F1 ರೇಸ್ ಕಾರ್ ಇದೀಗ ಪಿಂಕ್ ಮಯ- ಟ್ರೋಲ್ ಹೈಕ್ಳಿಗೆ ಆಹಾರವಾದ ವಿಜಯ್ ಮಲ್ಯ..!!
2017ರ ಫೋರ್ಸ್ ಇಂಡಿಯಾ F1 ರೇಸ್ ಕಾರ್ ವಿನ್ಯಾಸದಲ್ಲಿ ಮಹತ್ತರ ಬದಲಾವಣೆ ತರಲಾಗಿದ್ದು, ಪಿಂಕ್ ಬಣ್ಣದೊಂದಿಗೆ ಮಿಂಚುತ್ತಿದೆ. ಆದ್ರೆ ಪಿಂಕ್ ಬಣ್ಣದ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ.
ಪಿಂಕ್ ಬಣ್ಣದೊಂದಿಗೆ ಮಿಂಚುತ್ತಿರುವ ಫೋರ್ಸ್ ಇಂಡಿಯಾದ F1 ರೇಸ್ ಕಾರು ಸದ್ಯಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹೊಸ ರೇಸ್ ಕಾರಿನ ಪಿಂಕ್ ಬಣ್ಣದ ಬಗ್ಗೆ ಹತ್ತಾರು ಜೋಕ್‌ಗಳು ಹರಿದಾಡುತ್ತಿದ್ದು, ವಿಜಯ್ ಮಲ್ಯ ವಿರುದ್ಧವೂ ಟೀಕೆಗಳು ಕೇಳಿಬರುತ್ತಿವೆ.

ಕಳೆದ 2 ದಿನಗಳಿಂದಷ್ಟೇ ಫಾರ್ಮುಲ್ 1 ರೇಸ್ ಕಾರಿನ ಬಣ್ಣ ಬದಲಾವಣೆ ತಂದಿರುವ ಫೋರ್ಸ್ ಇಂಡಿಯಾ ನಡೆ ಅಪಹಾಸ್ಯಕ್ಕೆ ಕಾರಣವಾಗಿದೆ. ಪಿಂಕ್ ಬಣ್ಣದ ಕುರಿಕು ಸಾಕಷ್ಟು ಟೀಕೆಗಳು ಕೇಳಿಬಂದಿದ್ದು, ವಿಜಯ್ ಮಲ್ಯಗೆ ಸಾಮಾಜಿಕ ಜಾಲ ತಾಣಗಳಲ್ಲಿ ಜನ ಛೀ.. ಥೂ...ಎನ್ನುತ್ತಿದ್ದಾರೆ.

ಹೊಸ ಮಾದರಿಯ F1 ರೇಸ್ ಕಾರಿಗೆ ಹೊಸ ಪ್ರಾಯೋಜಕತ್ವದ ಸಿಕ್ಕಿದ್ದು, ಬಣ್ಣದಲ್ಲಿ ಭಾರೀ ಬದಲಾವಣೆ ತರಲಾಗಿದೆ. ಆಸ್ಪ್ರೀಯನ್ ಮೂಲದ BWT ಜೊತೆ ಒಪ್ಪಂದ ಮಾಡಿಕೊಂಡಿರುವ ಫೋರ್ಸ್ ಇಂಡಿಯಾ, ಕಾರಿನ ಬಣ್ಣವನ್ನು ಪಿಂಕ್ ಮಯ ಮಾಡಲಾಗಿದ್ದು, F1 ರೇಸ್ ಕಾರಿಗೆ ಹೊಸ ಲುಕ್ ಕೊಡಲಾಗಿದೆ.

ಆದ್ರೆ ಕಾರಿನ ಹೊಸ ವಿನ್ಯಾಸವನ್ನೇ ಮುಂದಿಟ್ಟುಕೊಂಡಿರುವ ಕೆಲವರು ಮಲ್ಯ ವಿರುದ್ಧ ಟೀಕೆ ಶುರುಮಾಡಿದ್ದಾರೆ. ಸಾಲ ಮರುಪಾವತಿ ಮಾಡದೆ ವಿದೇಶದಲ್ಲಿ ವಿಲಾಸಿ ಜೀವನ ನಡೆಸುತ್ತಿರುವ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪಿಂಕ್ ಬಣ್ಣದ ವಿರುದ್ಧ ಟ್ರೋಲ್ ಆರಂಭಿಸಿದ್ದಾರೆ.

ಪಿಂಕ್ ಬಣ್ಣದ ಬಗ್ಗೆ ಸಮರ್ಥನೆ ನೀಡಿದ್ದ ಫೋರ್ಸ್ ಇಂಡಿಯಾ ನಿರ್ದೇಶಕ ವಿಜಯ ಮಲ್ಯ, BWTಯೊಂದಿಗಿನ ಪ್ರಾಯೋಜಕ್ವದಿಂದಾಗಿ ಬಣ್ಣದಲ್ಲಿ ಮಾರ್ಪಾಡು ತರಲಾಗಿದೆ ಎಂದಿದ್ದರು.

ಆದರೆ ಟ್ವಿಟರ್ ಮತ್ತು ಫೇಸ್‌ಬುಕ್‌ಗಳಲ್ಲಿ ಪಿಂಕ್ ಬಣ್ಣದ ಕುರಿತು ಅಪಹಾಸ್ಯ ಮಾಡಲಾಗಿದ್ದು, F1 ಕಾರ್‌ನ್ನು ಪಿಂಕ್ ಪ್ಯಾಂಥರ್ ಆಟಿಕೆ ಕಾರಿಗೆ ಹೋಲಿಕೆ ಮಾಡಿದ್ದಾರೆ.

ಇದಷ್ಟೇ ಅಲ್ಲದೇ F1 ಕಾರ್ ಚಾಂಪಿಯನ್‌ಗಳ ವಿರುದ್ಧ ಟ್ರೋಲ್ ನಡೆಯುತ್ತಿದ್ದು, ರೇಸ್ ಕಾರ್ ಚಾಲಕರ ಬಟ್ಟೆಗಳಿಗೆ ಪಿಂಕ್ ಬಣ್ಣವನ್ನು ನೀಡಲು ಹೊಸ ಪ್ರಾಯೋಜಕ್ವತ ಪಡೆಯುವಂತೆ ಅಪಹಾಸ್ಯ ಮಾಡಲಾಗುತ್ತಿದೆ.

ಕೇವಲ ಜೋಕ್‌ಗಳಷ್ಟೇ ಅಲ್ಲದೇ ಇದಕ್ಕಾಗಿ ಕಾರ್ಟೂನ್‌ಗಳನ್ನು ಬಳಕೆ ಮಾಡಲಾಗುತ್ತಿದ್ದು, ಪಿಂಕ್ ವಿರುದ್ಧ ಟ್ರೋಲ್‌ಗಳ ಸುರಿಮಳೆಯಾಗುತ್ತಿವೆ.

ಒಟ್ಟಿನಲ್ಲಿ ಪಿಂಕ್ ಬಣ್ಣ ಬದಲಾವಣೆ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಇದೇ ತಿಂಗಳು ಆಸ್ಟ್ರೇಲಿಯಾ ಗ್ರ್ಯಾಂಡ್ ಫಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಫೋರ್ಸ್ ಇಂಡಿಯಾದ F1 ಕಾರ್ ಸ್ಪರ್ಧೆ ನಡೆಸಲಿದೆ. ಆದ್ರೆ ಸ್ಪರ್ಧೆ ಮುನ್ನವೇ ಅಪಹಾಸ್ಯಕ್ಕಿಡಾಗುತ್ತಿದ್ದು, ಮಲ್ಯ ನಡೆಗೂ ಆಕ್ರೋಶ ವ್ಯಕ್ತವಾಗುತ್ತಿದೆ.
ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು

ಸೇವೆಗೆ ಸಿದ್ಧವಾಯ್ತು ಭಾರತದ ಅತಿ ಉದ್ದದ ಸುರಂಗ ಮಾರ್ಗ- ಏನೀದರ ವಿಶೇಷತೆ ಗೊತ್ತಾ

ಕರೆಯದೆ ಮನೆಗೆ ಬಂದ ಅತ್ಯಂತ ಕೆಟ್ಟ ಅತಿಥಿ ಈತ..!!

ರಾಜ್ಯ ಬಜೆಟ್ 2017: ಬೆಂಗಳೂರಿನಲ್ಲಿ ಇನ್ಮುಂದೆ ರಸ್ತೆಗಿಳಿಯಲಿವೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್ಸು

ಈ ಹೆಲಿಕಾಪ್ಟರ್ ಹತ್ತುವುದಕ್ಕೆ ಖಂಡಿತ ಎರಡು ಗುಂಡಿಗೆ ಇರಬೇಕು ಬಿಡಿ..!
ಡ್ರೈವ್‌ಸ್ಪಾರ್ಕ್‌ನಲ್ಲಿ ನೋಡಬೇಕಾದ ಫೋಟೋ ಗ್ಯಾಲರಿ

ನಿನ್ನೆಯಷ್ಟೇ ಬಿಡುಗಡೆಗೊಂಡಿರುವ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ 750 ಬೈಕಿನ ನೋಡಲೇ ಬೇಕಾದ ಗ್ಯಾಲರಿ ಇಲ್ಲಿದೆ...


Click it and Unblock the Notifications








