ಸ್ಟಾರ್ ಕ್ರಿಕೆಟರ್ ಆದರು ಅಪ್ಪನ ಪ್ರೀತಿ ಮರೆತಿಲ್ಲ: ತಂದೆಯ ತ್ಯಾಗಕ್ಕೆ ಒಂದೊಳ್ಳೆ ಗಿಫ್ಟ್... ಮೆಚ್ಚಿತು ಕುಟುಂಬ!

ಭಾರತದ ಯುವ ಕ್ರಿಕೆಟಿಗ ತಿಲಕ್ ವರ್ಮಾ ಸ್ಟಾರ್ ಆಟಗಾರನಾಗಲು ತಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರ ತಂದೆ ನಂಬೂರಿ ನಾಗರಾಜ್‌ಗೆ ಅಚ್ಚರಿ ಉಡುಗೊರೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ವೈರಲ್ ಆಗಿರುವ ಈ ಹೃದಯಸ್ಪರ್ಶಿ ನಡೆ, ಅಪ್ಪ ಮಗನ ಭಾಂದವ್ಯವನ್ನು ನೆಟ್ಟಿಗರು ಮೆಚ್ಚಿ ಶ್ಲಾಘಿಸುವಂತೆ ಮಾಡಿದೆ. 2025 ರ ಏಷ್ಯಾ ಕಪ್‌ ಉತ್ಸಾಹವು ಉತ್ತುಂಗಕ್ಕೇರುತ್ತಿದ್ದಂತೆ, ಮಹೀಂದ್ರಾ ಡೀಲರ್‌ಶಿಪ್‌ನಲ್ಲಿ ಪರಿಸರ ಸ್ನೇಹಿ SUV ಯನ್ನು ಡೆರಲಿವರಿ ಪಡೆದ ತಿಲಕ್ ಕುಟುಂಬ ಹೆಮ್ಮೆ ಮತ್ತು ಭಾವನಾತ್ಮಕವಾಗಿ ಈ ವಿಶೇಷ ಕ್ಷಣವನ್ನು ಹಂಚಿಕೊಂಡಿದೆ.

22 ವರ್ಷ ವಯಸ್ಸಿನ ತಿಲಕ್ ವರ್ಮಾ, ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ಪ್ರಭಾವಶಾಲಿ ದಾಖಲೆಯನ್ನು ಹೊಂದಿರುವ ಭಾರತೀಯ ಕ್ರಿಕೆಟ್‌ನ ಅತ್ಯಂತ ಭರವಸೆಯ ಯುವ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ತಿಲಕ್' ತಮ್ಮ ತಂದೆಯ ತ್ಯಾಗ ಮತ್ತು ಬೆಂಬಲವನ್ನು ಆಗಾಗ್ಗೆ ಗುರುತಿಸಿಕೊಳ್ಳುತ್ತಾರೆ, ಇದೀಗ ದುಬಾರಿ ಉಡುಗೊರೆಯನ್ನು ನೀಡಿ ಇಡೀ ಕುಟುಂಬವನ್ನು ಅಚ್ಚರಿಗೊಳಿಸಿದ್ದಾರೆ.

cricketer-tilak-varma-gifted-mahindra-xev-9e-to-his-dad

ಭಾರತದ ಯುವ ಕ್ರಿಕೆಟಿಗ ತಿಲಕ್ ವರ್ಮಾ ಇತ್ತೀಚೆಗೆ ತಮ್ಮ ತಂದೆಗೆ ಹೊಚ್ಚ ಹೊಸ ಮಹೀಂದ್ರಾ XEV 9e ಎಲೆಕ್ಟ್ರಿಕ್ SUV ಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ವೈರಲ್ ಆಗಿರುವ ಈ ಹೃದಯಸ್ಪರ್ಶಿ ನಡೆ, ಹೈದರಾಬಾದ್‌ನಲ್ಲಿ ವಿನಮ್ರ ಆರಂಭದಿಂದ ಅಂತರರಾಷ್ಟ್ರೀಯ ಕ್ರಿಕೆಟ್ ತಾರೆಯವರೆಗಿನ ತಮ್ಮ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ತಮ್ಮ ತಂದೆ ನಂಬೂರಿ ನಾಗರಾಜ್‌ಗೆ ತಿಲಕ್ ಹೊಂದಿರುವ ಹೃತ್ಪೂರ್ವಕ ಕೃತಜ್ಞತೆಯನ್ನು ಪ್ರತಿಬಿಂಬಿಸುತ್ತದೆ.

ಸುಮಾರು ರೂ. 22.65 ಲಕ್ಷದಿಂದ ರೂ. 34 ಲಕ್ಷ (ಎಕ್ಸ್ ಶೋ ರೂಂ) ಬೆಲೆಯ ಮಹೀಂದ್ರಾ XEV 9e ಸದ್ಯ ಭಾರತೀಯ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಅತ್ಯಂತ ಜನಪ್ರಿಯ ಕಾರಾಗಿದೆ. ಈ ಕಾರು EV ಕ್ಷೇತ್ರದಲ್ಲಿ ಭಾರತದ ಬೆಳೆಯುತ್ತಿರುವ ಸಾಮರ್ಥ್ಯಗಳ ಸಂಕೇತವಾಗಿದೆ. ತಿಲಕ್ ವರ್ಮಾ ಕುಟುಂಬಕ್ಕೆ ನಿಖರವಾಗಿ XEV 9e ನ ಯಾವ ವೇರಿಯೆಂಟ್ ನೀಡಲಾಗಿದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ.

cricketer-tilak-varma-gifted-mahindra-xev-9e-to-his-dad

ಮಹೀಂದ್ರಾ XEV 9e ವಿಶೇಷತೆಗಳು: ಮಹೀಂದ್ರಾ XEV 9e ಭಾರತದಲ್ಲಿ ಲಭ್ಯವಿರುವ ಅತ್ಯಂತ ತಾಂತ್ರಿಕವಾಗಿ ಮುಂದುವರಿದ ಎಲೆಕ್ಟ್ರಿಕ್ SUV ಗಳಲ್ಲಿ ಒಂದಾಗಿದೆ. ಸೆಲೆಬ್ರಿಟಿಗಳಲ್ಲಿ ಹೆಚ್ಚುತ್ತಿರುವ EV ಅಳವಡಿಕೆಯ ನಡುವೆ ತಿಲಕ್ ಅವರ ಆಯ್ಕೆಯು ಪರಿಸರ ಸ್ನೇಹಿ ಆದ್ಯತೆಯನ್ನು ಒತ್ತಿಹೇಳುತ್ತದೆ. ಈ ಕಾರು ಅಂತರಾಷ್ಟ್ರೀಯ ಎಲೆಕ್ಟ್ರಿಕ್ ಕಾರುಗಳಿಗೂ ಪೈಪೋಟಿ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಮಹೀಂದ್ರಾ XEV 9e ಟ್ರಿಪಲ್ 12.3-ಇಂಚಿನ ಸ್ಕ್ರೀನ್ ಡ್ಯಾಶ್‌ಬೋರ್ಡ್, ಪನೋರಮಿಕ್ ಸನ್‌ರೂಫ್, MAIA ಅಡ್ವಾನ್ಸ್ಡ್ AI ಆರ್ಕಿಟೆಕ್ಚರ್, ಐದು ರಾಡಾರ್‌ಗಳೊಂದಿಗೆ ಲೆವೆಲ್-2 ADAS, 16-ಸ್ಪೀಕರ್ ಹರ್ಮನ್ ಕಾರ್ಡನ್ ಆಡಿಯೊ ಸೆಟಪ್, ವೈರ್‌ಲೆಸ್ ಚಾರ್ಜಿಂಗ್, ಆಗ್ಮೆಂಟೆಡ್ ರಿಯಾಲಿಟಿ ಹೆಡ್ಸ್-ಅಪ್ ಡಿಸ್ಪ್ಲೇ, ಬಹು ಚಾಲನಾ ವಿಧಾನಗಳು ಮತ್ತು 360-ಡಿಗ್ರಿ ಕ್ಯಾಮೆರಾಗಳು ಸೇರಿದಂತೆ ಪ್ರಭಾವಶಾಲಿ ವೈಶಿಷ್ಟ್ಯಗಳನ್ನು ಹೊಂದಿದೆ.

cricketer-tilak-varma-gifted-mahindra-xev-9e-to-his-dad

ಗ್ರಾಹಕರು 59 kWh ಮತ್ತು 79 kWh ಎಂಬ ಎರಡು ಬ್ಯಾಟರಿ ಆಯ್ಕೆಗಳ ನಡುವೆ ಈ ಕಾರನ್ನು ಆಯ್ಕೆ ಮಾಡಬಹುದು. ಒಂದೇ ಚಾರ್ಜ್‌ನಲ್ಲಿ 656 ಕಿಮೀ ರೇಂಜ್ ನೀಡುತ್ತದೆ. SUV ಯ ಶಕ್ತಿಶಾಲಿ ಎಲೆಕ್ಟ್ರಿಕ್ ಮೋಟಾರ್‌ಗಳು 286 hp ಪವರ್ ಹೊರಹಾಕುತ್ತದೆ. ಕೇವಲ 6.8 ಸೆಕೆಂಡುಗಳಲ್ಲಿ 100 ಕಿಮೀ/ಗಂ ವೇಗವನ್ನು ತಲುಪಬಲ್ಲದು. ಇದರ ವೇಗದ ಚಾರ್ಜಿಂಗ್ ಸಾಮರ್ಥ್ಯವು ಬ್ಯಾಟರಿಯನ್ನು ಕೇವಲ 20 ನಿಮಿಷಗಳಲ್ಲಿ ಶೇ80 ಆಗುವಂತೆ ಮಾಡಬಲ್ಲದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, September 18, 2025, 15:57 [IST]
English summary
Cricketer tilak varma gifted mahindra xev 9e to his dad
Read more on offbeat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+