎಂಬುದು ಕಡ್ಡಾಯವಲ್ಲ. ಇದು ಐಚ್ಛಿಕವಾಗಿದೆ. ವಾಹನ ಮಾಲೀಕರು ಇಷ್ಟವಿದ್ದರೆ ಮಾತ್ರ ತೆಗೆದುಕೊಳ್ಳಬಹುದು ಎಂದು ಭೂ ಸಾರಿಗೆ & ಹೆದ್ದಾರಿ ಸಚಿವಾಲಯ ಸ್ಪಷ್ಟಪಡಿಸಿದೆ. ಈ ಪಾಸ್‌ ಇಲ್ಲದಿದ್ದರೆ, ಎಂದಿನಂತೆ ಸಾಮಾನ್ಯ ಫಾಸ್ಟ್‌ಟ್ಯಾಗ್ ಉಪಯೋಗ ಮಾಡಿ, ಟೋಲ್‌ ಶುಲ್ಕವನ್ನು ಪಾವತಿ ಮಾಡಬಹುದು.

Annual FASTag How To Apply You Should Must Know Details

ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್‌ ಪಡೆಯುವುದು ಹೇಗೆ?

ಹಂತ 1: ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್‌ಗಾಗಿ ರಾಜಮಾರ್ಗಯಾತ್ರೆ (ಆಂಡ್ರಾಯ್ಡ್/ಐಒಎಸ್) ಆಪ್ ಅಥವಾ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎಐ) ವೆಬ್‌ಸೈಟ್‌ಗೆ ಭೇಟಿ.

ಹಂತ 2: ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಲಾಗಿನ್ ಮಾಡಿ. ಆ ಬಳಿಕ ಆಪ್‌ನಲ್ಲಿ ಸಂಬಂಧ ಪಟ್ಟ ಭಾಷೆಯನ್ನು ಆಯ್ಕೆ ಮಾಡಿ. ಇದು ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಮರಾಠಿ ಹಾಗೂ ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ ಲಭ್ಯವಿದೆ. ವಾಹನ ನೋಂದಣಿ ಸೇರಿದಂತೆ ಇತರೆ ವಿವರಗಳನ್ನು ಸಲ್ಲಿಸಿ.

ಹಂತ 3: ನೀವು ನೀಡಿರುವ ಎಲ್ಲ ಮಾಹಿತಿಗಳು ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿ.

ಹಂತ 4: ಪ್ರಸ್ತುತ ಆಪ್‌ ಅಥವಾ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಪಾವತಿ ಆಯ್ಕೆಯೊಂದಿಗೆ ರೂ.3,000 ಶುಲ್ಕವನ್ನು ಪಾವತಿ ಮಾಡಿರಿ.

ಹಂತ 5: ಹಣ ಸಂದಾಯ ಯಶಸ್ವಿಯಾದ ನಂತರ, 2 ಗಂಟೆಯೊಳಗೆ ವಾರ್ಷಿಕ ಪಾಸ್‌ನ್ನು ಅಸ್ತಿತ್ವದಲ್ಲಿರುವ ಫಾಸ್ಟ್‌ಟ್ಯಾಗ್‌ಗೆ ಲಿಂಕ್ ಮಾಡಲಾಗುತ್ತದೆ. ಎಸ್ಎಂಎಸ್ ಮೂಲಕ ದೃಢೀಕರಣ ಸಂದೇಶವು ಬರುತ್ತದೆ.

ಒಟ್ಟಾರೆಯಾಗಿ ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್‌ ವ್ಯವಸ್ಥೆಯಿಂದ ಖಾಸಗಿ ವಾಹನ ಮಾಲೀಕರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ. ಇದರಿಂದ ಹೆಚ್ಚಿನ ಹಣ ಉಳಿತಾಯವಾಗುತ್ತದೆ. ಜೊತೆಗೆ ಟೋಲ್ ಪ್ಲಾಜಾಗಳಲ್ಲಿ ಕಾಯುವಿಕೆಯು ಅವಧಿಯು ಕಡಿಮೆಯಾಗಲಿದೆ. ಈ ಮೂಲಕ ಸುಗಮ ಪ್ರಯಾಣವು ಸಾಧ್ಯವಾಗಲಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

More from DriveSpark

Article Published On: Saturday, August 16, 2025, 8:35 [IST]
English summary
Annual fastag pass how to apply you should must know details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+