ಫಿಗೊ, ಮೈಕ್ರಾ: ಯಾರು ಹಿತವರು ಇಬ್ಬರೊಳಗೆ

ಹೊರವಿನ್ಯಾಸ ನೋಡುವಾಗ ಇವೆರಡು ಕಾರ್ ಗಳು ಗಾತ್ರದಲ್ಲಿ ಒಂದೇ ರೀತಿ ಇವೆಯೇನೋ ಎಂಬಂತೆ ಭಾಸವಾಗುತ್ತದೆ. ಇವೆರಡರ ಗಾತ್ರ ಕೆಲವು ಮಿಲಿಮೀಟರ್ ವ್ಯತ್ಯಾಸವಿದೆ ಅಷ್ಟೇ. ಆದರೆ ಮೇಲ್ನೋಟಕ್ಕೆ ಇವೆರಡು ಕಾರ್ ಗಳ ವಿನ್ಯಾಸದಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಮೈಕ್ರಾಕ್ಕೆ ಹೋಲಿಸಿದರೆ ಫಿಗೊ ಚೂರು ಎತ್ತರದ ಹುಡುಗ. ಮೈಕ್ರಾಕ್ಕೆ ಹೋಲಿಸಿದರೆ ಫಿಗೊ ಹೆಚ್ಚು ಸ್ಥಳಾವಕಾಶ ಹೊಂದಿದೆ.
ನಿಸ್ಸಾನ್ ಎಂಜಿನ್/ ಟ್ರಾನ್ಸ್ ಮಿಷನ್
* ಕೆ9ಕೆ-4 ಸಿಲಿಂಡರ್
* 1461 ಸಿಸಿ ಸಿಆರ್ ಡಿಐ ಎಂಜಿನ್
* 4 ಸಾವಿರ ಆರ್ ಪಿಎಂಗೆ 60 ಹಾರ್ಸ್ ಪವರ್
* 5 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್
ಫೋರ್ಡ್ ಫಿಗೊ ಎಂಜಿನ್ ಮತ್ತು ಟ್ರಾನ್ಸ್ ಮಿಷನ್
* 4 ಸಿಲಿಂಡರ್
* 1,399 ಸಿಸಿ ಸಿಆರ್ ಡಿಐ ಎಂಜಿನ್
* 4 ಸಾವಿರ ಆರ್ ಪಿಎಂಗೆ 68 ಹಾರ್ಸ್ ಪವರ್
* 5 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್
ಇದರಲ್ಲಿ ಫಿಗೊ ಹೆಚ್ಚು ಶಕ್ತಿಶಾಲಿ ಎಂಜಿನ್ ಹೊಂದಿದೆ. ಆದರೆ ಮೈಲೇಜ್ ವಿಷಯದಲ್ಲಿ ಮೈಕ್ರಾ ಮುಂದಿದೆ. ನಿಸಾನ್ ಮೈಕ್ರಾ ಪ್ರತಿಲೀಟರ್ ಡೀಸಲ್ ಗೆ ಸುಮಾರು 23 ಕಿ.ಮೀ ಮೈಲೇಜ್ ನೀಡುವುದಾಗಿ ಹೇಳುತ್ತದೆ. ನಿಮಗೆ ಹೆಚ್ಚು ಶಕ್ತಿಶಾಲಿ ಕಾರ್ ಬೇಕಾದರೆ ಮೈಲೇಜ್ ವಿಷಯ ಮರೆತು ಫಿಗೊ ಖರೀದಿಸಿ. ಅಥವಾ ನಿಮಗೆ ಮೈಲೇಜ್ ಎಂಬುದು ಹೆಚ್ಚು ಆದ್ಯತೆಯ ವಿಷಯವಾಗಿದ್ದರೆ ಮೈಕ್ರಾ ಖರೀದಿಸಬಹುದು.
ದರ: ಫೋರ್ಡ್ ಫಿಗೊ ಡೀಸಲ್ ದರ ಸುಮಾರು 4.55 ಲಕ್ಷ ರೂ.ನಿಂದ 5.44 ಲಕ್ಷ ರೂ.ವರೆಗಿದೆ. ನಿಸಾನ್ ಮೈಕ್ರಾ ದರ ಸುಮಾರು 5.58 ಲಕ್ಷ ರೂ.ನಿಂದ 6.04 ಲಕ್ಷ ರೂ.ವರೆಗಿದೆ.
ಪಾವತಿಸುವ ಹಣಕ್ಕೆ ಮೋಸವಾಗಬಾರದೆಂದರೆ ಫಿಗೊ ಖರೀದಿ ಉತ್ತಮ. ಇದರಲ್ಲಿ ಸೇಫ್ಟಿ ಫೀಚರ್ ಗಳಾದ ಎಬಿಎಸ್, ಇಬಿಡಿ ಮತ್ತು ಏರ್ ಬ್ಯಾಗ್ ಗಳೂ ದೊರಕುತ್ತವೆ. ಶಕ್ತಿಶಾಲಿ ಎಂಜಿನ್, ನಿರ್ವಹಣಾ ವೆಚ್ಚ ಕಡಿಮೆ ಇತ್ಯಾದಿಗಳು ಫಿಗೊದಲ್ಲಿರುವ ಪ್ಲಸ್ ಪಾಯಿಂಟ್ ಗಳಾಗಿವೆ.


Click it and Unblock the Notifications








