ಈಗಲೂ ಅದೇ ಬ್ಯೂಟಿ... ಇಷ್ಟು ದುಬಾರಿ ಕಾರು ಖರೀದಿಸಿದ್ದು ಇವರಾ? ಗೊತೇ ಆಗಲ್ಲ!
ಭಾರತೀಯ ಚಿತ್ರರಂಗದಲ್ಲಿ ನಿತ್ಯ ಯಾರೋ ಒಬ್ಬರು ಕಾರು ಖರೀದಿಸುತ್ತಲೇ ಇರುತ್ತಾರೆ. ಅದರಲ್ಲೂ ಬಾಲಿವುಡ್‌ನಲ್ಲಿ ಇತ್ತೀಚೆಗೆ ದುಬಾರಿ ಕಾರುಗಳ ಖರೀದಿ ಹೆಚ್ಚಾಗಿಬಿಟ್ಟಿದೆ. ಜನಪ್ರಿಯ ನಟಿ ವಿದ್ಯಾ ಬಾಲನ್ ಕೂಡ ಹೊಚ್ಚ ಹೊಸ ಮೇಬ್ಯಾಕ್ ಸೆಡಾನ್ ಅನ್ನು ಖರೀದಿಸಿದ್ದಾರೆ. ಇವರು ಬಾಲಿವುಡ್‌ನಲ್ಲಿ ಒಂದು ಕಾಲದ ಜನಪ್ರಿಯ ನಟಿಯಾಗಿದ್ದಾರೆ, ಡರ್ಟಿ ಪಿಕ್ಚರ್‌ನಂತಹ ಸೂಪರ್ ಹಿಟ್ ಸಿನಿಮಾಗಳ ಮೂಲಕ ಪಡ್ಡೆ ಹುಡುಗರ ಮನಗೆದ್ದವರು. ಪ್ರಸ್ತುತ 45ರ ವಯಸ್ಸಲ್ಲೂ ಅವರು ಯುವತಿಯಂತೆ ಕಾಣುತ್ತಿದ್ದಾರೆ. ತಮ್ಮ ಹೊಸ ಮರ್ಸಿಡಿಸ್ ಮೇಬ್ಯಾಕ್ ಎಸ್ 580 ದುಬಾರಿ ಸೆಡಾನ್‌ನೊಂದಿಗೆ ಇನ್ನೂ ಐಷಾರಾಮಿಯಾಗಿ ಕಾಣುತ್ತಿದ್ದಾರೆ.
ಈ ಹೊಸ ಕಾರಿನೊಂದಿಗೆ ಓಡಾಡುವ ವೀಡಿಯೊ ಈಗ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. ಈ ವಿಡಿಯೋವನ್ನು ಕಾರ್ಸ್ ಫಾರ್ ಯು ತಮ್ಮ ಯೂಟ್ಯೂಚ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ. ಈ ಹೊಸ ಮೇಬ್ಯಾಕ್ ಎಸ್ 580 ಸೆಡಾನ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.2.72 ಕೋಟಿಗಳಾಗಿದೆ. ಮೇಬ್ಯಾಕ್ ಎಸ್ 580 ಇತ್ತೀಚೆಗೆ ಬಾಲಿವುಡ್‌ನ ಖ್ಯಾತ ನಟರಲ್ಲಿ ಅತ್ಯಂತ ಜನಪ್ರಿಯವಾಗಿದೆ.

ವಿದ್ಯಾ ಬಾಲನ್ ಮಾತ್ರವಲ್ಲದೆ, ಕಂಗನಾ ರನೌತ್, ಶಾಹಿದ್ ಕಪೂರ್, ಅನಿಲ್ ಕಪೂರ್ ಮತ್ತು ಕಿಯಾರಾ ಅಡ್ವಾಣಿ ಅವರಂತಹ ನಟ-ನಟಿಯರು ಸಹ ಮೇಬ್ಯಾಕ್ ಎಸ್ 580 ಅನ್ನು ಖರೀದಿಸಿದ್ದಾರೆ. ಅವರಲ್ಲಿ ಕೆಲವರು ಹೆಚ್ಚು ದುಬಾರಿ ಎಸ್ 680 4ಮ್ಯಾಟಿಕ್ ಖರೀದಿಸಿದ್ದಾರೆ. ಇನ್ನೂ ಕೆಲವರು ಜಿಎಲ್‌ಎಸ್ 600 ಎಸ್‌ಯುವಿಯನ್ನು ಖರೀದಿಸಿದ್ದಾರೆ.
ವಿದ್ಯಾ ಬಾಲನ್‌ರ ಈ ಎಸ್ 580 ಪ್ರಸ್ತುತ ತಲೆಮಾರಿನ ಎಸ್-ಕ್ಲಾಸ್ ಅನ್ನು ಆಧರಿಸಿದೆ. ಇದು ಏಳನೇ ತಲೆಮಾರಿನ ಮಾದರಿಯಾಗಿದ್ದು, ವೈಶಿಷ್ಟ್ಯಗಳ ವಿಷಯದಲ್ಲಿ ಇದು ಡ್ಯಾಶ್‌ಬೋರ್ಡ್, ಆಸನಗಳು ಮತ್ತು ಕ್ಯಾಬಿನ್ ಉದ್ದಕ್ಕೂ ಪ್ರೀಮಿಯಂ ಆಗಿರುತ್ತದೆ. ಮರ್ಸಿಡಿಸ್ ಎಸ್ 580 ಕಾರು, 4.0-ಲೀಟರ್ ಬೈ-ಟರ್ಬೊ ವಿ 8 ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದೆ.

ಈ ಎಂಜಿನ್ 496 ಬಿಹೆಚ್‌ಪಿ ಪವರ್ ಮತ್ತು 700 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ. ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ. ಒಟ್ಟಾರೆ ಪರ್ಫಾಮೆನ್ಸ್ ಸೇರಿದಂತೆ ಕಾರು ಪ್ರೀಮಿಯಂ ಸೌಕರ್ಯಗಳಿಗೂ ಹೆಸರುವಾಸಿಯಾಗಿದೆ.
ವಿದ್ಯಾ ಬಾಲನ್ ಅವರಿಗೆ ಬೆಂಝ್ ಅಂದರೇ ತುಂಬಾ ಇಷ್ಟವಿದ್ದಂತಿದೆ, ತಮ್ಮ ಗ್ಯಾರೇಜ್‌ನಲ್ಲಿ ಈಗಾಗಲೇ 2019 ರಲ್ಲಿ ಖರಿದಿಸಿದ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಸೆಡಾನ್ ಕೂಡ ಇದೆ. ಈ ಸೆಡಾನ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿಯೂ ಲಭ್ಯವಿತ್ತು. ಇದು 2-ಲೀಟರ್ ಪೆಟ್ರೋಲ್ ಎಂಜಿನ್, 2.0-ಲೀಟರ್ ಡೀಸೆಲ್ ಎಂಜಿನ್ ಮತ್ತು 3.0-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಲಭ್ಯವಿತ್ತು.
ಹಾಗೆಯೇ ಅವರು ಮರ್ಸಿಡಿಸ್ ಬೆಂಝ್ ಜಿಎಲ್‌ಸಿ ಐಷಾರಾಮಿ ಎಸ್‌ಯುವಿಯನ್ನು ಸಹ ಹೊಂದಿದ್ದಾರೆ. ಅವರು ಎಸ್ 550 ಅನ್ನು ಸಹ ಹೊಂದಿದ್ದಾರೆ ಎಂಬ ವರದಿಗಳಿವೆ, ಆದರೆ ಈ ಬಗ್ಗೆ ಖಚಿತ ಮಾಹಿತಿಯಿಲ್ಲ. ಇತ್ತೀಚೆಗೆ ಖರೀದಿಸಿದ ಮೇಬ್ಯಾಕ್ ಎಸ್ 580 ಬಹುಶಃ ವಿದ್ಯಾ ಬಾಲನ್ ಅವರ ಗ್ಯಾರೇಜ್‌ನಲ್ಲಿ ಅತ್ಯಂತ ದುಬಾರಿ ಕಾರಾಗಿರಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








