ಷೆವರ್ಲೆ ಕಾರು ಮಾಲೀಕರಿಗೆ ಮಾನ್ಸೂನ್ ಸರ್ವೀಸ್ ಕ್ಯಾಂಪ್ ಆಫರ್
ಕಳೆದ ವರ್ಷವಷ್ಟೇ ಅಮೆರಿಕ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆ ಜನರಲ್ ಮೋಟಾರ್ಸ್ ಅಂಗಸಂಸ್ಥೆಯಾದ 'ಷೆವರ್ಲೆ'ಯು ಭಾರತದಲ್ಲಿ ತನ್ನ ಕಾರು ಮಾರಾಟ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದರು ತನ್ನ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ತಾಂತ್ರಿಕ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಇದೀಗ ಮಳೆಗಾಲ ಆರಂಭವಾಗಿರುವುದರಿಂದ ಮಾನ್ಸೂನ್ ಕ್ಯಾಂಪ್ ಹಮ್ಮಿಕೊಂಡಿದೆ.

ಭಾರತದಲ್ಲಿರುವ ಷೆವರ್ಲೆ ಕಾರು ಮಾಲೀಕರು ತಮ್ಮ ಕಾರುಗಳನ್ನು ಮಾನ್ಸೂನ್ ಕ್ಯಾಂಪ್‌ನಲ್ಲಿ ಪರೀಕ್ಷಿಸಿಕೊಳ್ಳಬಹುದಾಗಿದ್ದು, ವಿವಿಧ ಬೀಡಿಭಾಗಗಳ ಸೇವೆಗಳ ಮೇಲೆ ರಿಯಾಯ್ತಿ ದರಗಳು ಲಭ್ಯವಾಗಲಿವೆ. ಷೆವರ್ಲೆ ಸಂಸ್ಥೆಯು ಆಯೋಜಿಸಿರುವ ಮಾನ್ಸೂನ್ ಕ್ಯಾಂಪ್‌ಗಳು ಇದೇ ತಿಂಗಳು ಜೂನ್ 21 ರಿಂದ 25ರ ತನಕ ದೇಶದ ಪ್ರಮುಖ ನಗರಗಳಲ್ಲಿ ಈ ಸೇವೆಗಳು ಲಭ್ಯವಿರಲಿವೆ.

ಇನ್ನು ಷೆವರ್ಲೆ ಸಂಸ್ಥೆಯು ಅಧಿಕೃತವಾಗಿ ಯಾವುದೇ ಸರ್ವೀಸ್ ಕೇಂದ್ರಗಳನ್ನು ಹೊಂದಿಲ್ಲವಾದರೂ ಬೇರೆ ಬೇರೆ ಸಂಸ್ಥೆಗಳೊಂದಿಗೆ ಜೊತೆಗೂಡಿ ತಮ್ಮ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ರಿಯಾಯ್ತಿ ದರಗಳಲ್ಲಿ ಸೇವೆಗಳನ್ನು ಒದಗಿಸಲು ಈ ಕ್ಯಾಂಪ್ ಹಮ್ಮಿಕೊಳ್ಳಲಾಗಿದೆ.

ಈಗಾಗಲೇ ಷೆವರ್ಲೆ ಸಂಸ್ಥೆಯು ತಮ್ಮ ಗ್ರಾಹಕರಿಗೆ ಮಾನ್ಸೂನ್ ಕ್ಯಾಂಪ್ ಬಗ್ಗೆ ಮಾಹಿತಿ ರವಾನಿಸಿದ್ದು, ಸರ್ವೀಸ್ ಕ್ಯಾಂಪ್ ವೇಳೆ ಕೆಲವು ಸೇವೆಗಳು ಉಚಿತವಾಗಿ ದೊರೆಯಲಿದ್ದರೇ ಇನ್ನು ಕೆಲವು ಸರ್ವೀಸ್‌ಗಳ ಮೇಲೆ ಇಂತಿಷ್ಟು ಪ್ರಮಾಣದ ರಿಯಾಯ್ತಿ ದರ ಅನ್ವಯವಾಗುತ್ತೆ.

ಷೆವರ್ಲೆ ಕಾರುಗಳ ಎಲ್ಲಾ ಸರ್ವೀಸ್ ಲೆಬರ್ ಚಾರ್ಜ್‌ಗಳ ಮೇಲೆ ಶೇ.10ರಷ್ಟು ವಿನಾಯ್ತಿ ಇದ್ದು, ಬೀಡಿಭಾಗಗಳ ಮೇಲೆ ಶೇ.10ರಷ್ಟು ಡಿಸ್ಕೌಂಟ್, ಮೌಲ್ಯ ವರ್ದಿತ ಸೇವೆಗಳ ಮೇಲೆ ಶೇ.20 ಡಿಸ್ಕೌಂಟ್ ದೊರೆಯಿದ್ದು, ಇದು ಕೇವಲ 5 ದಿನಗಳ ಕಾಲಮೀತಿಯೊಳಗೆ ಮಾತ್ರ ಡಿಸ್ಕೌಂಟ್ ಪಡೆಯಬಹುದು.

ಹಾಗೆಯೇ ಉಚಿತ ಸೇವೆಗಳಾಗಿ ಕಾರ್ ಹೆಲ್ತ್ ಚೆಕ್ ಅಪ್, ವೀಂಡ್ ಸ್ಕೀನ್ ವಾಷರ್ ಫ್ಯೂಡ್ ಮತ್ತು ಕಾರ್ ಟಾಪ್ ವಾಶ್ ಸರ್ವೀಸ್‌ಗೆ ಯಾವುದೇ ರೀತಿಯ ಹಣ ಪಾವತಿಸಬೇಕಿಲ್ಲ. ಆದ್ರೆ ಮೇಲೆ ಹೇಳಿದ ಆಯ್ದ ಸರ್ವೀಸ್‌ಗಳಿಗೆ ವಿನಾಯ್ತಿ ದರಗಳು ಅನ್ವಯವಾಗುತ್ತವೆ.

ಹೀಗಾಗಿ ಷೆವರ್ಲೆ ಕಾರು ಮಾಲೀಕರು ತಮ್ಮ ಕಾರುಗಳನ್ನು ಅಧಿಕೃತ ಡೀಲರ್ಸ್ ಬಳಿ ಸರ್ವೀಸ್ ಪಡದುಕೊಳ್ಳುವ ಮೂಲಕ ಬ್ರಾಂಡ್ ವ್ಯಾಲ್ಯೂ ಹೆಚ್ಚಿಸಿಕೊಳ್ಳಲು ಇದು ಅನುಕೂಲಕರವಾಗಲಿದ್ದು, ಮಾನ್ಸೂನ್ ವೇಳೆ ಬಹುತೇಕ ಕಾರುಗಳಲ್ಲಿ ತಾಂತ್ರಿಕ ಅಂಶಗಳು ಕೈ ಕೊಡುವುದು ಕಾಮನ್.

ಒಂದು ವೇಳೆ ನೀವು ಕೂಡಾ ಷೆವರ್ಲೆ ಕಾರು ಮಾಲೀಕರಾಗಿದ್ದಲ್ಲಿ ಈಗಲೇ ನಿಮ್ಮ ಹತ್ತಿರದ ಅಧಿಕೃತ ಡೀಲರ್ಸ್ ಬಳಿ ಈ ಕುರಿತು ಮಾಹಿತಿ ಪಡೆದುಕೊಳ್ಳಬಹುದಾಗಿದ್ದು, ಬ್ರಾಂಡ್ ಬೀಡಿಭಾಗಗಳನ್ನು ಪಡೆದುಕೊಳ್ಳಲು ಇದೊಂದು ಉತ್ತಮ ಅವಕಾಶ ಎನ್ನಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಈ ಕಾರಿನ ವೆಚ್ಚ ಒಂದು ಕಿಲೋ ಮೀಟರ್‍ಗೆ ಕೇವಲ ರೂ. 1.15 ಪೈಸೆ ಮಾತ್ರ..!!
ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು
10 ಲಕ್ಷದೊಳಗೆ ಖರೀದಿಗೆ ಲಭ್ಯವಾಗಲಿರುವ 7 ಸೀಟರ್ ಎಂಪಿವಿ ಕಾರುಗಳು ಇಲ್ಲಿವೆ ನೋಡಿ..
ಮಹೀಂದ್ರಾ ಥಾರ್‌ನಲ್ಲಿ ಸಿದ್ದವಾದ ಮಾಡಿಫೈ ಹಮ್ಮರ್ ಹೇಗಿದೆ ನೋಡಿ...
ಕಳ್ಳಸಾಗಾಣಿಕೆಯಲ್ಲಿ ಸಿಕ್ಕಿಬಿದ್ದ 43 ಕೋಟಿ ಮೌಲ್ಯದ 122 ಬೈಕ್‌ಗಳು ಪೀಸ್ ಪೀಸ್..


Click it and Unblock the Notifications








