ಐಪ್ಯಾಡ್ ಅಳವಡಿಸಿದ ಜಗತ್ತಿನ ಮೊದಲ ಕಾರ್

ರೇಂಜ್ ರೋವರ್ ನ ಲಿಮಿಟೆಡ್ ಅಡಿಷನ್ 4ಡಬ್ಲ್ಯುಡಿ ಐಪ್ಯಾಡ್ ನೊಂದಿಗೆ ಬಂದ ಜಗತ್ತಿನ ಮೊದಲ ಕಾರಾಗಿದೆ. ತನ್ನ ಎಕ್ಸ್ ಕ್ಲೂಸಿವ್ ಕಾರೊಂದಕ್ಕೆ ಐಪ್ಯಾಡ್ ಅಳವಡಿಸಿ ಗ್ರಾಹಕರನ್ನು ಸೆಳೆಯುವ ಯತ್ನ ಕಂಪನಿಯದ್ದು. ಇನ್ನು ಮುಂದೆ ರೋವರ್ ಕಾರಲ್ಲಿ ಸಾಂಪ್ರದಾಯಿಕ ಡಿವಿಡಿ ಪರದೆಗೆ ಬದಲಾಗಿ ಐಪ್ಯಾಡ್ ಕಮಾಲ್ ಕಾಣಲಿದೆ.
ಇನ್ನು ಮುಂದೆ ಈ ಕಾರ್ ನಲ್ಲಿರುವ ಐಪ್ಯಾಡ್ ಮೂಲಕ ಡ್ರೈವಿಂಗ್ ಮಾಡುತ್ತ ಇಂಟರ್ ನೆಟ್ ಬ್ರೌಸ್ ಮಾಡಬಹುದು. ಮ್ಯೂಸಿಕ್ ಕೇಳಬಹುದು. ಸಿನಿಮಾ ಕೂಡ ನೋಡಬಹುದು. ಗ್ರಾಹಕರು ಬಾರ್ಗೈನ್ ಮಾಡುವುದನ್ನು ತಪ್ಪಿಸಲು ನೂತನ ಕಾರ್ ದರಲ್ಲಿಯೇ ಐಪ್ಯಾಡ್ ಅಳವಡಿಸಲಾಗಿದೆ.
ಲ್ಯಾಂಡ್ ರೋವರ್ ಫ್ಯಾಮಿಲಿಯ ನೂತನ ಕಾರ್ ಆಕರ್ಷಕವಾಗಿದ್ದು, ಕಾರ್ ನ ಘನತೆಯನ್ನು ಐಪಾಡ್ ಇನ್ನಷ್ಟು ಹೆಚ್ಚಿಸಿದೆ. ರೇಂಜ್ ರೋವರ್ ಅಲ್ಟಿಮೇಟ್ ನ್ಯೂ ಟರ್ಬೊ ಡೀಸಲ್ ವಿ8 ಎಂಜಿನ್ ಅಥವಾ 5.0 ಲೀಟರ್ ಸೂಪರ್ ಚಾರ್ಜ್ ಡ್ ಪೆಟ್ರೊಲ್ ವಿ8 ಆವೃತ್ತಿಗಳಲ್ಲಿ ದೊರಕುತ್ತದೆ.


Click it and Unblock the Notifications








