ಎಫ್1 ರೇಸ್ ಗೆ, ಫೋರ್ಸ್ ಇಂಡಿಯಾ ರೆಡಿ

2011ರ ಫೋರ್ಸ್ ಇಂಡಿಯಾ ತಂಡದಲ್ಲಿ ಈ ಬಾರಿಯೂ ಸಿಲ್ವರ್ ಸ್ಟೋನ್ ತಂಡದ ಆಂಡ್ರೈನ್ ಸುಟಿಲ್ ಮುಂದುವರೆಯಲಿದ್ದಾರೆ. ಈ ತಂಡಕ್ಕೆ ಪಾಲ್ ಡೆ ರೆಸ್ತಾ ಎಫ್1 ಚಾಲಕರಾಗಿ ನೇಮಕಗೊಂಡಿದ್ದಾರೆ. ದೀರ್ಘಕಾಲದ ಪಾಲುದಾರಿಕೆಯೊಂದಿಗೆ ನಿಕೊ ಹಲ್ಕೆನ್ ಬರ್ಗ್ ಫೋರ್ಸ್ ಇಂಡಿಯಾಕ್ಕೆ ಬಂದಿದ್ದಾರೆ. ದಕ್ಷಿಣ ಜರ್ಮನಿಯ 27 ವರ್ಷ ಪ್ರಾಯದ ಆಂಡ್ರೈನ್ ಕಳೆದ ವರ್ಷ ನಡೆದ ಎಫ್ 1 ರೇಸ್ ನಲ್ಲಿ ಪಡೆದ 47 ಅಂಕದ ನೆರವಿನಿಂದ ಭಾರತ ಕಳೆದ ವರ್ಷ 7ನೇ ಸ್ಥಾನ ಪಡೆದಿತ್ತು.
24 ವರ್ಷ ಪ್ರಾಯದ ಪಾಲ್ ಡೆ ರೆಸ್ತಾ, ಜರ್ಮನಿಯ 23 ವರ್ಷ ಪ್ರಾಯದ ನಿಕೊ ಹಲ್ಕೆನ್ ಬರ್ಗ್ ಎಫ್ 1 ರೇಸ್ ಗೆ ಆಯ್ಕೆಯಾಗಿದ್ದಾರೆ. ಜೂನಿಯರ್ ವಿಭಾಗಕ್ಕೆ ನಡೆದ ಫಾರ್ಮುಲಾ ರೇಸ್ ನಲ್ಲಿ ಕಳೆದ ವರ್ಷ ನಿಕೊ ಅತ್ಯುತ್ತಮ ಪ್ರದರ್ಶನ ನೀಡಿದ್ದರು. "ಒಂದು ವರ್ಷ ಫಾರ್ಮುಲಾ ಒನ್ ನಲ್ಲಿ ಭಾಗವಹಿಸಿದ ಆಂಡ್ರೈನ್ ಸೇರಿದಂತೆ ನಾವು ಅತ್ಯುತ್ತಮ ತಂಡ ಹೊಂದಿದ್ದೇವೆ" ಎಂದು ಫೋರ್ಸ್ ಇಂಡಿಯಾ ತಂಡದ ಮುಖ್ಯಸ್ಥ ಮತ್ತು ಚೇರ್ಮನ್ ಡಾ. ವಿಜಯ್ ಮಲ್ಯ ಹೇಳಿದ್ದಾರೆ.


Click it and Unblock the Notifications








