ಹೊಸ ಬಿಎಂಡಬ್ಲ್ಯು ಕಾರಿನೊಂದಿಗೆ ತಂದೆಯ ಶವಸಂಸ್ಕಾರ ಮಾಡಿದ ಪುಣ್ಯಾತ್ಮ

By Praveen Sannamani

ಈ ಕಾಲದಲ್ಲಿ ಅದೆಷ್ಟೊ ಜನ ಒಂದು ಹೊತ್ತಿನ ಊಟಕ್ಕೂ ಪರದಾಟುವ ಪರಿಸ್ಥಿತಿಯಿದೆ. ಇನ್ನು ಕೆಲವರು ಅದಕ್ಕಿಂತಲೂ ಘೋರ ಪರಿಸ್ಥಿತಿಯಲ್ಲಿ ದಿನದೂಡುವುದನ್ನು ನಾವೇಲ್ಲಾ ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ತನ್ನ ತಂದೆಯ ಕೊನೆಯ ಆಸೆಯನ್ನು ಈಡೇರಿಸುವ ಸಲವಾಗಿ ಮಾಡಿರುವ ಘನಂದಾರಿ ಕೆಲಸವನ್ನು ಕೇಳಿದ್ರೆ ನಿಮಗೆ ಶಾಕ್ ಆಗುತ್ತೆ.

ಹೊಸ ಬಿಎಂಡಬ್ಲ್ಯು ಕಾರಿನೊಂದಿಗೆ ತಂದೆಯ ಶವಸಂಸ್ಕಾರ ಮಾಡಿದ ಪುಣ್ಯಾತ್ಮ

ಹೌದು, ಇದು ನಿಮಗೆ ಅಚ್ಚರಿ ಅನ್ನಿಸಿದರು ಇದು ನಿಜವಾಗಿ ನಡೆದ ಘಟನೆ. ತಂದೆಯ ಕೊನೆಯ ಆಸೆಯೆಂತೆ ಅವರ ಮೃತದೇಹವನ್ನು ಹೊಸ ಬಿಎಂಡಬ್ಲ್ಯು ಕಾರಿನೊಳಗಿಟ್ಟು ಶವಸಂಸ್ಕಾರ ಮಾಡಿರುವ ವ್ಯಕ್ತಿಯೊಬ್ಬ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಇವನು ಮಾಡಿರುವ ಕೆಲಸಕ್ಕೆ ಫೇಸ್‌ಬುಕ್‌ನಲ್ಲಿ 25 ಸಾವಿರಕ್ಕೂ ಹೆಚ್ಚು ಜನ ಶೇರ್ ಮಾಡಿರುವುದಲ್ಲದೇ ಅವನ ಕಾರ್ಯಕ್ಕೆ ಹಲವರು ಪ್ರಸಂಶೆ ವ್ಯಕ್ತಪಡಿಸಿದ್ದಾರೆ.

ಹೊಸ ಬಿಎಂಡಬ್ಲ್ಯು ಕಾರಿನೊಂದಿಗೆ ತಂದೆಯ ಶವಸಂಸ್ಕಾರ ಮಾಡಿದ ಪುಣ್ಯಾತ್ಮ

ಅಂದಹಾಗೆ ಇದೆಲ್ಲಾ ನಡೆದಿರುವುದು ನೈಜೆರಿಯಾದಲ್ಲಿ. ಅಜುಬುಕ್ ಎನ್ನುವ ವ್ಯಕ್ತಿಯೇ ತನ್ನ ತಂದೆಯ ಕೊನೆಯ ಆಸೆಯೆಂತೆ ಬಿಎಂಡಬ್ಲ್ಯು ಕಾರಿನ ಜೊತೆ ಸಮಾಧಿ ಮಾಡಿದ್ದು, ಸಮಾಧಿ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದೆ.

ಹೊಸ ಬಿಎಂಡಬ್ಲ್ಯು ಕಾರಿನೊಂದಿಗೆ ತಂದೆಯ ಶವಸಂಸ್ಕಾರ ಮಾಡಿದ ಪುಣ್ಯಾತ್ಮ

ಶವಪೆಟ್ಟಿಗೆಯ ಬದಲಾಗಿ ಹೊಚ್ಚ ಹೊಸ ಬಿಎಂಡಬ್ಲ್ಯು ಕಾರಿನ್ನೇ ಬಳಕೆ ಮಾಡಲಾಗಿದ್ದು, ತನ್ನ ತಂದೆಗೆ ಕೊಟ್ಟ ಮಾತನ್ನು ಈಡೇರಿಸುವ ಸಲುವಾಗಿ ಉದ್ದೇಶಪೂರ್ವಕವಾಗಿ ನೈಜಿರಿಯಾದ ಅನಂಬ್ರಾ ರಾಜ್ಯದಲ್ಲಿ ಸಮಾಧಿ ಕಾರ್ಯವನ್ನು ಮಾಡಲಾಗಿದೆ.

ಹೊಸ ಬಿಎಂಡಬ್ಲ್ಯು ಕಾರಿನೊಂದಿಗೆ ತಂದೆಯ ಶವಸಂಸ್ಕಾರ ಮಾಡಿದ ಪುಣ್ಯಾತ್ಮ

ಕೆಲ ದಿನ ಹಿಂದಷ್ಟೇ ಅಜುಬುಕ್ ಅವರ ಬಳಿ ಅವರ ತಂದೆ ಹೊಸ ಬಿಎಂಡಬ್ಲ್ಯು ಕಾರನ್ನು ಕೊಡಿಸುವಂತೆ ಕೇಳಿಕೊಂಡಿದ್ದರಂತೆ. ಆದ್ರೆ ಕಾರಣಾಂತರಗಳಿಂದ ಹೊಸ ಕಾರನ್ನು ಖರೀದಿಸಲು ಸಾಧ್ಯವಾಗಿಲ್ಲ. ಅಷ್ಟೊತ್ತಿಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅಜುಬುಕ್ ಸಾವನ್ನಪ್ಪಿದ್ದಾರೆ.

ಹೊಸ ಬಿಎಂಡಬ್ಲ್ಯು ಕಾರಿನೊಂದಿಗೆ ತಂದೆಯ ಶವಸಂಸ್ಕಾರ ಮಾಡಿದ ಪುಣ್ಯಾತ್ಮ

ಇದರಿಂದಾಗಿ ಮನನೊಂದುಕೊಂಡ ಅಜುಬುಕ್ ನನ್ನ ತಂದೆ ಇದ್ದಾಗಲೇ ಕಾರುನ್ನು ಕೊಡಿಸಲು ಸಾಧ್ಯವಾಗಲಿಲ್ಲ. ಇಗಲಾದ್ರೂ ಅವರ ಆಸೆಯೆಂತೆ ಹೊಸ ಕಾರಿನೊಂದಿಗೆ ಸಮಾಧಿ ಮಾಡಿದ್ರೆ ಅವರ ಆತ್ಮಕ್ಕೆ ಶಾಂತಿ ಸಿಗಬಹುದು ಎನ್ನುವ ಉದ್ದೇಶದಿಂದ ಈ ಕಾರ್ಯವನ್ನು ಮಾಡಿ ಮುಗಿಸಿದ್ದಾನೆ.

ಹೊಸ ಬಿಎಂಡಬ್ಲ್ಯು ಕಾರಿನೊಂದಿಗೆ ತಂದೆಯ ಶವಸಂಸ್ಕಾರ ಮಾಡಿದ ಪುಣ್ಯಾತ್ಮ

ಸದ್ಯ ಕಾರಿನೊಂದಿಗೆ ಶವ ಸಂಸ್ಕಾರ ಮಾಡುತ್ತಿರುವ ಚಿತ್ರವೊಂದು ವಿಶ್ವಾದ್ಯಂತ ಚರ್ಚೆಗೆ ಕಾರಣವಾಗಿದ್ದು, ಅಜುಬುಕ್ ಕಾರ್ಯಕ್ಕೆ ಕೆಲವರು ಪ್ರಸಂಶೆ ವ್ಯಕ್ತಪಡಿಸಿದ್ರೆ ಇನ್ನು ಕೆಲವರು ಶವದ ಜೊತೆ ಕಾರನ್ನು ಸಮಾಧಿ ಮಾಡುವುದರಿಂದ ಯಾವುದೇ ಲಾಭವಿಲ್ಲ, ಬದಲಿಗೆ ಬಡ ಮಕ್ಕಳಿಗೆ ಸಹಾಯ ಮಾಡಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಹೊಸ ಬಿಎಂಡಬ್ಲ್ಯು ಕಾರಿನೊಂದಿಗೆ ತಂದೆಯ ಶವಸಂಸ್ಕಾರ ಮಾಡಿದ ಪುಣ್ಯಾತ್ಮ

ಇನ್ನು ಶವದ ಜೊತೆ ಸಮಾಧಿ ಮಾಡಲಾದ ಹೊಚ್ಚ ಹೊಸ ಬಿಎಂಡಬ್ಲ್ಯು ಕಾರು 66 ಸಾವಿರ ಅಮೆಕನ್ ಡಾಲರ್ ಮೌಲ್ಯವನ್ನು ಹೊಂದಿತ್ತು ಎನ್ನಲಾಗಿದ್ದು, ಈ ವಿಲಕ್ಷಣ ಪದ್ಧತಿಯಿಂದ ಯಾರಿಗೆ ಪ್ರಯೋಜನ ಎನ್ನುವುದೇ ಇಲ್ಲಿರುವ ಪ್ರಮುಖ ವಿಚಾರ.

ಹೊಸ ಬಿಎಂಡಬ್ಲ್ಯು ಕಾರಿನೊಂದಿಗೆ ತಂದೆಯ ಶವಸಂಸ್ಕಾರ ಮಾಡಿದ ಪುಣ್ಯಾತ್ಮ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ನೈಜೆರಿಯಾದಲ್ಲಿ ನಡೆದ ಈ ಘಟನೆ ಇದೇ ಮೊದಲಲ್ಲಾ. ಈ ಹಿಂದೆ 2015ರಲ್ಲೂ ತನ್ನ ತಾಯಿ ಆತ್ಮಕ್ಕೆ ಶಾಂತಿ ಸಿಗಲೆಂದು ಹೊಸ ಹಮ್ಮರ್ ಕಾರಿನೊಂದಿಗೆ ತಾಯಿ ಶವಸಂಸ್ಕಾರ ಮಾಡಿದ್ದು ಸಹ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿತ್ತು.

ಬಿಎಂಡಬ್ಲ್ಯೂ ಕಾರಿನೊಂದಿಗೆ ಶವಸಂಸ್ಕಾರ ಮಾಡುತ್ತಿರುವ ವಿಡಿಯೋ ಇಲ್ಲಿದೆ ನೋಡಿ...

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಬಡ ವಿದ್ಯಾರ್ಥಿ ತಯಾರಿಸಿದ ಡ್ರೈವರ್ ಲೆಸ್ ಟ್ರ್ಯಾಕ್ಟರ್ ಹೇಗಿದೆ ನೋಡಿ..

ವಿಡಿಯೋ- ಟೊಯೊಟಾ ಇನೋವಾ ಗುದ್ದಿದ ರಭಸಕ್ಕೆ 30 ಅಡಿ ದೂರ ಹೋಗಿ ಬಿದ್ದ ಯುವಕ...

ಕಂಬಿ ಹಿಂದೆ ಸರಿದ ರೇಪಿಸ್ಟ್ ಬಾಬಾ ರಾಮ್ ರಹೀಮ್ ಬಳಿ ಇವೆ ವಿಲಕ್ಷಣ ಐಷಾರಾಮಿ ಕಾರ್ ಕಲೆಕ್ಷನ್..!!

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್....

ಒಂದು ಬಾರಿ ಈ ವಿಡಿಯೋ ನೋಡಿ.. ಹೆಲ್ಮೆಟ್‍‍ನ ಮೌಲ್ಯ ಏನು ಅಂತ ನಿಮಗೇ ತಿಳಿಯುತ್ತೆ..

Kannada
Read more on auto facts off beat
English summary
Nigerian man buries father in brand-new BMW.
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more