ಭಾರತೀಯ ರಸ್ತೆಗಳಿಗೆ ADAS ಬೇಕೆ?: ಇದರ ಅನುಕೂಲಗಳು, ಅನಾನುಕೂಲಗಳೇನು?

ದೇಶದ ಜನರು ಈಗ ಸುರಕ್ಷೆತೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಏರ್‌ಬ್ಯಾಗ್‌ ಹಾಗೂ ADAS ವೈಶಿಷ್ಟ್ಯಗಳನ್ನು ಕೋರುತ್ತಿದ್ದಾರೆ. ಕಾರು ತಯಾರಕ ಕಂಪನಿಗಳು ಕೂಡ ಗ್ರಾಹಕರನ್ನು ಆಕರ್ಶಿಸಲು ಈ ವೈಶಿಷ್ಟ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿವೆ. ಹಾಗಾಗಿಯೇ ADAS ಎಂದು ಕರೆಯಲ್ಪಡುವ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ಭಾರತದಲ್ಲಿ ಸದ್ದು ಮಾಡುತ್ತಿದೆ.

ಈ ವೈಶಿಷ್ಟ್ಯವನ್ನು ಒಳಗೊಂಡು ಬಂದ MG ಗ್ಲೋಸ್ಟರ್ ಪ್ರೀಮಿಯಂ SUV ದೇಶೀಯ ಮಾರುಕಟ್ಟೆಯಲ್ಲಿ ಲಭ್ಯವಾದ ಮೊದಲ ಕಾರಾಗಿದೆ. ಇಂದು ಮಾರುಕಟ್ಟೆಯಲ್ಲಿ ರೂ. 10 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಕಾರುಗಳಲ್ಲಿ ADAS ಒಂದು ಅನಿವಾರ್ಯ ವೈಶಿಷ್ಟ್ಯವಾಗಿದೆ. ಆದರೆ ಈಗ ಭಾರತೀಯ ರಸ್ತೆಗಳಿಗೆ ADAS ಬೇಕೇ? ನಮ್ಮ ಬೀದಿಗಳಲ್ಲಿ ಇದು ತುಂಬಾ ಪ್ರಾಯೋಗಿಕವಾಗಿದೆಯೇ ಎಂಬುದನ್ನು ನೋಡೋಣ.

what-is-adas-feature-how-does-it-work-must-know-these-details

ADAS ಎಂದರೇನು?: ADAS ಎಂಬುದು ಸೆನ್ಸಾರ್‌ಗಳು ಮತ್ತು ಕ್ಯಾಮೆರಾಗಳ ಮೂಲಕ ರಸ್ತೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸುತ್ತಮುತ್ತಲಿನ ಸಂಕೇತಗಳ ಆಧಾರದ ಮೇಲೆ ಸ್ವಂತ ನಿರ್ಧಾರಗಳನ್ನು ತೆಗೆದುಕೊಂಡು ಚಾಲಕನ ಪ್ರಮೆಯವಿಲ್ಲದೆ ಕಾರನ್ನು ನಿಯಂತ್ರಿಸುತ್ತದೆ. ಇದು ಈಗಷ್ಟೆ ವಿಕಸನಗೊಳ್ಳುತ್ತಿರುವ ಮತ್ತು ಹೆಚ್ಚಿನ ಡೇಟಾವನ್ನು ಅವಲಂಬಿಸಿರುವ ವ್ಯವಸ್ಥೆಯಾಗಿದೆ ಎಂಬುದನ್ನು ಎಲ್ಲರು ನೆನಪಿನಲ್ಲಿಡಬೇಕು.

ADAS ನೊಂದಿಗೆ ಕಾರುಗಳು ರಸ್ತೆಯ ಲೇನ್‌ಗಳನ್ನು ಬದಲಾಯಿಸಬಹುದು, ವೇಗವನ್ನು ನಿಯಂತ್ರಿಸಬಹುದು ಅಥವಾ ಹೆಚ್ಚಿಸಬಹುದು, ಕನಿಷ್ಠ ಮಾನವ ಹಸ್ತಕ್ಷೇಪದೊಂದಿಗೆ ಸಂಪೂರ್ಣವಾಗಿ ನಿಲ್ಲಿಸಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಯು ಅಪಘಾತಗಳನ್ನು ತಪ್ಪಿಸಲು ನಿಮಗೆ ಸಹಾಯ ಮಾಡುವ ಒಂದು ಸಾಧನವಾಗಿದೆ.

what-is-adas-feature-how-does-it-work-must-know-these-details

ಹೇಗೆ ಕೆಲಸ ಮಾಡುತ್ತದೆ?: ಕಾರಿನಲ್ಲಿ ಸರಿಯಾಗಿ ಹೊಂದಿಸಿರುವ ADAS ವೈಶಿಷ್ಟ್ಯವು ಅತ್ಯಂತ ವಿಶ್ವಾಸಾರ್ಹ ಭದ್ರತಾ ವೈಶಿಷ್ಟ್ಯವಾಗಿದೆ. ಘರ್ಷಣೆಯ ಎಚ್ಚರಿಕೆ, ಸ್ವಯಂ - ತುರ್ತು ಬ್ರೇಕಿಂಗ್, ಲೇನ್ - ಕೀಪ್ ಅಸಿಸ್ಟ್, ಬ್ಲೈಂಡ್ - ಸ್ಪಾಟ್ ಮಾನಿಟರಿಂಗ್ ಮತ್ತು ಕ್ರಾಸ್ - ಟ್ರಾಫಿಕ್ ಎಚ್ಚರಿಕೆಯಂತಹ ವೈಶಿಷ್ಟ್ಯಗಳು ಕಾರಿಗೆ ಆಗುವ ಅಪಾಯವನ್ನು ಕಡಿಮೆ ಮಾಡುತ್ತವೆ.

ಭಾರತೀಯ ರಸ್ತೆಗಳಿಗೆ ಬೇಕೆ?: ಪ್ರಸ್ತುತ, ಸುಧಾರಿತ ಚಾಲಕ ಸಹಾಯ ವ್ಯವಸ್ಥೆಯು ಭಾರತೀಯ ರಸ್ತೆಗಳಲ್ಲಿ ಹೆಚ್ಚು ಪ್ರಾಯೋಗಿಕವಾಗಿಲ್ಲ. ಸಾಮಾನ್ಯ ಭಾರತೀಯ ನಗರದ ರಸ್ತೆಗಳು ಈ ವೈಶಿಷ್ಟ್ಯವನ್ನು ಅವಲಂಬಿಸುವಂತಿಲ್ಲ. ಕಾರಣ ಏನೆಂದರೆ, ಭಾರತದ ಹೆದ್ದಾರಿಗಳನ್ನು ಹೊರತುಪಡಿಸಿ ಸಿಟಿ ರೋಡ್‌ಗಳು ಇದಕ್ಕೆ ಸೂಕ್ತವಲ್ಲ ಎಂಬುದು ನಮ್ಮ ಅಭಿಪ್ರಾಯ.

what-is-adas-feature-how-does-it-work-must-know-these-details

ಇದು ಸಂಪೂರ್ಣ AI (ಕೃತಕ ಬುದ್ಧಿಮತೆ)ನಿಂದ ಚಾಲಿತವಾಗಿರುವ ಕಾರಣ ಅದರಲ್ಲಿ ಅಳವಡಿಸಿರುವ ತಂತ್ರಜ್ಞಾನಕ್ಕೆ ತಕ್ಕ ಹಾಗೆ ರಸ್ತೆ ಚಿಹ್ನೆಗಳ ನೋಡಿಕೊಂಡು ಕಾರನ್ನು ನಿಯಂತ್ರಿಸುತ್ತದೆ. ನಮ್ಮಲ್ಲಿ ಮುಖ್ಯ ರಸ್ತೆಗಳಿಗಿಂತ ಅಸಂಖ್ಯಾತ ಸಣ್ಣ ರಸ್ತೆಗಳಿವೆ, ನಿಯಮಗಳನ್ನು ಉಲ್ಲಂಘಿಸಿ ಅಡ್ಡದಿಡ್ಡಿ ವಾಹನಗಳನ್ನು ಓಡಿಸುವವರೆ ಹೆಚ್ಚು. ಹಾಗಾಗಿ ಒಂದೇ ಸಿಂಗಲ್ ಲೇನ್‌ನಲ್ಲಿ ಕಾರನ್ನು ಇರಿಸಲು ADAS ಸಿಸ್ಟಮ್‌ಗೆ ತುಂಬಾ ಕಷ್ಟಕರವಾಗುತ್ತದೆ.

ಹೆದ್ದಾರಿಗಳಿಗೆ ಸೂಕ್ತ: ADAS ಪ್ರಮುಖ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್ ವೇಗಳಲ್ಲಿ ಉತ್ತಮ ವೈಶಿಷ್ಟ್ಯವಾಗಿದೆ. ಹೆದ್ದಾರಿಗಳಲ್ಲಿ ಕಡಿಮೆ ವಾಹನಗಳು ಇರುವುದರ ಜೊತೆಗೆ ಅಡ್ಡದಿಡ್ಡಿ ಯಾರೂ ವಾಹನ ಓಡಿಸುವುದಿಲ್ಲ. ಅಲ್ಲದೇ ರಸ್ತೆ ಎಚ್ಚರಿಕೆ ಚಿಹ್ನೆಗಳು ಸರಿಯಾದ ಕ್ರಮದಲ್ಲಿ ಇರುವುದರಿಂದ ADAS ಹೆದ್ದಾರಿಗಳಲ್ಲಿ ಕಾರುಗಳನ್ನು ಉತ್ತಮವಾಗಿ ನಿಯಂತ್ರಿಸುತ್ತದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ನೀವು ADAS ಅನ್ನು ಹೊಂದಿರುವ ಕಾರಣಕ್ಕೆ ಮಾತ್ರ ಕಾರನ್ನು ಖರೀದಿಸಿದರೆ, ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಾಗಿಲ್ಲ. ನೀಡಿದರೂ ಸಂಪೂರ್ಣ ಅದರ ಮೇಲೆ ಅವಲಂಭಿತವಾಗುವುದು ತುಂಬಾ ಅಪಾಯಕಾರಿ ಎಂಬುದನ್ನು ನೆನಪಿಡಿ. ನಿಮ್ಮಲ್ಲಿ ಎಷ್ಟು ಮಂದಿ ಅಡಾಸ್ ತಂತ್ರಜ್ಞಾನವಿರುವ ಕಾರುಗಳನ್ನು ಹೊಂದಿದ್ದೀರಿ, ಅವುಗಳೊಂದಿಗೆ ನಿಮ್ಮ ಅನುಭವವನ್ನು ಕಮೆಂಟ್‌ನಲ್ಲಿ ಹಂಚಿಕೊಳ್ಳಿ. ನಿಮ್ಮ ಮಾಹಿತಿ ಇತರರಿಗೆ ಅನುಕೂಲವಾಗಬಹುದು.

More from DriveSpark

Article Published On: Tuesday, March 26, 2024, 8:30 [IST]
English summary
What is adas feature how does it work must know these details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+