Exter: ಪುಟ್ಟ ಫೇಸ್‌ಲಿಫ್ಟ್ ಕಾರು ಬಿಡುಗಡೆಗೆ ಸಜ್ಜು: ಕಮ್ಮಿ ಬೆಲೆ, ಆಧುನಿಕ ಫೀಚರ್ಸ್

ಭಾರತದಲ್ಲಿ ಪುಟ್ಟ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಪ್ರಮುಖ ಬ್ರ್ಯಾಂಡ್‌ಗಳು ಹೊಸ ಹ್ಯಾಚ್‌ಬ್ಯಾಕ್‌ಗಳನ್ನು ಪರಿಚಯಿಸಲು ಮುಂದಾಗುತ್ತಿವೆ. ಈಗಾಗಲೇ ಸಬ್-4 ಕಾರುಗಳನ್ನು ಹೊಂದಿರುವ ಬ್ರ್ಯಾಂಡ್‌ಗಳು ಅವುಗಳ ಫೇಸ್‌ಲಿಫ್ಟ್ ಮಾಡಲ್‌ಗಳನ್ನು ಪರಿಚಯಿಸಲು ಸಜ್ಜಾಗುತ್ತಿವೆ. ಇತ್ತೀಚೆಗೆ ತುಂಬಾ ಟ್ರೆಂಡಿಂಗ್‌ನಲ್ಲಿರುವ ಹ್ಯುಂಡೈ ಎಕ್ಸ್ಟರ್ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಫೆಸ್‌ಲಿಫ್ಟ್ ಪಡೆದು ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ಈಗಾಗಲೇ ರೋಡ್‌ ಟೆಸ್ಟಿಂಗ್ ಜೋರಾಗಿ ನಡೆಯುತ್ತಿದ್ದು, ಹಲವು ಬಾರಿ ಟೆಸ್ಟಿಂಗ್ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಮುಂಬರಲಿರುವ ಹ್ಯುಂಡೈ ಎಕ್ಸ್ಟರ್ (Hyundai Exter) ಕಾರಿನ ಮೇಲೆ ಏನೆಲ್ಲಾ ನಿರೀಕ್ಷೆಗಳಿವೆ ನೋಡೋಣ.

ಸದ್ಯ ಮಾರಾಟದಲ್ಲಿರುವ ಎಕ್ಸ್‌ಟರ್ ಅನ್ನು ಹ್ಯುಂಡೈ 2023 ರಲ್ಲಿ ಬಿಡುಗಡೆ ಮಾಡಿತ್ತು. ಹೊಸ ಅಪ್‌ಡೇಟ್‌ಗಳೊಂದಿಗೆ ಹುಂಡೈ ಎಕ್ಸ್‌ಟರ್ ಫೇಸ್‌ಲಿಫ್ಟ್‌ ಈ ವರ್ಷದ ಅಂತ್ಯದ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ಬ್ರ್ಯಾಂಡ್‌ಗೆ ಜನಪ್ರಿಯ ಮಾಡಲ್ ಆಗಿ ಗುರ್ತಿಸಿಕೊಂಡಿದ್ದು, ಮಾರಾಟದಲ್ಲಿ ಉತ್ತಮ ಲಾಭ ತಂದುಕೊಡುತ್ತಿದೆ. ಹೊಸ ಫೇಸ್‌ಲಿಫ್ಟ್ ಬಿಡುಗಡೆ ಮಾಡುವ ಮೂಲಕ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ನಂ.1 ಸ್ಥಾನಕ್ಕೇರಿಸಲು ಹ್ಯುಂಡೈ ನೋಡುತ್ತಿದೆ.

hyundai-exter-facelift-launch-soon-in-india

ನಿರೀಕ್ಷಿತ ಫೀಚರ್ಸ್: 2026ರ ಹುಂಡೈ ಎಕ್ಸ್‌ಟರ್ ಫೇಸ್‌ಲಿಫ್ಟ್ ಕಾರಿನ ಕ್ಯಾಬಿನ್ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಂದಿಲ್ಲ, ಬಿಡುಗಡೆ ಸಮೀಪಿಸುತ್ತಿದ್ದಂತೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ. ಆದರೂ ಹಲವಾರು ವರದಿಗಳ ಪ್ರಕಾರ, ಮುಂಬರುವ ಎಕ್ಸ್‌ಟರ್ ಫೇಸ್‌ಲಿಫ್ಟ್ ಹೆಚ್ಚಿನ ಪ್ರೀಮಿಯಂ ಅಪ್ಹೋಲ್ಸ್ಟರಿ ವಸ್ತುಗಳು ಮತ್ತು ಹೆಚ್ಚುವರಿ ಸುರಕ್ಷತಾ ಫೀಚರ್‌ಗಳನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಅಲ್ಲದೆ 9.9-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಜೊತೆಗೆ ದೊಡ್ಡ 12.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಬರಲಿದೆ. ಹಾಗೆಯೇ ಹುಂಡೈ ಎಕ್ಸ್‌ಟರ್‌ನ ಟಚ್‌ಸ್ಕ್ರೀನ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಓಎಸ್ ಅನ್ನು ಆಧರಿಸಿದೆ ಎಂದು ನಿರೀಕ್ಷಿಸಲಾಗಿದೆ. ಒಟ್ಟಾರೆ ಈಗ ಮಾರಾಟದಲ್ಲಿರುವ ಕಾರಿಗಿಂತ ಫೇಸ್‌ಲಿಫ್ಟ್ ಮಾಡಲ್ ಹೆಚ್ಚುವರಿ ಫೀಚರ್ಸ್ ಪಡೆಯುವುದು ಬಹುತೇಕ ಖಚಿತವಾಗಿದೆ.

hyundai-exter-facelift-launch-soon-in-india

ನಿರೀಕ್ಷಿತ ವಿನ್ಯಾಸ: 2026ರ ಹುಂಡೈ ಎಕ್ಸ್‌ಟರ್ ಫೇಸ್‌ಲಿಫ್ಟ್‌ ಡಿಸೈನ್ ವಿಷಯಕ್ಕೆ ಬಂದರೆ ಪ್ರಮುಖ ಬದಲಾವಣೆಗಳನ್ನು ಬಹಿರಂಗಪಡಿಸುತ್ತದೆ. ಇದು ಮರುವಿನ್ಯಾಸಗೊಳಿಸಲಾದ ಬಂಪರ್ ಜೊತೆಗೆ ಮುಂಭಾಗದಲ್ಲಿ ಟ್ವೀಕ್ ಮಾಡಿದ ಗ್ರಿಲ್ ಅನ್ನು ಪಡೆಯುವ ನಿರೀಕ್ಷೆಯಿದೆ. ಜೊತೆಗೆ 15-ಇಂಚಿನ ಅಲಾಯ್ ವೀಲ್‌ಗಳ ಹೊಸ ಸೆಟ್ ಅನ್ನು ಪಡೆಯುವ ನಿರೀಕ್ಷೆಯಿದೆ. ಉಳಿದಂತೆ ಪ್ರಸ್ತುತ ಮಾರಾಟದಲ್ಲಿರುವ ಮಾಡಲ್‌ನಂತೆ H- ಆಕಾರದ DRLand ಟೈಲ್‌ಲೈಟ್ ಸೆಟಪ್ ಉಳಿಸಿಕೊಂಡಿದೆ.

ಎಂಜಿನ್ ಬದಲಾವಣೆ ಇದೆಯೇ?: ಹುಂಡೈ ಎಕ್ಸ್‌ಟರ್ ಫೇಸ್‌ಲಿಫ್ಟ್ 2026 ಬಾಹ್ಯ ಮತ್ತು ಒಳಾಂಗಣದ ವಿಷಯದಲ್ಲಿ ಕನಿಷ್ಠ ಬದಲಾವಣೆಗಳನ್ನು ಪಡೆಯುವ ನಿರೀಕ್ಷೆಯಿದ್ದರೂ, ಪವರ್‌ಟ್ರೇನ್‌ನ ವಿಷಯದಲ್ಲಿ ಅದು ಬದಲಾಗದೆ ಉಳಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಏಕೆಂದರೆ ಕಾರಿನಲ್ಲಿ ಈಗ ಇರುವ ಎಂಜಿನ್ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ, ಕಾರಿಗೆ ತಕ್ಕ ಎಂಜಿನ್ ಎನ್ನಸಿಕೊಂಡಿದೆ. ಹಾಗಾಗಿ ಇದೇ ಎಂಜಿನ್ ಮುಂದುವರಿಯಲಿದೆ.

hyundai-exter-facelift-launch-soon-in-india

ಎಕ್ಸ್‌ಟರ್ ಫೇಸ್‌ಲಿಫ್ಟ್ ಅದೇ 1.2-ಲೀ. 4-ಸಿಲಿಂಡರ್ ಎಂಜಿನ್‌ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಹೊಂದಿರಲಿದೆ. 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿರುತ್ತದೆ. ಈ ಎಂಜಿನ್ 82 ಬಿಹೆಚ್ ಪವರ್ ಮತ್ತು 113.8 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು ಸುಗಮ ಚಾಲನಾ ಅನುಭವವನ್ನು ನೀಡಲಿದ್ದು, ನಗರ ಪ್ರಯಾಣಕ್ಕೆ ಸೂಕ್ತವಾಗಿರುವುದರಿಂದ ಇದೆ ಎಂಜಿನ್ ಮುಂದುವರಿಯಲಿದೆ.

ಪ್ರಸ್ತುತ ಮಾರಾಟದಲ್ಲಿರುವ ಹ್ಯುಂಡೈ ಎಕ್ಸ್‌ಟರ್ ಕಾರು ಉತ್ತಮ ಮೈಲೇಜ್ ನೀಡಲಿದ್ದು, ಇದರ ಪೆಟ್ರೋಲ್ ಮಾಡಲ್‌ಗಳು ಮ್ಯಾನುವಲ್ / ಆಟೋಮ್ಯಾಟಿಕ್ ನೊಂದಿಗೆ 19.2 ಕಿ.ಮೀ ನಿಂದ 19.4 ಕಿ.ಮೀ ಮೈಲೇಜ್ ನೀಡುತ್ತವೆ. ಸಿಎನ್‌ಜಿ ಮಾಡಲ್‌ಗಳು ಪ್ರತಿ ಕೆ.ಜಿ.ಗೆ 19.4 ಕಿ.ಮೀ ನಿಂದ 27.1 ಕಿ.ಮೀ / ಕೆ.ಜಿ ಮೈಲೇಜ್ ನೀಡುತ್ತವೆ ಎಂದು ಕಂಪನಿ ಹೇಳಿಕೊಂಡಿದೆ.

More from DriveSpark

Article Published On: Friday, March 6, 2026, 12:18 [IST]
English summary
Hyundai exter facelift launch soon in india
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+