ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್....

Written By: Rahul TS

ಕೆಲದಿನಗಳ ಹಿಂದಷ್ಟೇ ದ್ವಿಚಕ್ರ ವಾಹನಗಳ ಹಿಂಬದಿಯ ಸವಾರರಿಗೂ ಕೂಡಾ ಹೆಲ್ಮೆಟ್ ಕಡ್ಡಾಯವಾಗಿದ್ದು, ಹೀಗಿದ್ದರೂ ಬಹುತೇಕ ವಾಹನ ಸವಾರರು ಮಹತ್ವದ ಆದೇಶವನ್ನು ಪಾಲಿಸುತ್ತಿಲ್ಲ. ಇದಕ್ಕಾಗಿ ಹತ್ತಾರು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡಲು ಪ್ರಯೋಜನವಾಗುತ್ತಿಲ್ಲ.

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್..

ಹೀಗಾಗಿ ಟ್ರಾಫಿಕ್ ಪೊಲೀಸರು ಮತ್ತು ಬೈಕ್ ಸವಾರ ಮಧ್ಯೆ ಆಗಾಗ ವಾಗ್ವಾದಕ್ಕೆ ಕಾರಣವಾಗುತ್ತಿದ್ದು, ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ಧಿಗಳನ್ನು ನಾವು ನೋಡಬಹುದಾಗಿದೆ. ಇದೀಗ ಅಂತದ್ದೆ ಮತ್ತೊಂದು ಘಟನೆ ನಡೆದಿದ್ದು, ಟ್ರಾಫಿಕ್ ಪೊಲೀಸ್ ಒಬ್ಬರು ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ದ್ವಿಚಕ್ರ ಸವಾರನ ಮೇಲೆ ಶೂ ಎಸೆದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್..

ಹೌದು, ಬೆಂಗಳೂರಿನಲ್ಲಿಯೇ ಈ ಘಟನೆ ನಡೆದಿದ್ದು, ಹೆಲ್ಮೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ ಯುವಕರಿಗೆ ಟ್ರಾಫಿಕ್ ಪೊಲೀಸ್ ಒಬ್ಬರು ಶೂ ಎಸೆಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್..

ಈ ವಿಡಿಯೋನವನ್ನು ವಿ-ಬ್ಲಾಗರ್ ರಿಷಬ್ ಎನ್ನುವರು ತಮ್ಮ ಯೂಟ್ಯೂಬ್ ಚಾನೆಲ್‍‍ನಲ್ಲಿ ಪೊಸ್ಟ್ ಮಾಡಿದ್ದು, ಈ ವಿಡಿಯೋದಲ್ಲಿ ಹೆಲ್ಮೆಟ್ ಹಾಕದೆಯೇ ಬೈಕ್ ಮೇಲೆ ಹೋಗುತ್ತಿದ್ದ ಇಬ್ಬರು ಯುವಕರನ್ನು ಕಂಡ ಟ್ರಾಫಿಕ್ ಪೊಲೀಸ್ ಒಬ್ಬರು ತಮ್ಮದೇ ಶೂ ಎಸೆಯುತ್ತಿರುವ ದೃಶ್ಯ ಸೆರೆಯಾಗಿದೆ.

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್..

ಪೊಲೀಸರ ವರ್ತನೆಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದು, ಕಾನೂನು ಉಲ್ಲಂಘನೆ ಮಾಡಿದ ಬೈಕ್ ಸವಾರನಿಗೆ ದಂಡ ವಿಧಿಸುವುದು ಬಿಟ್ಟು ಶೂ ಎಸೆಯುವುದು ಎಷ್ಟರ ಮಟ್ಟಿಗೆ ಸರಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್..

ಇನ್ನು ಕೆಲವು ಮೋಟಾರ್‍ ಸೈಕಲ್ ಸವಾರರು ಕೂಡಾ ತಮ್ಮದೇ ಸುರಕ್ಷತೆಯ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಜೊತೆಗೆ ಹೆಲ್ಮೆಟ್ ಇಲ್ಲದೆಯೇ ವಾಹನ ಚಲಾಯಿಸುವುದನ್ನು ಶೋಕಿ ಎಂದುಕೊಂಡಿದ್ದಾರೆ. ಆದ್ರೆ ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುವುದನ್ನು ಅವರು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ.

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್..

ಹೀಗಾಗಿ ಹೆಲ್ಮೆಟ್ ಇಲ್ಲದೆಯೇ ವಾಹನ ಚಲಾಯಿಸಿದ್ದರಿಂದ ರಸ್ತೆ ಅಪಘಾತದ ವೇಳೆ ಕ್ಷಣದಲ್ಲೇ ಪ್ರಾಣಬಿಟ್ಟ ಅದೆಷ್ಟೊ ಉದಾಹರಣೆಗಳಿವೆ. ಹೀಗಿದ್ದರೂ ಶೋಕಿಗಾಗಿ ಹೆಲ್ಮೆಟ್ ಕಳಚಿ ವಾಹನ ಚಲಾಯಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಹೆಲ್ಮೆಟ್ ಇರುವುದು ನಮ್ಮ ಶಿರವನ್ನು ರಕ್ಷಿಸುವುದಕ್ಕಾಗಿಯೇ ಎಂಬುದು ನಾವು ಮೊದಲು ಅರಿಯಬೇಕು.

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್..

ಪೊಲೀಸರು ಮಾತ್ರವಲ್ಲದೇ ಈ ಮಧ್ಯೆ ಸೆಲೆಬ್ರಿಟಿಗಳು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹೆಲ್ಮೆಟ್ ಬಳಕೆಯ ಮಹತ್ವದ ಕುರಿತು ಪೋಸ್ಟ್ ಮಾಡುತ್ತಿದ್ದಾರೆ. ಆದರೂ ಹೆಲ್ಮೆಟ್ ಬಳಸದೆಯೇ ವಾಹನ ಚಲಾಯಿಸುವರ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ ಎನ್ನುವುದೇ ವಿಷಾದಕರ ಸಂಗತಿ.

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್..

ಆದರೂ ಹೆಲ್ಮೆಟ್ ಇಲ್ಲದೆಯೇ ಬೈಕ್ ಸವಾರಿ ಮಾಡುತ್ತಿದ್ದ ಯುವಕನನ್ನು ಹಿಡಿದು ದಂಡ ವಸೂಲಿ ಮಾಡುವುದನ್ನು ಬಿಟ್ಟು ಶೂ ಎಸೆದಿರುವ ಪೊಲೀಸರ ಕ್ರಮವನ್ನು ಖಂಡಿಸಲೇಬೇಕಾಗಿದ್ದು, ಘಟನೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ.

ಬೈಕ್ ಸವಾರನ ಮೇಲೆ ಟ್ರಾಫಿಕ್ ಪೊಲೀಸ್ ಶೂ ಎಸೆಯುತ್ತಿರುವ ವಿಡಿಯೋ ಇಲ್ಲಿದೆ ನೋಡಿ..

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ನಿಯಂತ್ರಣ ತಪ್ಪಿ 20 ಅಡಿ ಹಳ್ಳಕ್ಕೆ ಬಿದ್ದ ಟಾಟಾ ನೆಕ್ಸಾನ್- ಕಾರಿನಲ್ಲಿದ್ದವರಿಗೆ ಪರಿಸ್ಥಿತಿ ಏನಾಯ್ತು ಗೊತ್ತಾ?

ಸಲ್ಮಾನ್ ಖಾನ್ ಜೊತೆ ಜಾಲಿ ರೈಡ್‌ಗೆ ಹೋಗಿದ್ದ ನಟಿ ಜಾಕ್ವೆಲಿನ್ ಹೀಗೆ ಮಾಡಿದ್ದು ಸರಿನಾ?

ಖರೀದಿಗೆ ಲಭ್ಯವಾದ ಮಹೀಂದ್ರಾ ಥಾರ್ ವಂಡರ್‌ಲಸ್ಟ್ ಬೆಲೆ ಎಷ್ಟು ಗೊತ್ತಾ?

ಡೀಸೆಲ್ ಕಾರು ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆ ಏನು?

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಂದಲೇ ಟ್ರೋಲ್ ಆದ ಯುವಕ..

English summary
Bangalore cop sees helmet-less rider, hits him with his ‘chappal’.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark