ಹೃದಯದ ಬಡಿತ ಬೀಟ್ ಬೀಟ್ ಅನುತ್ತಿದೆ

Chevrolet beat
ಷೆವರ್ಲೆ ಬೀಟ್ ಅಂದ್ರೆ ಪುಟ್ಟದಾದ ಸುಂದರ ಕಾರ್. ಹೆಡ್ ಲೈಟ್ಸ್, ಹಿಂದಿನ ಡೋರ್ ಹ್ಯಾಂಡಲ್ ವಿನೂತನವಾಗಿದ್ದು ಕಾರಿನೊಳಗೆ ಪ್ರವೇಶಿಸುವಾಗ ಮಧುರ ಅನುಭವವಾಗುತ್ತದೆ. ಬೀಟ್ ಇಷ್ಟ ಪಡಲು ಮತ್ತು ಇಷ್ಟಪಡದಿರಲು ಹಲವು ಕಾರಣಗಳಿವೆ. ಬೈಕ್ ನಲ್ಲಿರುವಂತಹ ಸ್ಪೀಡೊಮೀಟರ್, ಡೋರ್ ವಿನ್ಯಾಸ, ವಿನೂತನವಾಗಿರುವ ಹಿಂದಿನ ಡೋರ್ ಹ್ಯಾಂಡಲ್ ಎಲ್ಲವೂ ಇಷ್ಟಪಡುವಂತಿದೆ. ಆರಾಮದಾಯಕ ಡ್ರೈವಿಂಗ್ ಗೆ ಪೂರಕವಾಗಿ ಎದುರಿನ ಸೀಟ್ ಗಮನ ಸೆಳೆಯುತ್ತದೆ.

ಆದರೆ ನೀವು ಒಂದಿಷ್ಟು ಕುಳ್ಳಗಿದ್ದರೆ ಡ್ರೈವ್ ಮಾಡಲು ಸ್ವಲ್ಪ ಕಷ್ಟವಾಗಬಹುದು. ಯಾಕೆಂದರೆ ಡ್ಯಾಷ್ ಬೋರ್ಡ್ ಸ್ವಲ್ಪ ಎತ್ತರದಲ್ಲಿದೆ. ಹಿಂದಿನ ಸೀಟ್ ಕೂಡ ಸಾಕಷ್ಟು ಸ್ಥಳಾವಕಾಶ ಹೊಂದಿಲ್ಲ. ಮೂರು ಜನರು ಕುಳಿತುಕೊಂಡರೆ ಟೈಟ್ ಆದೀತು. ಬೀಟ್ 1.2 ಲೀಟರ್ ನ ಎಸ್-ಟೆಕ್ 2 ಎಂಜಿನ್ ಹೊಂದಿದೆ. ಷೆವರ್ಲೆ ಬೀಟ್ ಪ್ರತಿಲೀಟರ್ 13.5 ಕಿ.ಮೀ. ಮೈಲೇಜ್ ನೀಡುತ್ತದೆ. ಆದರೆ ಪಾವತಿಸಿದ ದುಡ್ಡಿಗೆ ಬೀಟ್ ಮೋಸ ಮಾಡದು. ಯಾಕೆಂದರೆ ಅದರಲ್ಲಿ ಇಷ್ಟವಾಗುವಂತಹ ಸಾಕಷ್ಟು ಫೀಚರ್ ಗಳಿವೆ.

ಬೀಟ್ ಬಗ್ಗೆ

* ಆಕರ್ಷಕ ವಿನ್ಯಾಸ ಮತ್ತು ಕಾರ್ಯಕ್ಷಮತೆ
* ಈ ಸೆಗ್ಮೆಂಟ್ ನಲ್ಲಿ ಅಗ್ಗದ ಕಾರ್
* ನಿರ್ಮಾಣ ಗುಣಮಟ್ಟ ಇನ್ನಷ್ಟು ಸುಧಾರಿಸಬೇಕಿತ್ತು.
* ಎಂಜಿನ್ ಸದ್ದು ಸ್ವಲ್ಪ ಜಾಸ್ತಿಯಿದೆ.
* ಹಿಂದಿನ ಸೀಟ್ ಸ್ಥಳಾವಕಾಶ ಕಡಿಮೆ.

ಷೆವರ್ಲೆ ಬೀಟ್ ವಿಶೇಷತೆಗಳು

ಎಂಜಿನ್: 1.2 ಲೀಟರ್, 4 ಸಿಲಿಂಡರ್, ಪೆಟ್ರೋಲ್
1199 ಸಿಸಿ
5 ಸ್ಪೀಡ್ ಮ್ಯಾನುಯಲ್ ಸ್ಟೇರಿಂಗ್
ವೆಂಟಿಲೇಟೆಡ್ ಡಿಸ್ಕ್
ತೂಕ: 965 ಕೆ.ಜಿ.
ಕಾರ್ಯಕ್ಷಮತೆ: ಸೊನ್ನೆಯಿಂದ 100 ಕಿ.ಮೀ.ಗೆ ಬದಲಾಯಿಸಲು 17.9 ಸೆಕೆಂಡ್ ಸಾಕು
ಗರಿಷ್ಠ ವೇಗ: ಪ್ರತಿಗಂಟೆಗೆ 157 ಕಿ.ಮೀ.
ಮೈಲೇಜ್: ಪ್ರತಿ ಲೀಟರ್ ಗೆ 13.5 ಕಿ.ಮೀ.
ದರ: ಷೆವರ್ಲೆ ಬೀಟ್ : 3,49,994 ರೂ, ಷೆವರ್ಲೆ ಬೀಟ್ ಎಲ್ ಎಸ್: 3,71,390 ರೂ. ಬೀಟ್ ಎಲ್ ಟಿ ದರ: 4,10486 ರೂ.

More from DriveSpark

Article Published On: Monday, February 14, 2011, 16:44 [IST]
English summary
Chevrolet Beat has muscle car styling, twin headlamps, most powerful engine and super interiors. This tough, smart machine is sure to get your heart racing! Just listen your heart BEAT
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+