ಬೇಸಿಗೆಯಲ್ಲಿ ಹೆಲ್ಮೆಟ್ ಬಳಸುವಾಗ ಇರಲಿ ಎಚ್ಚರ! ಸಿಂಪಲ್ ಟಿಪ್ಸ್ ಇದೆ ನೋಡಿ...
ಹೆಲ್ಮೆಟ್ ಕೊಳಕಿನಿಂದಿದ್ದರೇ ಹಲವು ಸಮಸ್ಯೆಗಳು ಎದುರಾಗುತ್ತವೆ ಎಂಬುದು ನಿಮಗೆ ಗೊತ್ತೇ? ಭಾರತದಲ್ಲಿ ಶೇ70 ರಷ್ಟು ಮಂದಿ ಹೆಲ್ಮೆಟ್ ಬಳಕೆದಾದರರು ಪೊಲೀಸರ ಭಯದಿಂದ ಮಾತ್ರ ಬಳಸುತ್ತಿದ್ದಾರೆ. ಇವರೆಲ್ಲರೂ ಹೆಲ್ಮೆಟ್ ಸ್ವಚ್ಚತೆ ಕುರಿತು ಯೋಚಿಸುವುದೇ ಇಲ್ಲ. ಹೆಲ್ಮೆಟ್ ಸ್ವಚ್ಚಗೊಳಿಸದಿದ್ದರೇ ಕೂದಲು ಉದುರುವುದು, ಕೆರೆತ, ತಲೆ ನೋವಿನಂತಹ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಇದಕ್ಕೆ ಪರಿಹಾರವೇ ಇಲ್ಲವೇ ಎಂದು ಕೇಳಿದ್ರೆ, ಇದೆ. ನಿಮ್ಮ ಹೆಲ್ಮೆಟ್‌ಗಳನ್ನು ತಾಜಾ ಮತ್ತು ಸ್ವಚ್ಛವಾಗಿಡಲು ಕೆಲವು ಸಲಹೆಗಳಿವೆ, ಈ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಸ್ವಚ್ಛ ಮತ್ತು ಆರೋಗ್ಯಕರವಾದ ಹೆಲ್ಮೆಟ್ ಅನ್ನು ನಿರ್ವಹಿಸಬಹುದು. ಇದು ನಿಮ್ಮ ರೈಡ್ ಅನುಭವವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಸುರಕ್ಷತೆಗೂ ಹೆಚ್ಚಿನ ಆಧ್ಯತೆ ನಿಡಿದಂತಾಗುತ್ತದೆ.

ವೆಂಟಿಲೇಷನ್ ನಿರ್ವಹಣೆ: ನಿಮ್ಮ ಹೆಲ್ಮೆಟ್‌ನಲ್ಲಿ ಇರುವ ಕೆಲವು ದ್ವಾರಗಳಲ್ಲಿ ಸಂಗ್ರಹವಾದ ಧೂಳು ಅಥವಾ ಕೀಟಗಳನ್ನು ತೆಗೆದುಹಾಕಿ. ಕೊಳೆಯನ್ನು ಸ್ವಚ್ಚಗೊಳಿಸುವ ಮೂಲಕ ಹೆಲ್ಮೆಟ್‌ನೊಳಗೆ ಸರಿಯಾದ ಗಾಳಿಯ ಹರಿವನ್ನು ತರಿಸಬಹುದು. ಮೃದುವಾದ ಬ್ರಷ್ ಬಳಸಿ ಅದರ ಗಾಳಿಯ ದ್ವಾರಗಲನ್ನು ಸ್ವಚ್ಚಗೊಳಿಸುವುದು ಉತ್ತಮ. ಇದು ಕೂಡ ವಾಸನೆಯ ಶೇಖರಣೆಯನ್ನು ತಡೆದು ಹೊರ ತಳ್ಳುತ್ತದೆ.
ಬೆವರು ನಿರ್ವಹಣೆ: ಬೇಸಿಗೆಯಲ್ಲಿ ಎಂಥವರಿಗಾದ್ರೂ ಬೆವರು ಕಾಮನ್ ಸಮಸ್ಯೆ. ಅದರಲ್ಲೂ ಗಂಟೆಗಟ್ಟಲೇ ಟ್ರಾಫಿಕ್‌ನಲ್ಲಿ ಸವಾರಿ ಮಾಡುವಾಗ ಬೆವರು ಹೆಲ್ಮೆಟ್‌ನಲ್ಲಿ ಶೇಖರೆಣೆಯಾಗಿ ದುರ್ವಾಸನೆಗೆ ಕಾರಣವಾಗುತ್ತದೆ. ಹಾಗಾಗಿ ನಿಮ್ಮ ಕೂದಲನ್ನು ಮುಚ್ಚಲು ಕ್ಯಾಪ್ ಅಥವಾ ವಸ್ತ್ರವನ್ನು ಬಳಸುವುದು ಉತ್ತಮ. ಕೆಲವು ಹೆಲ್ಮೆಟ್‌ಗಳು ಅಂತರ್ನಿರ್ಮಿತವಾಗಿ ತೆಗೆಯಬಹುದಾದ ಮತ್ತು ತೊಳೆಯಬಹುದಾದ ಸ್ವೆಟ್-ವಿಕಿಂಗ್ ಲೈನರ್‌ಗಳೊಂದಿಗೆ ಬರುತ್ತವೆ. ಅವನ್ನು ಬಳಸಿದರೆ ಇನ್ನೂ ಉತ್ತಮ.

ಹೀಗೆ ಸ್ವಚ್ಛಗೊಳಿಸಿ: ಹೆಲ್ಮೆಟ್ ಅನ್ನು ಆಗಾಗ್ಗೆ ತೊಳೆಯುವುದು, ಅದರಲ್ಲಿನ ಧೂಳು, ಕೊಳಕನ್ನು ತೆಗೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಏಕೆಂದರೆ ನಾವು ವರ್ಷಾನುಗಟ್ಟಲೇ ಸ್ವಚ್ಚಗೊಳಿಸದೇ ಬಳಕೆ ಮಾಡುತ್ತೇವೆ. ವಿಶೇಷವಾಗಿ ಲಾಂಗ್ ರೈಡ್ ನಂತರ ಹೆಲ್ಮೆಟ್ ಒಳಗೆ ಮತ್ತು ಹೊರಗೆ ಬೆಚ್ಚಗಿನ ನೀರಿನ ಜೊತೆಗೆ ಸೋಪ್ ಅನ್ನು ಬಳಸಿ. ಬಟ್ಟೆ ಅಥವಾ ಸ್ಪಂಜಿನೊಂದಿಗೆ ಹೆಲ್ಮೆಟ್ ಅನ್ನು ನಿಧಾನವಾಗಿ ಸ್ಕ್ರಬ್ ಮಾಡಿದ್ರೆ ಬಹುತೇಕ ಹೆಲ್ಮೆಟ್ ಸ್ವಚ್ಚಗೊಳ್ಳುತ್ತದೆ.
ಇದಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸ್ಪ್ರೇಗಳು ಮತ್ತು ಕ್ಲೀನರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ನಿಮ್ಮ ಹೆಲ್ಮೆಟ್ ತೆಗೆಯಬಹುದಾದ ಲೈನರ್‌ಗಳು ಮತ್ತು ಪ್ಯಾಡ್‌ಗಳನ್ನು ಹೊಂದಿದ್ದರೆ, ಅವುಗಳನ್ನು ತೆಗೆದು ಪ್ರತ್ಯೇಕವಾಗಿ ಸ್ವಚ್ಛಗೊಳಿಸಿ. ನಿಮ್ಮ ಹೆಲ್ಮೆಟ್ ಅನ್ನು ಮತ್ತೆ ಜೋಡಿಸುವ ಮೊದಲು ಅವುಗಳನ್ನು ಸಂಪೂರ್ಣವಾಗಿ ಒಣಗಿಸುವುದನ್ನು ಮರೆಯದಿರಿ. ತೇವಾಂಶವಿದ್ದು ಹಾಗೆಯೇ ಬಳಸಿದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ವಾಸನೆ ನಿಯಂತ್ರಣ: ನಿಮ್ಮ ಹೆಲ್ಮೆಟ್ ದುರ್ವಾಸನೆ ಹೊಂದಿದ್ದರೇ ಹೆಲ್ಮೆಟ್ ಡಿಯೋಡರೈಸರ್ ಅನ್ನು ಬಳಸಬಹುದು, ಇದು ಕೇವಲ ಆ ಕ್ಷಣಕ್ಕೆ ಮಾತ್ರ. ಆದ್ರೆ ವಾಸನೆ ಇದ್ದಲ್ಲಿ ಅದನ್ನು ಕಂಡಿತ ಸ್ವಚ್ಚಗೊಳಿಸುವುದು ತುಂಬಾ ಮುಖ್ಯ. ಮೇಲೆ ತಿಳಿಸಿದ ವಿಧಾನದಲ್ಲಿ ಹೆಲ್ಮೆಟ್ ತೊಳೆದು ಇನ್ನೊಂದು ಬಾರಿ ಸ್ಪ್ರೇ ಹೊಡೆದು ನಿರ್ವಹಿಸುವ ಮೂಲಕ ಹೆಲ್ಮೆಟ್‌ಗೆ ಇರುವ ಯಾವುದೇ ಸಮಸ್ಯೆಗಳನ್ನು ತಪ್ಪಿಸಬಹುದು.
ಸೂರ್ಯನ ರಕ್ಷಣೆ: ನೇರ ಸೂರ್ಯನ ಬೆಳಕಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಹೆಲ್ಮೆಟ್ ಗಳು ನಿಧಾನವಾಗಿ ಹಾನಿಗೊಳಗಾಗುತ್ತವೆ. ಬೈಕ್ ಪಾರ್ಕ್ ಮಾಡಿ ಹೆಲ್ಮೆಟ್ ಅನ್ನು ಹ್ಯಾಂಡಲ್ ಬಾರ್‌ಗೆ ಬಿಟ್ಟೋಗುವ ಬದಲು ಜೊತೆಗೆ ಕೊಂಡೊಯ್ದರೆ ಉತ್ತಮ. ಬಳಕೆಯಲ್ಲಿ ಇಲ್ಲದಿದ್ದಾಗ ಅದನ್ನು ನಿಮ್ಮ ಮೋಟಾರ್‌ಸೈಕಲ್‌ನ ಸೀಟಿನ ಅಡಿಯಲ್ಲಿ ಅಥವಾ ಮನೆಯಲ್ಲಿಟ್ಟುಕೊಂಡರೆ ಸಂಭವನೀಯ ಹಾನಿ ತಪ್ಪಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








