ದ್ವಿಚಕ್ರ ವಾಹನ ಮಾಲೀಕತ್ವವನ್ನು ಡಿಜಿಟಲ್ ವರ್ಗಾವಣೆ ಮಾಡುವುದು ಹೇಗೆ? ತುಂಬಾ ಸಿಂಪಲ್!

ಭಾರತದಲ್ಲಿ ವಿವಿಧ ಸಾರಿಗೆ ವಿಧಾನಗಳಲ್ಲಿ ಸರ್ಕಾರಿ ಬಸ್, ಟ್ರೈನ್‌ಗಳನ್ನೇ ನಂಬಿ ಜೀವನ ಸಾಗಿಸುವವರು ಇದ್ದಾರೆ. ಆದ್ರೆ ತೀರಾ ತುರ್ತು ಸಂದರ್ಭಗಳಲ್ಲಿ ಸರ್ಕಾರಿ ಸಾರಿಗೆಗಳನ್ನು ನಂಬಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿಯೇ ದ್ವಿಚಕ್ರ ವಾಹನಗಳಿಲ್ಲದೇ ನಿತ್ಯ ಜೀವನ ಸಾಗಾಟವೇ ಕಷ್ಟ ಎನ್ನುವವರು ಕೋಟ್ಯಾಂತರ ಮಂದಿ ಇದ್ದಾರೆ.

ಕೇವಲ ತಮ್ಮ ದುಡಿಮೆ ಹಾಗೂ ಅನಿವಾರ್ಯ ಅವಶ್ಯಕತೆಗಳಿಗಾಗಿ ಓಡಾಡಲು ಒಂದು ದ್ವಿಚಕ್ರ ವಾಹನವಿದ್ದರೇ ಸಾಕು ಎಂದುಕೊಳ್ಳುವವರು ಹೊಸ ಬೈಕ್/ಸ್ಕೂಟರ್‌ಗಳೇ ಬೇಕು ಎಂದುಕೊಳ್ಳುವುದಿಲ್ಲ. ಬದಲಿಗೆ ಉತ್ತಮ ನಿರ್ವಹಣೆಯಲ್ಲಿರುವ ಹಾಗೂ ಮೈಲೇಜ್ ನೀಡುವ ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನಗಳು ಸಿಕ್ಕರೆ ಸಾಕು ಎಂದುಕೊಳ್ಳುತ್ತಾರೆ. ಆದ್ರೆ ಇಲ್ಲಿ ವಾಹನ ಖರೀದಿಯ ನಂತರ, ವಾಹನದ ಮಾಲೀಕತ್ವವನ್ನು ವರ್ಗಾಯಿಸುವುದು ಕೂಡ ನಿರ್ಣಾಯಕವಾಗಿರುತ್ತದೆ.

digitally-transfer-two-wheeler-ownership

ಈ ಹಿಂದೆ ಒಬ್ಬರಿಂದ ಮತ್ತೊಬ್ಬರಿಗೆ ವಾಹನ ಮಾಲೀಕತ್ವವನ್ನು ವರ್ಗಾಯಿಸಲು ಬಹಳಷ್ಟು ದಾಖಲೆಗಳನ್ನು ಒಳಗೊಂಡ ಧೀರ್ಘ ಪ್ರಕ್ರಿಯೆ ಇತ್ತು. ಆದರೆ ಈಗ ಭಾರತ ಡಿಜಿಟಲೀಕರಣದತ್ತ ವೇಗವಾಗಿ ಮುನ್ನುಗ್ಗುತ್ತಿರುವ ಕಾರಣ ಎಲ್ಲವನ್ನು ಸರಳೀಕರಿಸಿದೆ. ಪ್ರಸ್ತುತ ವಾಹನ ಮಾಲೀಕತ್ವವನ್ನು ಆನ್‌ಲೈನ್‌ನಲ್ಲಿ ಯಾವುದೇ ತಲೆ ಬಿಸಿ ಇಲ್ಲದೆ ಜಗಳ ಮುಕ್ತ ರೀತಿಯಲ್ಲಿ ಮಾಡಬಹುದು. ಈ ಕೆಳಗಿನ ಸಿಂಪಲ್ ಟಿಪ್ಸ್ ಅನುಸರಿಸಿ ಸಾಕು.

ಮೂಲ ನೋಂದಣಿ ಪ್ರಮಾಣಪತ್ರ (ಆರ್‌ಸಿ), ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ), ವಿಮಾ ಪ್ರಮಾಣಪತ್ರ (ಇನ್ಸೂರನ್ಸ್), ಫಾರ್ಮ್ 29 ಮತ್ತು ಫಾರ್ಮ್ 30 ರಂತಹ ದಾಖಲೆಗಳನ್ನು ಮಾರಾಟಗಾರ ಮತ್ತು ಖರೀದಿದಾರರಿಂದ ಸರಿಯಾಗಿ ಭರ್ತಿ ಮಾಡಿ ಸಹಿ ಮಾಡಬೇಕು. ನಂತರ ಇವೆಲ್ಲವುಗಳನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ.

digitally-transfer-two-wheeler-ownership

ನಂತರ ವಾಹನ್ ಸೇವಾ ಪೋರ್ಟಲ್‌ಗೆ ಭೇಟಿ ನೀಡಿ ನಿಮ್ಮ ವಾಹನ ನೋಂದಣಿ ಸಂಖ್ಯೆ ಮತ್ತು ಚಾಸಿಸ್ ಸಂಖ್ಯೆಯನ್ನು ನಮೂದಿಸಬೇಕು. ನಂತರ ಅದರಲ್ಲಿ "ಮಾಲೀಕತ್ವದ ವರ್ಗಾವಣೆ" (Transfer of Ownership) ಆಯ್ಕೆಯ ಮೇಲೆ ಕ್ಲಿಕ್ ಮಾಡಿದ್ರೆ, ನಿಮ್ಮ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಪುಟಕ್ಕೆ ಇದು ನಿಮ್ಮನ್ನು ಕರೆದೊಯ್ಯುತ್ತದೆ.

ಮೊದಲೇ ಹೇಳಿದಂತೆ ಅಗತ್ಯವಿರುವ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಲ್ಲಿ ಅಪ್‌ಲೋಡ್ ಮಾಡಿ. ಇದಕ್ಕಾಗಿ ಅಲ್ಲೇ ಕಾಣುವ "‌ಅಪ್‌ಲೋಡ್ ಡಾಕ್ಯುಮೆಂಟ್" ಬಟನ್ ಕ್ಲಿಕ್ ಮಾಡುವ ಮೂಲಕ ನೀವು ಇದನ್ನು ಮಾಡಬಹುದು. ಬಳಿಕ ಅದಕ್ಕೆ ಅನ್ವಯವಾಗುವ ಶುಲ್ಕವನ್ನು ಪಾವತಿಸಬೇಕು. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಅನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ಶುಲ್ಕವನ್ನು ಪಾವತಿಸಬಹುದು.

digitally-transfer-two-wheeler-ownership

ಒಮ್ಮೆ ನೀವು ಅರ್ಜಿ ನಮೂನೆ ತುಂಬಿ ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ, "ಸಲ್ಲಿಸು" (Submit) ಬಟನ್ ಮೇಲೆ ಕ್ಲಿಕ್ ಮಾಡಬೇಕು. ನಂತರ RTO ನಿಮ್ಮ ಅರ್ಜಿಗೆ ಪ್ರಕ್ರಿಯಿಸಿ ಖರೀದಿದಾರರ ಹೆಸರಿನಲ್ಲಿ ಹೊಸ RC ನೀಡುತ್ತದೆ. ಸಂಪೂರ್ಣ ಪ್ರಕ್ರಿಯೆಯನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳಿಸಬಹುದು. ಕೆಲವು ರಾಜ್ಯಗಳಲ್ಲಿ ಅದನ್ನು ಮಾಲೀಕರ ಮನೆಗೆ ತಲುಪಿಸಿದರೆ, ಕೆಲ ರಾಜ್ಯಗಳಲ್ಲಿ RTO ಕಚೇರಿಯಿಂದ ನಾವೇ ಸಂಗ್ರಹಿಸಬೇಕಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ.

More from DriveSpark

Article Published On: Thursday, July 13, 2023, 13:52 [IST]
English summary
Digitally transfer two wheeler ownership
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+