ಸಲ್ಮಾನ್ ಖಾನ್ ಜೊತೆ ಜಾಲಿ ರೈಡ್‌ಗೆ ಹೋಗಿದ್ದ ನಟಿ ಜಾಕ್ವೆಲಿನ್ ಹೀಗೆ ಮಾಡಿದ್ದು ಸರಿನಾ?

Written By: Rahul TS

ಬಾಲುವುಡ್‍‍ನ ಖ್ಯಾತ ನಟ ಸಲ್ಮಾನ್ ಖಾನ್ ಲಡಾಕ್‍ನಲ್ಲಿ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಜೊತೆಗೆ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್‍‍ನಲ್ಲಿ ಪ್ರಯಾಣಿಸುತ್ತಿದ ವೇಳೆ ಜಾಕ್ವೆಲಿನ್ ಫೆರ್ನಾಂಡಿಸ್ ಮಾಡಿದ ಸೆಲ್ಫಿ ವೀಡಿಯೊವನ್ನು ಸ್ಟಾರ್ಸ್ ಆಫ್ ಎಂಬ ಯೂಟ್ಯೂಬ್ ಚಾನಲ್‍ನಲ್ಲಿ ಕಾಣಿಸಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಾಕ್ವೆಲಿನ್ ಜೊತೆ ಸಲ್ಮಾನ್ ಖಾನ್ ಜಾಲಿ ರೈಡ್..

ಕೇವಲ 4 ಸೆಕೆಂಡ್ ಮಾತ್ರ ಇರುವ ಈ ಸೆಲ್ಫಿ ವೀಡಿಯೊನಲ್ಲಿ, ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಮತ್ತು ಸಲ್ಮಾನ್ ಖಾನ್ ಪ್ರಶಾಂತವಾದ ಲಡಾಕ್‍ ರಸ್ತೆಗಳಲ್ಲಿ ಸುತ್ತಾಡುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ.

ಜಾಕ್ವೆಲಿನ್ ಜೊತೆ ಸಲ್ಮಾನ್ ಖಾನ್ ಜಾಲಿ ರೈಡ್..

ಕೆಲ ದಿನಗಳ ಹಿಂದಷ್ಟೆ ಬಾಲಿವುಡ್ ನಟ ಸಲ್ಮಾನ್ ಖಾನ್ 20 ವರ್ಷಗಳ ಹಿಂದೆ 1998ರಲ್ಲಿ ಕೃಷ್ಣಮೃಗವನ್ನು ಬೇಟೆ ಪ್ರಕರಣದಲ್ಲಿ ದೋಷಿ ಎಂದು ಸುಪ್ರೀಂ ಕೋರ್ಟ್ ತೀರ್ಪ್ರು ನೀಡಿದ್ದರಿಂದ ಎರಡು ದಿನಗಳ ಕಾಲ ಜೋದ್‍‍ಪುರ್‍‍ನ ಸೆಂಟ್ರಲ್ ಜೈಲ್‍‍ನಲ್ಲಿದ್ದರು.

ಜಾಕ್ವೆಲಿನ್ ಜೊತೆ ಸಲ್ಮಾನ್ ಖಾನ್ ಜಾಲಿ ರೈಡ್..

ಜಾಮೀನು ಸಿಕ್ಕ ನಂತರ ನಟ ಸಲ್ಮಾನ್ ಖಾನ್ ತಮ್ಮ ನಟನೆಯನ್ನು ಮುಂದುವರೆಸಿದ್ದಾರೆ. ಸಲ್ಮಾನ್ ಖಾನ್ ನಟಿಸುತ್ತಿರುವ ಹೊಸ ಧೂಮ್ 3 ಚಿತ್ರದ ಒಂದು ಹಾಡಿನ ಶೂಟಿಂಗ್ ಅನ್ನು ಜಮ್ಮು ಕಾಶ್ಮೀರ್ ಹತ್ತಿರವಿರುವ ಸೋನಾಮಾರ್ಗ್ ಎಂಬ ಪ್ರದೇಶದ ಹತ್ತಿರ ನಡೆಯುತ್ತಿದ್ದು, ಚೀತ್ರೀಕರಣದ ನಂತರ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್‍‍ನಲ್ಲಿ ಜಾಲಿ ರೈಡ್ ಸುತ್ತಿದ್ದಾರೆ.

ಜಾಕ್ವೆಲಿನ್ ಜೊತೆ ಸಲ್ಮಾನ್ ಖಾನ್ ಜಾಲಿ ರೈಡ್..

ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಎಂಜಿನ್ ವೈಶಿಷ್ಟ್ಯತೆ

346 ಸಿಸಿ ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್ ಟ್ವಿನ್ ಸ್ಪಾರ್ಕ್ ಎಂಜಿನ್ ಸಹಾಯದಿಂದ 28ಎನ್ಎಮ್ ಟಾರ್ಕ್ ಮತ್ತು 19.8 ಬಿಹೆಚ್‍ಪಿ ಯನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಜಾಕ್ವೆಲಿನ್ ಜೊತೆ ಸಲ್ಮಾನ್ ಖಾನ್ ಜಾಲಿ ರೈಡ್..

ಬಾಲಿವುಡ್‍‍ನಲ್ಲಿರುವ ಬೈಕ್ ಕ್ರೇಜ್ ಇರುವ ನಟರಲ್ಲಿ ಸಲ್ಮಾನ್ ಖಾನ್ ಕೂಡ ಒಬ್ಬರು. ಅಷ್ಟೆ ಅಲ್ಲದೆ ಇವರು ಸುಜುಕಿ ಮೋಟಾರ್‍‍ಸೈಕಲ್ ಇಂಡಿಯಾದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು ಅನೇಕ ಬಾರಿ ಸುಜುಕಿ ಹಯಾಬುಝಾ ಬೈಕ್‍‍ನಲ್ಲಿ ಕಾಣಿಸಿಕೊಂಡಿದ್ದಾರೆ.

ಜಾಕ್ವೆಲಿನ್ ಜೊತೆ ಸಲ್ಮಾನ್ ಖಾನ್ ಜಾಲಿ ರೈಡ್..

ಇದಲ್ಲದೆ ನಟ ಸಲ್ಮಾನ್ ಖಾನ್ ತಮ್ಮ ಬೈಕ್ ಕಲೆಕ್ಷನ್‍‍ನಲ್ಲಿ ಸುಜುಕಿ ಇಂಟ್ರೂಡರ್ ಎಮ್1800 ಮತ್ತು ಸುಜುಕಿ ಜಿಎಸ್ಎಕ್ಸ್-ಆರ್1000 ಬೈಕ್‍‍‍ಗಳಿದ್ದು, ರಾಯಲ್ ಎನ್‍‍ಫೀಲ್ಡ್ ಬೈಕ್ ಇದೆಯೊ ಇಲ್ಲವೊ ಎಂಬುದು ಸಂದೇಹವಾಗಿದೆ. ಆದರೆ ಸಲ್ಮಾನ್ ಖಾನ್‍‍ನ ಹಿಂದಿನ ಟ್ಯೂಬ್‍‍ಲೈಟ್ ಚಿತ್ರದಲ್ಲಿಯೂ ಕೂಡ ರಾಯಲ್ ಎನ್‍‍ಫೀಲ್ಡ್ ಅನ್ನು ಚಲಾಯಿಸಿದ್ದಾರೆ.

ಜಾಕ್ವೆಲಿನ್ ಜೊತೆ ಸಲ್ಮಾನ್ ಖಾನ್ ಜಾಲಿ ರೈಡ್..

ನಟಿ ಜಾಕ್ವೆಲಿನ್ ಫೆರ್ನಾಂಡಿಸ್‍‍ರವರಿಗು ಕೂಡಾ ಕಾರ್ ಕ್ರೇಜ್ ಇದ್ದು, ಈ ಮಧ್ಯೆ ಹೊಸದಾಗಿ ಜೀಪ್ ಕಾಂಪಸ್ ಐಷಾರಾಮಿ ಕಾರ್ ಅನ್ನು ಖರೀದಿಸಿದ್ದಾರೆ. ಇಷ್ಟೆ ಅಲ್ಲದೆ ಬಿಎಂಡಬ್ಲ್ಯೂ 525ಡಿ, ಮರ್ಸಿಡೀಸ್ ಮೆಯ್‍‍ಬ್ಯಾಚ್ ಎಸ್500, ರೇಂಜ್‍ ರೋವರ್ ವೌಗ್ ಮತ್ತು ಇನ್ನಿತರೆ ಐಷಾರಾಮಿ ಕಾರುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಜಾಕ್ವೆಲಿನ್ ಜೊತೆ ಸಲ್ಮಾನ್ ಖಾನ್ ಜಾಲಿ ರೈಡ್..

ಸದ್ಯಕ್ಕೆ ವೈರಲ್ ಆದ ಈ ವೀಡಿಯೊನಲ್ಲಿ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಹೆಲ್ಮೆಟ್ ಇಲ್ಲದೆಯೇ ಬೈಕ್‍‍ನ ಹಿಂಬದಿಯಲ್ಲಿ ಕೂತಿರುವುದನ್ನು ಗಮನಿಸಲೇಬೇಕು. ಏಕೆಂದರೆ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ನಟರು ತಮ್ಮ ಅಭಿಮಾನಿಗಳಿಗೆ ಆದರ್ಶವಾಗಿರಬೇಕಲ್ಲವೆ.?

ಜಾಕ್ವೆಲಿನ್ ಜೊತೆ ಸಲ್ಮಾನ್ ಖಾನ್ ಜಾಲಿ ರೈಡ್..

ಈಗಾಗಲೇ ಸರ್ಕಾರದ ಆದೇಶದಂತೆ ದ್ವಿಚಕ್ರ ವಾಹನದಲ್ಲಿ ಕೂರುವ ಹಿಂಬದಿಯ ಸವಾರರು ಕೂಡಾ ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕಾಗಿದ್ದು, ದೊಡ್ಡ ನಟರೇ ರಸ್ತೆ ನಿಯಮಗಳನ್ನ ಉಲ್ಲಂಘಿಸಿದರೆ ಹೇಗೆ ಎನ್ನುವ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ನಿಯಂತ್ರಣ ತಪ್ಪಿ 20 ಅಡಿ ಹಳ್ಳಕ್ಕೆ ಬಿದ್ದ ಟಾಟಾ ನೆಕ್ಸಾನ್- ಕಾರಿನಲ್ಲಿದ್ದವರಿಗೆ ಪರಿಸ್ಥಿತಿ ಏನಾಯ್ತು ಗೊತ್ತಾ?

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಂದಲೇ ಟ್ರೋಲ್ ಆದ ಯುವಕ..

ನಟ ಹೃತಿಕ್ ರೋಷನ್‍ ಖರೀದಿ ಮಾಡಿದ ಹೊಸ ಐಷಾರಾಮಿ ಕಾರು ಯಾವುದು ಗೊತ್ತಾ?

ಬಾಲಿವುಡ್ ತಾರೆಯರ ಫೇಮಸ್ ಕಾರ್ ಕಲೆಕ್ಷನ್ ಹೀಗಿದೆ ನೋಡಿ...

ವಿರುಕ್ಷಾ ಜೋಡಿಯ ಐಷಾರಾಮಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ಜಾಕ್ವೆಲಿನ್ ಜೊತೆ ಸಲ್ಮಾನ್ ಖಾನ್ ಜಾಲಿ ರೈಡ್ ವೀಡಿಯೊ..

English summary
Salman Khan Rides Royal Enfield Classic 350 In Ladakh With Jacqueline Fernandez As Pillion.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark