ಕಳ್ಳಸಾಗಾಣಿಕೆಯಲ್ಲಿ ಸಿಕ್ಕಿಬಿದ್ದ 43 ಕೋಟಿ ಮೌಲ್ಯದ 122 ಬೈಕ್‌ಗಳು ಪೀಸ್ ಪೀಸ್..

By Praveen Sannamani

ಸಾಮಾನ್ಯವಾಗಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವ ವಾಹನಗಳನ್ನು ವಶಪಡಿಸಿಕೊಳ್ಳುವ ಪೊಲೀಸರು ಅವುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡ ನಂತರ ಕೆಲವು ಸಂದರ್ಭಗಳಲ್ಲಿ ಹಾರಾಜು ಹಾಕುವುದನ್ನು ನಾವು ನೋಡಿದ್ದೇವೆ. ಆದ್ರೆ ಫಿಲಿಫೈನ್ಸ್ ಸರ್ಕಾರದ ನಡೆ ಮಾತ್ರ ವಿಚಿತ್ರವಾದ್ರೂ ನೀವು ನಂಬಲೇಬೇಕು.

ಕಳ್ಳಸಾಗಾಣಿಕೆಯಲ್ಲಿ ಸಿಕ್ಕಿಬಿದ್ದ 43 ಕೋಟಿ ಮೌಲ್ಯದ 122 ಬೈಕ್‌ಗಳು ಪೀಸ್ ಪೀಸ್..

ಹೌದು, ಫಿಲಿಫೈನ್ಸ್‌ನಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಅಪರಾಧಿಗಳಿಗೆ ಅಷ್ಟೇ ಅಲ್ಲ ಕೃತ್ಯಕ್ಕೆ ಬಳಸಲಾದ ವಾಹನಗಳಿಗೂ ಕಠಿಣ ಶಿಕ್ಷೆ ತಪ್ಪಿದ್ದಲ್ಲ. ಇದಕ್ಕೆ ನಿದರ್ಶನ ಎನ್ನುವಂತೆ ಸ್ಮಂಗ್ಲಿಂಗ್ ಕೇಸ್ ಒಂದರಲ್ಲಿ ವಶಪಡಿಸಿಕೊಳ್ಳಲಾದ ಬರೋಬ್ಬರಿ 122 ಬೈಕ್‌ಗಳನ್ನು ಜೆಸಿಬಿ ಮೂಲಕ ಪೀಸ್ ಪೀಸ್ ಮಾಡಲಾಗಿದ್ದು, ಕಾನೂನು ಬಾಹಿರವಾಗಿರುವ ವಾಹನಗಳನ್ನು ಮರುಬಳಕೆಗೂ ಬಾರದಂತೆ ಮಾಡಲಾಗಿದೆ.

ಕಳ್ಳಸಾಗಾಣಿಕೆಯಲ್ಲಿ ಸಿಕ್ಕಿಬಿದ್ದ 43 ಕೋಟಿ ಮೌಲ್ಯದ 122 ಬೈಕ್‌ಗಳು ಪೀಸ್ ಪೀಸ್..

ಜೆಬಿಬಿ ಮೂಲಕ ಬರೋಬ್ಬರಿ 122 ಬೈಕ್‌ಗಳನ್ನು ಜೆಪಿಬಿ ಮೂಲಕ ಕ್ರಷಿಂಗ್ ಮಾಡಿರುವ ಫಿಲಿಫೀನ್ಸ್ ಸರ್ಕಾರವು ಮತ್ತೆ ಇಂತಹ ಪ್ರಕರಣಗಳು ನಡೆಯದಂತೆ ಅಲ್ಲಿನ ಜನತೆಗೆ ಸಂದೇಶ ರವಾನಿಸಿದ್ದು, ಫಿಲಿಫೀನ್ಸ್ ಸರ್ಕಾರ ಕ್ರಮ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.

ಕಳ್ಳಸಾಗಾಣಿಕೆಯಲ್ಲಿ ಸಿಕ್ಕಿಬಿದ್ದ 43 ಕೋಟಿ ಮೌಲ್ಯದ 122 ಬೈಕ್‌ಗಳು ಪೀಸ್ ಪೀಸ್..

ಜೆಸಿಬಿಯಿಂದ ಕ್ರಷಿಂಗ್ ಮಾಡಲಾದ 122 ಬೈಕ್‌ಗಳು ಸುಮಾರು 43 ಕೋಟಿ ಮೌಲ್ಯ ಹೊಂದಿದ್ದವು ಎಂದು ಹೇಳಲಾಗಿದ್ದು, ದುಬಾರಿ ಬೆಲೆಯ ಬಿಎಂಡಬ್ಲ್ಯು, ಹಾರ್ಲೆ ಡೇವಿಡ್‌ಸನ್, ಟ್ರಯಂಫ್ ನಿರ್ಮಾಣದ ಬೈಕ್‌ಗಳೇ ಇವುಗಳಲ್ಲಿದ್ದವುಯ.

ಕಳ್ಳಸಾಗಾಣಿಕೆಯಲ್ಲಿ ಸಿಕ್ಕಿಬಿದ್ದ 43 ಕೋಟಿ ಮೌಲ್ಯದ 122 ಬೈಕ್‌ಗಳು ಪೀಸ್ ಪೀಸ್..

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಇದು ಕೇವಲ ಫಿಲಿಫೀನ್ಸ್ ಪೊಲೀಸ್ ಇಲಾಖೆಯು ತೆಗೆದುಕೊಂಡ ನಿರ್ಧಾರವಲ್ಲ. ಬದಲಿಗೆ ಅಧ್ಯಕ್ಷ ರೋಡ್ರಿಗೊ ಡ್ಯುಟೆರ್ಟ್ ಅವರೇ ಮುಂದೆ ನಿಂತು ಕಾನೂನು ಬಾಹಿರ ಚಟುವಟಿಕೆಯಲ್ಲಿ ವಶಪಡಿಸಿಕೊಳ್ಳಲಾದ ಬೈಕ್‌ಗಳನ್ನು ನಾಶಪಡಿಸುವಂತೆ ಸೂಚನೆ ನೀಡಿದ್ದಾರೆ.

ಕಳ್ಳಸಾಗಾಣಿಕೆಯಲ್ಲಿ ಸಿಕ್ಕಿಬಿದ್ದ 43 ಕೋಟಿ ಮೌಲ್ಯದ 122 ಬೈಕ್‌ಗಳು ಪೀಸ್ ಪೀಸ್..

ಕ್ರಷಿಂಗ್ ಮಾಡಲಾದ ಒಟ್ಟು 122 ದ್ವಿಚಕ್ರ ವಾಹನಗಳಲ್ಲಿ 80ಕ್ಕೂ ಹೆಚ್ಚು ಪ್ರಿಮಿಯಂ ಸ್ಕೂಟರ್‌ಗಳು ಸಹ ಇದ್ದು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವ ಅಲ್ಲಿನ ಸಾರ್ವಜನಿಕರಿಗೆ ಇದೊಂದು ಖಡಕ್ ಸಂದೇಶ ಎಂದು ಹೇಳಬಹುದು.

ಕಳ್ಳಸಾಗಾಣಿಕೆಯಲ್ಲಿ ಸಿಕ್ಕಿಬಿದ್ದ 43 ಕೋಟಿ ಮೌಲ್ಯದ 122 ಬೈಕ್‌ಗಳು ಪೀಸ್ ಪೀಸ್..

ಫಿಲಿಫೈನ್ಸ್ ಸರ್ಕಾರವು ಇದೇ ಮೊದಲು ಈ ರೀತಿಯ ಕ್ರಮ ಕೈಗೊಂಡಿರುವುದಲ್ಲ. ಕಳೆದ 2 ತಿಂಗಳು ಹಿಂದಷ್ಟೇ ರಸ್ತೆ ನಿಯಮಗಳಿಗೆ ವಿರುದ್ದವಾಗಿ ಓಡಾಡುತ್ತಿದ್ದ 20ಕ್ಕೂ ಹೆಚ್ಚು ಸೂಪರ್ ಕಾರುಗಳನ್ನು ಜೆಸಿಬಿಯಿಂದ ಕ್ರಷಿಂಗ್ ಮಾಡಿದ್ದಲ್ಲದೇ ಕಾರು ಮಾಲೀಕರಿಗೆ ಭಾರೀ ಪ್ರಮಾಣದ ದಂಡವನ್ನು ಸಹ ವಿಧಿಸಿತ್ತು.

ಕಳ್ಳಸಾಗಾಣಿಕೆಯಲ್ಲಿ ಸಿಕ್ಕಿಬಿದ್ದ 43 ಕೋಟಿ ಮೌಲ್ಯದ 122 ಬೈಕ್‌ಗಳು ಪೀಸ್ ಪೀಸ್..

ಸದಾ ಒಂದಿಲ್ಲೊಂದು ವಿವಾದಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಫಿಲಿಫೈನ್ಸ್ ಸರ್ಕಾರವು ಅಪರಾಧ ಕೃತ್ಯಗಳನ್ನು ತಡೆಯವ ಉದ್ದೇಶದೊಂದಿಗೆ ಕೆಲವು ಕಠಿಣ ನಿಯಮಾವಳಿ ಜಾರಿಗೆ ಮಾಡಿದ್ದು, ಜಗತ್ತಿನ ಇತರೆ ದೇಶಗಳಲ್ಲಿ ಇಂತಹ ವಿಲಕ್ಷಣ ಕಾನೂನು ಎಲ್ಲಿಯೂ ಇಲ್ಲ ಎನ್ನಬಹುದು.

ಜೆಸಿಬಿ ಮೂಲಕ ಬೈಕ್‌ಗಳನ್ನು ಕ್ರಷಿಂಗ್ ಮಾಡುತ್ತಿರುವ ವಿಡಿಯೋ ಇಲ್ಲಿದೆ ವೀಕ್ಷಿಸಿ.

ಕಳ್ಳಸಾಗಾಣಿಕೆಯಲ್ಲಿ ಸಿಕ್ಕಿಬಿದ್ದ 43 ಕೋಟಿ ಮೌಲ್ಯದ 122 ಬೈಕ್‌ಗಳು ಪೀಸ್ ಪೀಸ್..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍‍ಗಳನ್ನಾಗಿ ಪರಿವರ್ತಿಸಿದ ರೈತರು..!!

ಸದ್ಯದಲ್ಲೇ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ಹೊಸ ಬಿಎಂಡಬ್ಲ್ಯು ಕಾರಿನೊಂದಿಗೆ ತಂದೆಯ ಶವಸಂಸ್ಕಾರ ಮಾಡಿದ ಪುಣ್ಯಾತ್ಮ

ಮರು ನೋಂದಣಿಗಾಗಿ ಬರೋಬ್ಬರಿ 60 ಲಕ್ಷ ತೆರಿಗೆ ಪಾವತಿಸಿದ ಬೆಂಟ್ಲಿ ಕಾರು ಮಾಲೀಕ..

Most Read Articles

Kannada
Read more on crime off beat auto facts
English summary
Philippines President Rodrigo Duterte Destroys 122 Premium Motorcycles Worth Rs 43 Crore.
Story first published: Saturday, June 16, 2018, 14:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X