ಸಾಲದ ಸುಳಿಯಲ್ಲಿ ಮೋಜು, ಮಸ್ತಿ; ಬ್ಯಾಡ್ ಟೈಮ್ ಫಾರ್ ಮಲ್ಯ
ಸಾವಿರಾರು ಕೋಟಿ ರುಪಾಯಿಗಳ ಸಾಲದ ಸುಳಿಯಲ್ಲಿ ಸಿಲುಕಿರುವ 'ಕಿಂಗ್ ಆಫ್ ಗುಡ್ ಟೈಮ್ಸ್' ಉದ್ಯಮಿ ವಿಜಯ್ ಮಲ್ಯ, ದೇಶ ತೊರೆದಿದ್ದಾರೆಯೇ ಎಂಬುದು ಭಾರಿ ಅನುಮಾನಕ್ಕೆ ಕಾರಣವಾಗಿದೆ. ಸಾರ್ವಜನಿಕ ರಂಗದ ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದ 13 ಬ್ಯಾಂಕುಗಳ ಒಕ್ಕೂಟದಿಂದ ಪಡೆದಿರುವ 7,000 ಕೋಟಿ ರುಪಾಯಿಗಳ ಸಾಲವನ್ನು ಮಲ್ಯ ಮರು ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಮಲ್ಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ.
ಸದಾ ಮೋಜು, ಮಸ್ತಿಗಳಲ್ಲಿ ತಲ್ಲೀನರಾಗಿರುವ ಮಲ್ಯ ವಿಲಾಸಿ ಜೀವನಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದರು. ಬೆಟ್ಟ ಹತ್ತಿದವ ಇಳಿಯಲೇಬೇಕು ಎಂಬಂತೆ ಮಲ್ಯ ಶೋಕಿ ಜೀವನಕ್ಕೆ ಪೂರ್ಣ ವಿರಾಮ ಬೀಳತೊಡಗಿದೆ. ಮಲ್ಯ ಐಷಾರಾಮಿ ಜೀವನದ ಕೆಲವೊಂದು ಜಲಕ್ ಇಲ್ಲಿದೆ.

ವಿಜಯ್ ಮಲ್ಯ ಅವರ ವಿಲಾಸಿ ಜೀವನ ಎಷ್ಟು ಮಿತಿ ಮೀರಿತ್ತು ಎಂಬುದಕ್ಕೆ ಏರ್ ಬಸ್ ಎ319 ಖಾಸಗಿ ವಿಮಾನವೇ ಸಾಕ್ಷಿಯಾಗಿದೆ. ಈಗ ಬಂದಿರುವ ಸುದ್ದಿಯಂತೆ ಸಾಲವನ್ನು ತೀರಿಸಲು ತನ್ನ ಪ್ರೀತಿಯ ಪ್ರೇಯಸಿಯನ್ನು ಹರಾಜಿಗಿಡಲಾಗಿದೆ.

ಬಹುಶ: ಇದೇ ಕಾರಣಕ್ಕಾಗಿ ವಿಜಯ್ ಮಲ್ಯ ಅವರಿಗೆ ಬೀರು-ಬಾರು-ಕಾರು ಎಂಬ ಪದ ಹೆಚ್ಚು ಸೂಕ್ತವೆನಿಸುತ್ತದೆ.

ಮಲ್ಯ ಅವರ ಖಾಸಗಿ ವಿಮಾನದಲ್ಲಿ ಆಪ್ತ ವಲಯದ ಮಂದಿಗೆ 22 ಮಂದಿಗೆ ಸುಖಕರವಾಗಿ ಪ್ರಯಾಣಿಸುವಷ್ಟು ವ್ಯವಸ್ಥೆ ಕೊಡಲಾಗಿದೆ. ಈ ಆಪ್ತ ವಿಭಾಗದಲ್ಲಿ ಯಾರೆಲ್ಲ ಇದ್ದಾರೆ ಎಂಬುದು ಅಸ್ಪಷ್ಟ.

ಪದೇ ಪದೇ ಲಂಡನ್ ಹಾಗೂ ಅಮೆರಿಕಕ್ಕೆ ಪ್ರವಾಸವನ್ನು ಹಮ್ಮಿಕೊಳ್ಳುವ ಮಲ್ಯದ ಖಾಸಗಿ ವಿಮಾನವು 6000 ಕ್ಯೂಬಿಕ್ ಅಡಿಯಷ್ಟು ಲಿವಿಂಗ್ ಪ್ರದೇಶವನ್ನು ಹೊಂದಿದೆ.

ಹೊಚ್ಚ ಹೊಸ ಏರ್ ಬಸ್ ಎ319 ವಿಮಾನವು ಕೋಟಿಗಟ್ಟಲೆ ಬೆಲೆ ಬಾಳುತ್ತದೆ. ಆದರೆ ಒಂದು ದಶಕದಷ್ಟು ಹಳೆಯದಾದ ಮಲ್ಯ ವಿಮಾನದಲ್ಲಿ ತಮ್ಮ ಬಯಕೆಗಳಿಗೆ ಅನುಸಾರವಾಗಿ ಅನೇಕ ಬದಲಾವಣೆಗಳನ್ನು ತರಲಾಗಿದ್ದು, ಮತ್ತಷ್ಟು ದುಬಾರಿಯೆನಿಸುತ್ತದೆ.

ಖಾಸಗಿ ಬೆಡ್ ರೂಂ, ಶೌಚಾಲಯ, ಲಿವಿಂಗ್ ಪ್ರದೇಶ,
ಕಚೇರಿ ಜೊತೆಗೆ ಮದ್ಯ ಲಹರಿಗೂ ವಿಶೇಷ ಪ್ರಾಮುಖ್ಯತೆಯನ್ನು ಕೊಡಲಾಗಿದೆ.

ಮಲ್ಯ ಅವರ ಜೆಟ್ 319 ವಿಟಿ-ವಿಜೆಎಂ ಕಾರ್ಪೊರೆಟ್ ಏರ್ ಬಸ್ ಜಗತ್ತಿನಲ್ಲೇ ಅತ್ಯಂತ ಐಷಾರಾಮಿ ವಿಮಾನಗಳಲ್ಲಿ ಒಂದಾಗಿದೆ. ಭಾರತದಲ್ಲಿ ಮುಖೇಶ್ ಅಂಬಾನಿ ಬಳಿಯೂ ಐಷಾರಾಮಿ ಏರ್ ಬಸ್ ವಿಮಾನವಿದೆ.

ಸರ್ವಿಸ್ ಟ್ಯಾಕ್ಸ್ ಕಟ್ಟದೆ ಇದ್ದುದಕ್ಕಾಗಿ ಮಲ್ಯ ವಿಮಾನ ಸಾಲದ ಮೊರೆಗೆ ಸಿಲುಕಿದೆ. ಕೋಟಿಗಟ್ಟಲೆ ಆಸ್ತಿ ಮಾಡಿರುವ ಮಲ್ಯ ವರ್ಣರಂಜಿತ ಬದುಕೀಗ ಸಾಲದ ಕೂಪಕ್ಕೆ ಬಿದ್ದಿದೆ.

ಇನ್ನೊಂದೆಡೆ ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಾಧಿಕರಣ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಡಿಯಾಜಿಯೊದಿಂದ ಬರಬೇಕಿದ್ದ 515 ಕೋಟಿ ರುಪಾಯಿಗಳಿಗೆ ತಡೆ ಬಿದ್ದಿದೆ.

ಇನ್ನು ವಿಜಯ್ ಮಲ್ಯ ಬಳಿ 260ಕ್ಕೂ ಹೆಚ್ಚು ಕಾರುಗಳಿವೆ ಎಂದು ಹೇಳಿದರೆ ಖಂಡಿತ ನೀವು ನಂಬಲಾರರು. ಇವುಗಳಲ್ಲಿ ರೇಸ್ ಕಾರು, ವಿಂಟೇಜ್ ಕಾರು ಎಲ್ಲವೂ ಸೇರಿದೆ.

ಇನ್ನು ಎಫ್1 ಕಾರುಗಳ ಮೇಲೂ ತಮ್ಮ ಪ್ರೀತಿ ತೋರಿರುವ ವಿಜಯ್ ಮಲ್ಯ ಐಷಾರಾಮಿ ವಿಹಾರ ನೌಕೆಗಳನ್ನು ಹೊಂದಿದ್ದರು. ಇನ್ನು ಬೋಯಿಂಗ್ 727 ಕೂಡಾ ಮಲ್ಯ ಫೆವರಿಟ್ ಎನಿಸಿಕೊಂಡಿತ್ತು.

ಕಾರು ಬೀರು ಬಾರು ಇದು ಮಲ್ಯ ಲೈಫ್ ಸ್ಟೈಲ್
Photo Credit: Indian Express


Click it and Unblock the Notifications








