ಸಿನಿಮಾ ಹಿಟ್ ಆಯ್ತು.. 100 ಕೋಟಿ ಕಲೆಕ್ಷನ್, 4 ಕೋಟಿ ಮೌಲ್ಯದ ಹೊಸ ಕಾರು ಖರೀದಿಸಿದ 67ರ ಸೀನಿಯರ್ ನಟ!
ಸನ್ನಿ ಡಿಯೋಲ್ (Sunny Deol) ಜನಪ್ರಿಯ ಬಾಲಿವುಡ್ ನಟರಾಗಿದ್ದು, 67ನೇ ವಯಸ್ಸಿನಲ್ಲೂ ಸಿನಿರಂಗದಲ್ಲಿ ಫುಲ್ ಆಕ್ಟಿವ್ ಇದ್ದಾರೆ. 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದರೊಟ್ಟಿಗೆ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಈಚೆಗೆ ಅವರ ನಟನೆಯ 'ಜಾಟ್' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ರೂ.102 ಕೋಟಿ ಕಲೆಕ್ಷನ್ ಮಾಡಿತ್ತು. ಈ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ & ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸಿದ್ದು, ಗೋಪಿಚಂದ್ ಮಲಿನೇನಿ ಆಕ್ಷನ್ ಕಟ್ ಹೇಳಿದ್ದಾರೆ.
ಸದ್ಯ ಸನ್ನಿ ಡಿಯೋಲ್ ದುಬಾರಿ ಬೆಲೆಯ ಹೊಚ್ಚ ಹೊಸ ಐಷಾರಾಮಿ ಪೋರ್ಷೆ 911 (Porsche 911) ಸ್ಪೋರ್ಟ್ಸ್ ಸೆಡಾನ್‌ನ್ನು ಖರೀದಿ ಮಾಡಿದ್ದಾರೆ. ನೂತನ ಕಾರನ್ನು ಓಡಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲೂ ಕಾಣಿಸಿಕೊಂಡಿದೆ. ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಪೋರ್ಷೆ 911 ವಿಶೇಷತೆಗಳೇನು:
ಈ ಕಾರು ರೂ.2.11 ಕೋಟಿಯಿಂದ ರೂ.4.06 ಕೋಟಿ (ಎಕ್ಸ್-ಶೋರೂಂ - ಬೆಂಗಳೂರು) ದರವನ್ನು ಪಡೆದಿದೆ. 911 ಕ್ಯಾರೆರಾ ಜಿಟಿಎಸ್, 911 ಕ್ಯಾರೆರಾ 4 ಜಿಟಿಎಸ್, 911 ಟಾರ್ಗಾ 4 ಜಿಟಿಎಸ್, 911 ಟರ್ಬೊ ಹಾಗೂ 911 ಜಿಟಿ3 ಆರ್‌ಎಸ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.
ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಪಡೆದಿದೆ. ಹೆಚ್‌ಡಿ-ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್‌ಲೈಟ್‌ಗಳು ಹಾಗೂ ದೊಡ್ಡ ಗಾತ್ರದ ವೀಲ್‌ಗಳನ್ನು ಒಳಗೊಂಡಿದೆ. ವೈಟ್, ಬ್ಲ್ಯಾಕ್, ಜೆಟ್ ಬ್ಲ್ಯಾಕ್ ಮೆಟಾಲಿಕ್, ಜಿಟಿ ಸಿಲ್ವರ್ ಮೆಟಾಲಿಕ್, ಜೆಂಟಿಯನ್ ಬ್ಲೂ ಮೆಟಾಲಿಕ್, ಕಾರ್ಮೈನ್ ರೆಡ್, ಚಾಕ್, ಲುಗಾನೊ ಬ್ಲೂ, ಶೇಡ್ ಗ್ರೀನ್ ಮೆಟಾಲಿಕ್, ಸ್ಲೇಟ್ ಗ್ರೇ ನಿಯೋ, ಐಸ್ ಗ್ರೇ ಮೆಟಾಲಿಕ್, ಅಗೇಟ್ ಗ್ರೇ ಮೆಟಾಲಿಕ್ ಹಾಗೂ ಅವೆಂಚುರಿನ್ ಗ್ರೀನ್ ಮೆಟಾಲಿಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.
ನೂತನ ಪೋರ್ಷೆ 911 ಕಾರು ದೊಡ್ಡ ಗಾತ್ರದಲ್ಲಿದೆ. 4,519 ಎಂಎಂ ಉದ್ದ, 1,900 ಎಂಎಂ ಅಗಲ ಮತ್ತು 1,303 ಎಂಎಂ ಎತ್ತರವಿದೆ. 109 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,457 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ. ಸರಿ ಸುಮಾರು 1590 ಕೆಜಿ ತೂಕವಿದೆ.
ಈ ಸೆಡಾನ್ 4 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 132 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ.
ಇದು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 3.0-ಲೀಟರ್ ಟರ್ಬೋಚಾರ್ಜ್ಡ್ ಫ್ಲಾಟ್-6 ಪೆಟ್ರೋಲ್, 3.7-ಲೀಟರ್ ಟರ್ಬೋಚಾರ್ಜ್ಡ್ ಫ್ಲಾಟ್-6 ಪೆಟ್ರೋಲ್ ಹಾಗೂ 4.0-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಫ್ಲಾಟ್-6 ಎಂಜಿನ್ ಆಯ್ಕೆಯನ್ನು ಹೊಂದಿದೆ. 8-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 10 ಕಿ.ಮೀ ಮೈಲೇಜ್ ನೀಡುತ್ತದೆ. 64 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ತನ್ನದಾಗಿಸಿಕೊಂಡಿದೆ.
ಹೊಸ ಪೋರ್ಷೆ 911 ಕಾರು 183 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 3.1 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. 10.9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಪ್ರೀಮಿಯಂ ಬೋಸ್ ಸೌಂಡ್ ಸಿಸ್ಟಮ್, ಡುಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್, ಹೀಟೆಡ್ & ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಸೆಡಾನ್ ಸುರಕ್ಷತೆಗೂ ಹೆಸರುವಾಸಿಯಾಗಿದ್ದು, ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಇದು ರೂಪಾಂತರಗಳಿಗೆ ಅನುಗುಣವಾಗಿ 4 ರಿಂದ 8 ಏರ್‌ಬ್ಯಾಗ್‌ಗಳನ್ನು ಹೊಂದಿದೆ. ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ ಟ್ರಾಕ್ಷನ್ ಕಂಟ್ರೋಲ್‌ಗಳನ್ನು ಪಡೆದಿದೆ.


Click it and Unblock the Notifications








