ಮುಂದಿನ ತಲೆಮಾರಿನ ಮೈಕ್ರಾ - ಇದುವೇ ನಿಸ್ಸಾನ್ 'ಸ್ವೇ'

Written By:

ನಿಸ್ಸಾನ್ ಮೈಕ್ರಾ ಭಾರತ ಮಾರುಕಟ್ಟೆಯಲ್ಲಿ ಈಗಾಗಲೇ ಮಾರಾಟದಲ್ಲಿದೆ. ಹಾಗಿರುವಾಗ ಜಪಾನ್ ಮೂಲದ ಈ ಪ್ರಖ್ಯಾತ ಸಂಸ್ಥೆಯು ಮುಂದಿನ ತಲೆಮಾರಿನ ನಿಸ್ಸಾನ್ ಮೈಕ್ರಾ ಮಾದರಿಯನ್ನು ಪರಿಚಯಿಸಿದೆ.

2015 ಮಾರ್ಚ್ 5ರಿಂದ 15ರ ವರೆಗೆ ಸಾಗಲಿರುವ 85ನೇ ಆವೃತ್ತಿಯ ಜಿನೆವಾ ಮೋಟಾರು ಶೋದಲ್ಲಿ ನಿಸ್ಸಾನ್ ಮೈಕ್ರಾ ಮುಂದಿನ ತಲೆಮಾರಿನ ಮಾದರಿಯು ಅನಾವರಣಗೊಳ್ಳಲಿದೆ. ಇದು 'ಸ್ವೇ' ಎಂಬ ಅಕ್ಕರೆಯ ಹೆಸರಿನಿಂದ ಅರಿಯಲ್ಪಡಲಿದೆ.

nissan sway concept

ತನ್ನದೇ ಆದ ಯೂನಿಕ್ ವಿನ್ಯಾಸವನ್ನು ಹೊಂದಿರುವ ನಿಸ್ಸಾನ್ ಸ್ವೇ, ಆಧುನಿಕತೆಯ ಪ್ರತಿಬಿಂಬವಾಗಿರಲಿದೆ. ಈ ಸಂಬಂಧ ಟೀಸರ್ ಚಿತ್ರವನ್ನು ಸಂಸ್ಥೆಯು ಬಿಡುಗಡೆಗೊಳಿಸಿತ್ತು, ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.

ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ಡೇ ಟೈಮ್ ರನ್ನಿಂಗ್ ಲೈಟ್ಸ್ ಹೆಚ್ಚು ತೀಕ್ಷ್ಣವಾದ ವಿನ್ಯಾಸ ಪಡೆದುಕೊಂಡಿದೆ. ಹಾಗೆಯೇ ಇದರ ಸಿಗ್ನೇಚರ್ ಗ್ರಿಲ್ ಹೆಚ್ಚು ದಿಟ್ಟತವನ್ನು ತೋರಿಸುತ್ತಿದೆ. ಹಾಗಿದ್ದರೂ ಮುಂದಿನ ವರ್ಷವಷ್ಟೇ ಈ ಬಹುನಿರೀಕ್ಷಿತ ಮಾದರಿ ಮಾರುಕಟ್ಟೆಗೆ ಅಪ್ಪಳಿಸುವ ನಿರೀಕ್ಷೆಯಿದೆ.

English summary
The 85th Geneva Motor Show is slated to begin on 5th March to 15th March, 2015. Japanese automobile giant, Nissan will also be present at the motor show. They will be showcasing a new concept car at Geneva, which they have christened as the ‘Sway'.
Story first published: Wednesday, February 25, 2015, 11:03 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark