ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

Written By: Rahul TS

ದೇಶದಲ್ಲಿ ಅದೆಷ್ಟೋ ಜನ ಇದುವರೆಗೂ ಡಿಎಲ್ ಮತ್ತು ಹೆಲ್ಮೆಟ್ ಇಲ್ಲದೇ ವಾಹನ ಚಲಾನೆ ಮಾಡುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಒಂದೊಮ್ಮೆ ಟ್ರಾಫಿಕ್ ಪೊಲೀಸರ ಕೈ ಸಿಕ್ಕಿಬಿದ್ದರೂ ಸುಮಾರು ಜನ ಪ್ರಭಾವಿಗಳ ಹೆಸರಿನೊಂದಿಗೆ ತಪ್ಪಿಸಿಕೊಳ್ಳುವುದನ್ನು ನಾವು ನೋಡಿದ್ದೇವೆ. ಆದ್ರೆ ಇಲ್ಲೊಂದು ಪ್ರಕರಣ ಅವುಗಳಿಂತ ಕೊಂಚ ಭಿನ್ನವಾಗಿದೆ.

ಟ್ರಾಫಿಕ್ಸ್ ರೂಲ್ಸ್ ಬ್ರೇಕ್- ಮಗನನ್ನೆ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

ಸಂಚಾರಿ ನಿಮಯಗಳನ್ನು ಬ್ರೇಕ್ ಮಾಡಿ ಟ್ರಾಫಿಕ್ ಪೋಲಿಸರ ಕೈಗೆ ಸಿಕ್ಕಿ ಬಿದ್ರು ಬಹುಪಾಲು ಜನ ತಮಗೆ ಪರಿಚಯವಿರುವ ಪೋಲಿಸ್ ಅಧಿಕಾರಿಗಳು ಅಥವಾ ಸಮಾಜದಲ್ಲಿ ಉನ್ನತ್ತ ಸ್ಥಾನದಲ್ಲಿರುವವರ ಹತ್ತಿರ ಕರೆ ಮಾಡಿಸಿ ಚಲನ್ ಇಲ್ಲದೆಯೋ ಅಥವಾ ಫೈನ್ ಕಟ್ಟದೆಯೋ ಅಲ್ಲಿಂದ ಜಾಗ ಖಾಲಿ ಮಾಡುವುದನ್ನು ನಾವು ದಿನಂಪ್ರತಿ ನೋಡುತ್ತೇವೆ.

ಟ್ರಾಫಿಕ್ಸ್ ರೂಲ್ಸ್ ಬ್ರೇಕ್- ಮಗನನ್ನೆ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

ಆದರೇ, ಉತ್ತರ ಪ್ರದೇಶದಲ್ಲಿನ ಸಹರಾನ್‍ಪುರ್ ನಗರದ ಪೋಲಿಸ್ ಅಧಿಕಾರಿಯೊಬ್ಬರು ಮಾಡಿದ ಕೆಲಸವನ್ನು ನಾವೆಲ್ಲಾ ಅಭಿನಂದಿಸಲೇಬೇಕು. ಯಾಕೆಂದ್ರೆ ಹೆಲ್ಮೆಟ್ ಇಲ್ಲದೇ ಬೈಕ್ ಸವಾರಿ ಮಾಡುತ್ತಿದ್ದ ಸ್ವತಃ ಮಗನನ್ನೇ ಹಿಡಿದು ರೂ.100 ದಂಡ ವಸೂಲಿ ಮಾಡಿದ್ದಾರೆ.

ಟ್ರಾಫಿಕ್ಸ್ ರೂಲ್ಸ್ ಬ್ರೇಕ್- ಮಗನನ್ನೆ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

ಪೊಲೀಸ್ ಅಧಿಕಾರಿಯಾದ ರಾಮ್ ಮೆಹಾರ್ ಸಿಂಗ್ ಅವರೇ ತನ್ನ ಮಗನಿಗೆ ದಂಡ ವಿಧಿಸಿದ್ದು, ಹೆಲ್ಮೆಟ್ ಇಲ್ಲದೆ ಸವಾರಿ ಮಾಡುತ್ತಿದ್ದ ಕಾರಣಕ್ಕೆ ಈ ಕ್ರಮ ಕೈಗೊಂಡಿದ್ದಾರೆ. ಇದೀಗ ರಾಮ್ ಮೆಹಾರಾ ಸಿಂಗ್ ಕಾರ್ಯಕ್ಕೆ ಎಲ್ಲಡೆ ಪ್ರಶಂಸೆಗಳು ಕೇಳಿಬರುತ್ತಿವೆ.

ಟ್ರಾಫಿಕ್ಸ್ ರೂಲ್ಸ್ ಬ್ರೇಕ್- ಮಗನನ್ನೆ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

ಈ ಬಗ್ಗೆ ಮಾತನಾಡಿರುವ ಟ್ರಾಫಿಕ್ ಪೋಲಿಸ್ ಇನ್ಸ್ಪೆಕ್ಟರ್ ತೇಜ್ ಪ್ರತಾಪ್ ಸಿಂಗ್, ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುತ್ತಿದ್ದು, ಖಡಕ್ ವಾರ್ನ್ ಮಾಡುವ ರಾಮ್ ಮೆಹಾರ್ ಸಿಂಗ್ ಅವರ ಕಾರ್ಯದ ಬಗ್ಗೆ ನಮಗೂ ಹೆಮ್ಮೆ ಇದೆ ಎಂದಿದ್ದಾರೆ.

ಟ್ರಾಫಿಕ್ಸ್ ರೂಲ್ಸ್ ಬ್ರೇಕ್- ಮಗನನ್ನೆ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

ಇದಷ್ಟೇ ಅಲ್ಲದೇ ಕಳೆದ ಎರಡು ದಿನಗಳ ಅವಧಿಯಲ್ಲಿ ಬರೋಬ್ಬರಿ 10,800 ದಂಡ ವಸೂಲಿ ಮಾಡಿರುವ ರಾಮ್ ಮೆಹಾರ್ ಸಿಂಗ್, ಟ್ರಾಫಿಕ್ ಉಲ್ಲಂಘಿಸಿದ್ದ ಹಲವು ಪೊಲೀಸ್ ಅಧಿಕಾರಿಗಳ ಮಕ್ಕಳು ಮತ್ತು ಅವರ ಕುಟುಂಬದವರಿಗೂ ದಂಡ ವಿಧಿಸಿ ಎಲ್ಲರಿಂದಲೂ ಖಡಕ್ ಪೊಲೀಸ್ ಎನ್ನಿಸಿಕೊಂಡಿದ್ದಾರೆ.

ಟ್ರಾಫಿಕ್ಸ್ ರೂಲ್ಸ್ ಬ್ರೇಕ್- ಮಗನನ್ನೆ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

ಇದೇ ವೇಳೆ ರಾಮ್ ಮೆಹಾರ್ ಸಿಂಗ್ ತನ್ನ ಮಗ ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಚಲಾಯಿಸುತ್ತಿರುವುದು ನೋಡಿದ ತಕ್ಷಣವೇ ಹಿಡಿದು ದಂಡ ವಸೂಲಿ ಮಾಡಿದ್ದು, ನಂತರ ಪದೇ ಪದೇ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದ್ದಲ್ಲಿ ಬೈಕ್ ಸೀಜ್ ಮಾಡಲಾಗುವುದೆಂದು ಖಡಕ್ ವಾರ್ನ್ ಸಹ ಮಾಡಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

01. ಏಪ್ರಿಲ್ 1ರಿಂದಲೇ 125ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಹೊಸ ರೂಲ್ಸ್..!!

02. 30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?

03. ನಟ ಸುದೀಪ್ ಹೊಸ ಜೀಪ್ ಕಂಪಾಸ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

04. ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

05. ಅಂಬಾನಿ ಮಗನ ಕಾರಿನಲ್ಲಿರುವ ಈ ಗಡಿಯಾರದ ಬೆಲೆ ಕೇವಲ 1.95 ಕೋಟಿ !! ಇನ್ನು ಈ ಕಾರಿನ ಬೆಲೆ ಕೇಳ್ಬೇಡಿ

06. ನಿಯಂತ್ರಣ ತಪ್ಪಿ ಮನೆ ಮೇಲೆ ಜಂಪ್ ಮಾಡಿದ ಮಾರುತಿ ಸುಜುಕಿ ಬಲೆನೊ..

Read more on traffic rules helmet
English summary
Honest traffic cop fines own son for riding motorcycle without helmet.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark