ನಟ ಹೃತಿಕ್ ರೋಷನ್‍ ಖರೀದಿ ಮಾಡಿದ ಹೊಸ ಐಷಾರಾಮಿ ಕಾರು ಯಾವುದು ಗೊತ್ತಾ?

Written By: Rahul TS

ಕಹೊ ನ ಪ್ಯಾರ್ ಹೇ ಚಿತ್ರದಿಂದ ತಮ್ಮ ಡ್ಯಾನ್ಸ್ ಹಾಗೂ ನಟನೆ ಮೂಲಕ ಇಂದಿಗೂ ಬಾಲಿವುಡ್ ಚಿತ್ರರಂಗದ ಸುಂದರ ನಟನಾಗಿಯೇ ಕರೆಸಿಕೊಳ್ಳುತ್ತಿರುವ ಬಾಲಿವುಡ್ ನಟ ಹೃತಿಕ್ ರೋಷನ್‍ರವರ ಕಾರ್ ಕಲೆಕ್ಷನ್‍‍ಗೆ ಇದೀಗ ಹೊಸ ಕಾರು ಸೇರ್ಪಡೆಯಾಗಿದ್ದು, ಕಾರಿನ ಬಗ್ಗೆ ಪೂರ್ಣ ವಿವರ ಇಲ್ಲಿದೆ ನೋಡಿ.

ಹೃತಿಕ್ ರೋಷನ್‍ನ ಹೊಸ ಐಷಾರಾಮಿ ಕಾರು ಹೇಗಿದೆ ಗೊತ್ತಾ?

ಬಾಲಿವುಡ್ ನಟ ಹೃತಿಕ್ ರೋಷನ್ ಆಸ್ಟನ್ ಮಾರ್ಟಿನ್ ಐಷಾರಾಮಿ ಕಾರು ತಯಾರಕ ಸಂಸ್ಥೆಯ ರ್‍ಯಾಪಿಡ್ ಎಸ್ ಕಾರ್ ಅನ್ನು ಖರೀದಿಸಿದ್ದು, ಮುಂಬೈ ನಗರದ ರಸ್ತೆಗಳಲ್ಲಿ ಸಂಚರಿಸುವ ಮೂಲಕ ತಮ್ಮ ಅಭಿಮಾನಿಗಳಿಗೆ ಸರ್ಫೈಸ್ ನೀಡಿದ್ದಾರೆ.

ಹೃತಿಕ್ ರೋಷನ್‍ನ ಹೊಸ ಐಷಾರಾಮಿ ಕಾರು ಹೇಗಿದೆ ಗೊತ್ತಾ?

ಹೃತಿಕ್ ರೋಷನ್ ಖರೀದಿಸಿದ ರ್‍ಯಾಪಿಡ್ ಎಸ್ ಕಾರು ಸಿಲ್ವರ್ ಪೇಯಿಂಟ್ ಹಾಗು ಒಳಭಾಗದಲ್ಲಿ ಕಪ್ಪು ಬಣ್ಣವನ್ನು ಪಡೆದಿದೆ. ಇದಲ್ಲದೆ ರ್‍ಯಾಪಿಡ್ ಎಸ್ ಕಾರು ನಾಲ್ಕು ಬಾಗಿಲಿನ ಸೆಡಾನ್ ಕಾರಾಗಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 3.9 ಕೋಟಿ ಬೆಲೆಗೆ ಮಾರಾಟಗೊಳ್ಳುತ್ತಿದೆ.

ಹೃತಿಕ್ ರೋಷನ್‍ನ ಹೊಸ ಐಷಾರಾಮಿ ಕಾರು ಹೇಗಿದೆ ಗೊತ್ತಾ?

ಬ್ರಿಟಿಷ್ ಐಷಾರಾಮಿ ಕಾರು ತಯಾರಕ ಆಸ್ಟನ್ ಮಾರ್ಟಿನ್ ಸಂಸ್ಥೆಯ ರ್‍ಯಾಪಿಡ್ ಎಸ್ ಕಾರುಗಳು ಭಾರತದಲ್ಲಿ ಅಧಿಕವಾಗಿ ಮಾರಾಟಗೊಳ್ಳುತ್ತಿರುವ ವಾಹನವಾಗಿದ್ದು, ಕಾರಿನ ಒಟ್ಟಾರೆ ವಿನ್ಯಾಸಕ್ಕೆ ಮೊರೆಹೋಗಿ ಶ್ರೀಮಂತ ಗ್ರಾಹಕರು ಈ ಕಾರನ್ನು ಖರೀದಿಸುತ್ತಿದ್ದಾರೆ.

ಹೃತಿಕ್ ರೋಷನ್‍ನ ಹೊಸ ಐಷಾರಾಮಿ ಕಾರು ಹೇಗಿದೆ ಗೊತ್ತಾ?

ರ್‍ಯಾಪಿಡ್ ಎಸ್ ಕಾರು 6.0 ಲೀಟರ್ ವಿ12 ಪೆಟ್ರೋಲ್ ಎಂಜಿನ್ ಸಹಾಯದಿಂದ 552ಬಿಹೆಚ್‍ಪಿ ಹಾಗು 630ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 8 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೃತಿಕ್ ರೋಷನ್‍ನ ಹೊಸ ಐಷಾರಾಮಿ ಕಾರು ಹೇಗಿದೆ ಗೊತ್ತಾ?

ಆಸ್ಟನ್ ಮಾರ್ಟಿನ್ ರ್‍ಯಾಪಿಡ್ ಎಸ್ ಕಾರುಗಳು 4.2 ಸೆಕೆಂಡಿಗೆ 0 ರಿಂದ 100 ಕಿಲೋಮೀಟರ್ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದಿದ್ದು, ಗಂಟೆಗೆ 327 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿದೆ.

ಹೃತಿಕ್ ರೋಷನ್‍ನ ಹೊಸ ಐಷಾರಾಮಿ ಕಾರು ಹೇಗಿದೆ ಗೊತ್ತಾ?

ರ್‍ಯಾಪಿಡ್ ಎಸ್ ಕಾರುಗಳು ಬಿಶ್‍ಬೋನ್ ಸಸ್ಪೆಷನ್ ಪಡೆದಿದ್ದು, ಎರಡು ಬದಿಗಳಲ್ಲಿ ಆಕ್ಟಿವ್ ಡಂಪಿಂಗ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಪ್ರಯಾಣಿಕರ ಸೇಫ್ಟಿಗಾಗಿ ಮುಂಭಾಗದಲ್ಲಿ 398ಎಂಎಂ ಮತ್ತು ಹಿಂಭಾಗದಲ್ಲಿ 360ಎಂಎಂ ಡ್ಯುಯಲ್ ಕಾಸ್ಟ್ ಡಿಸ್ಕ್ ಬ್ರೇಕಿಂಗ್ ಸಿಸ್ಟಂ, ಇಬಿಡಿಯಂದಿಗೆ ಎಬಿಎಸ್, ಎಮರ್ಜನ್ಸಿ ಬ್ರೇಕ್ ಅಸ್ಸಿಸ್ಟ್, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಹೈಡ್ರಾಲಿಕ್ ಬ್ರೇಕ್ ಅಸ್ಸಿಸ್ಟ್ ಅನ್ನು ಅಳವಡಿಸಲಾಗಿದೆ.

ಹೃತಿಕ್ ರೋಷನ್‍ನ ಹೊಸ ಐಷಾರಾಮಿ ಕಾರು ಹೇಗಿದೆ ಗೊತ್ತಾ?

ಇದಲ್ಲದೇ ರ್‍ಯಾಪಿಡ್ ಎಸ್ ಕಾರುಗಳು ಪರ್ಯಾಯ ಬ್ರೇಕ್ ಕ್ಯಾಲಿಪರ್ ಫಿನಿಶ್, ಕಾರ್ಬನ್ ಎಕ್ಸ್ಟೀರಿಯರ್ ಪ್ಯಾಕ್, ವಿವಿದ ಸ್ಟಿಚಿಂಗ್ ಆಯ್ಕೆಗಳುಳ್ಳ ಲೆದರ್ ಸೀಟ್‍‍ಗಳು, ಇಂಟೀರಿಯರ್ ಬ್ಲಾಕ್ ಪ್ಯಾಕ್, ಐಷಾರಾಮಿ ಪ್ಯಾಕ್, ಮ್ಯಾಚಿಂಗ್ ವುಡ್ಸ್, ಕಾರ್ಬನ್ ಫೈಬರ್ ಡೋರ್ ಟ್ರಿಮ್ ಮತ್ತು ಸೆಕೆಂಡ್ ಗ್ಲಾಸ್ ಕೀ ಎಂಬ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಹೃತಿಕ್ ರೋಷನ್‍ನ ಹೊಸ ಐಷಾರಾಮಿ ಕಾರು ಹೇಗಿದೆ ಗೊತ್ತಾ?

ಹೃತಿಕ್ ರೋಷನ್ ಆಸ್ಟನ್ ಮಾರ್ಟಿನ್ ರ್‍ಯಾಪಿಡ್ ಎಸ್ ಕಾರನ್ನು ಕೊಂಡ ಮೊದಲನೆಯ ಬಾಲಿವುಡ್ ನಟನಾಗಿದ್ದು, ಇದರೊಂದಿಗೆ ನಟ ಹೃತಿಕ್ ರೋಶನ್ ಪೋರ್ಷೆ ಕಯೆನಿ ಟರ್ಬೊ ಎಸ್, ರೇಂಜ್ ರೋವರ್ ವೋಗ್, ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಮತ್ತು ರೋಲ್ಸ್ ರಾಯ್ಸ್ ಗೋಸ್ಟ್‌ನಂತರ ಐಷಾರಾಮಿ ಕಾರುಗಳನ್ನು ಕೂಡ ಖರೀದಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ರೈಲು ತಡೆ ವೇಳೆ ಅವಘಡ- ಹೈ ಟೆನ್ಷನ್ ವೈರ್ ತಾಗಿ ಸುಟ್ಟುಹೋದ ಯುವಕ

ಭಾರತೀಯ ಕ್ರಿಕೆಟ್ ಆಟಗಾರರ ಐಷಾರಾಮಿ ಕಾರುಗಳ ಭರ್ಜರಿ ಕಲೆಕ್ಷನ್ ಹೇಗಿದೆ ಗೊತ್ತಾ?

ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

ಲಂಬೋರ್ಗಿನಿ ಕಾರಿನ ಫ್ಯಾನ್ಸಿ ನಂಬರ್‌ಗಾಗಿ 7 ಲಕ್ಷ ತೆತ್ತ ಮಾಲಿವುಡ್ ನಟ

ಬಾಲಿವುಡ್ ತಾರೆಯರ ಫೇಮಸ್ ಕಾರ್ ಕಲೆಕ್ಷನ್ ಹೀಗಿದೆ ನೋಡಿ...

English summary
Hrithik Roshan Gets Himself A New Ride — An Aston Martin Rapide S.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark