Car mileage Tips: ಮೈಲೇಜ್ ಬೇಕಾದ್ರೆ ವಿಂಡೋ ತೆರೆಯಬೇಡಿ! ಯಾರೂ ತಿಳಿಸದ ಮಾಹಿತಿ!

Car mileage Tips: ಭಾರತದಲ್ಲಿ ಎರಡು ದಶಕಗಳ ಹಿಂದೆ ಕಾರು ಖರೀದಿಸಬೇಕಾದ್ರೆ ಅದು ಶ್ರೀಮಂತರಿಗೆ ಮಾತ್ರ ಸಾಧ್ಯವಾಗುತ್ತಿತ್ತು. ಆದ್ರೆ ಈಗ ಕಾಲ ಬದಲಾಗಿದೆ, ಪ್ರತಿ ಮಧ್ಯಮ ವರ್ಗದವರು ಕೂಡ ಕಾರನ್ನು ಖರೀದಿಸುವ ಸಾಮರ್ಥ್ಯವಿದೆ. ಜೊತೆಗೆ ಕಾರು ಡೀಲರ್‌ಗಳು ಹಲವು ಇಎಮ್‌ಐ ಆಯ್ಕೆಗಳನ್ನು ನೀಡುವ ಮೂಲಕ ಖರೀದಿಯನ್ನು ಇನ್ನೂ ಸುಲಭಗೊಳಿಸಿದ್ದಾರೆ.

ಕಾರು ಖರೀದಿಸುವುದು ಹಲವರ ಕನಸಾದರೆ ಅದನ್ನು ನಿರ್ವಣೆ ಮಾಡುವುದು ಮತ್ತೊಂದು ಸವಾಲಾಗಿರುತ್ತದೆ. ಹಾಗಾಗಿಯೇ ಭಾರತದಲ್ಲಿ ಬಹುತೇಕರು ಕಾರು ಖರೀದಿಗೂ ಮುನ್ನ ಕಾರಿನ ಮೈಲೇಜ್ ಬಗ್ಗೆ ತಿಳಿದು ಖರೀದಿಸುತ್ತಾರೆ. ಆದ್ರೆ ಆ ಕಾರು ಕಂಪನಿ ಹೇಳುವಷ್ಟು ಮೈಲೇಜ್ ನೀಡುವುದಿಲ್ಲ. ಇದಕ್ಕೂ ಹಲವು ಕಾರಣಗಳಿವೆ. ನಗರ ಪ್ರಯಾಣಗಳಲ್ಲಿ ಯಾವುದೇ ಕಾರಾಗಲಿ ಕಂಪನಿ ಹೇಳಿದಂತೆ ಮೈಲೇಜ್ ನೀಡುವುದಿಲ್ಲ.

car-mileage-tips-dont-open-window-while-driving-highways

ಏಕೆಂದರೆ ಹೆಚ್ಚಾಗಿ ಕ್ಲಚ್ ಹಾಗೂ ಗೇರ್‌ಗಳನ್ನು ಬಳಸುವುದರಿಂದ ಮೈಲೇಜ್ ಕಡಿಮೆಯಾಗುತ್ತದೆ. ಹಾಗಾಗಿಯೇ ಕಂಪನಿ ಹೇಳಿದ ಮೈಲೇಜ್ ಅನ್ನು ಹೆದ್ದಾರಿಯಲ್ಲಿ ಪರೀಕ್ಷಿಸಬಹುದು. ಆದ್ರೂ ಕೆಲವರಿಗೆ ಈ ಮೈಲೇಜ್‌ನಲ್ಲಿ ಏರಿಳಿತ ಕಾಣುತ್ತದೆ, ಏಕೆ ಗೊತ್ತಾ? ಕಾರಿನ ವಿಂಡೋವನ್ನು ತೆರೆದು ಚಾಲನೆ ಮಾಡಿದ್ರೆ ಅಂದುಕೊಂಡ ಮೈಲೇಜ್ ಸಿಗೋದಿಲ್ಲ ಎಂಬುದನ್ನು ಎಲ್ಲರು ತಿಳಿದಿರಬೇಕು.

ಕಾರಿನ ಗಾಜು ತೆರೆದಿದ್ದರೆ, ಗಾಳಿಯು ನೇರವಾಗಿ ಕಾರಿನೊಳಗೆ ಬರುತ್ತದೆ. ಇದರಿಂದಾಗಿ ಕಾರಿನ ವೇಗವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಬಲದ ಅಗತ್ಯವಿರುತ್ತದೆ. ಹೆಚ್ಚು ಬಲ ಎಂದರೆ ಎಂಜಿನ್ ಮೇಲೆ ಹೆಚ್ಚಿನ ಹೊರೆ ಬೀಳಬೇಕು. ಎಂಜಿನ್ ಮೇಲೆ ಹೆಚ್ಚಿನ ಲೋಡ್ ಬಿದ್ದರೇ ಇಂಧನ ಹೆಚ್ಚಾಗಿ ಖಾಲಿಯಾಗುವುದಲ್ಲದೇ ಕಾರಿನ ಮೈಲೇಜ್ ಕೂಡ ಕಡಿಮೆಯಾಗಬಹುದು.

car-mileage-tips-dont-open-window-while-driving-highways

ಯಾವುದೇ ಕಾರು ಕಂಪನಿಯಾಗಲಿ ಕಾರನ್ನು ವಾಯುಬಲವಿಜ್ಞಾನಕ್ಕೆ (ಏರೋಡೈನಾಮಿಕ್) ಅನುಗುಣವಾಗಿ ವಿನ್ಯಾಸಗೊಳಿಸುತ್ತದೆ. ಇದರ ಮುಖ್ಯ ಉದ್ದೇಶ ಗಾಳಿಯನ್ನು ಹಿಂದಕ್ಕೆ ತಳ್ಳಿ ಕಾರು ಸುಲಭವಾಗಿ ಮುಂದೆ ಸಾಗುವುದಾಗಿದೆ. ಆದರೆ ಕಾರಿನ ಗಾಜನ್ನು ತೆರೆದಾಗ, ಕಾರಿನ ವಾಯುಬಲವೈಜ್ಞಾನಿಕತೆಯು ಹದಗೆಡಲು ಪ್ರಾರಂಭಿಸುತ್ತದೆ. ಇದು ಮೈಲೇಜ್ ಮೇಲೆ ನೇರ ಪರಿಣಾಮ ಬೀರುತ್ತದೆ.

ಹೆದ್ದಾರಿಯಲ್ಲಿ ಕಾರಿನ ವೇಗವು ತುಂಬಾ ವೇಗವಾಗಿರುತ್ತದೆ, ಆದ್ದರಿಂದ ಕಾರಿನ ಗಾಜನ್ನು ತೆರೆದಾಗ ವೇಗವು ಕಡಿಮೆಯಾಗುತ್ತದೆ. ಇದರ ಬಗ್ಗೆ ನಮಗೆ ಗೊತ್ತೇ ಆಗುವುದಿಲ್ಲ, ಆದ್ರೆ ಕಾರು ಹೆಚ್ಚಿನ ಬಲವನ್ನು ಪಡೆದು ಮುನ್ನುಗ್ಗುತ್ತಿರುತ್ತದೆ. ಹಾಗಾಗಿ ವಾಹನದ ಪರ್ಫಾಮೆನ್ಸ್ ಮತ್ತು ಮೈಲೇಜ್ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರದಿರಲು, ಹೆದ್ದಾರಿಯಲ್ಲಿ ಚಾಲನೆ ಮಾಡುವಾಗ ಕಾರಿನ ಗಾಜನ್ನು ತೆರೆಯಬಾರದು.

ಹಾನಿಯಾಗುವ ಸಾಧ್ಯತೆ: ಹೆದ್ದಾರಿಯಲ್ಲಿ ಕಾರಿನ ವಿಂಡೋಗಳನ್ನು ತೆರೆಯುವ ಮೂಲಕ ಧೂಳು ಮತ್ತು ಕೀಟಗಳು ಸಹ ಕಾರಿನಲ್ಲಿ ಬರಬಹುದು. ಇದಲ್ಲದೆ, ಧೂಳಿನಿಂದಾಗಿ ನಿಮ್ಮ ಕಾರಿನ ಒಳಾಂಗಣಕ್ಕೂ ಹಾನಿಯಾಗಬಹುದು. ಕಾರಿನ ಗಾಜನ್ನು ತೆರೆದಿಟ್ಟುಕೊಂಡು ಹೆದ್ದಾರಿಯಲ್ಲಿ ಚಾಲನೆ ಮಾಡುವಾಗ ಅಕಸ್ಮಾತ್ ಅಪಾಯವಾದರೆ ಗಾಜು ತೆರೆದಿರುವುದರಿಂದ ಗಾಯಗಳು ಕೂಡ ಹೆಚ್ಚಾಗಿ ಬೀಳುತ್ತವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, April 3, 2024, 8:30 [IST]
English summary
Car mileage tips dont open window while driving highways
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+