ನಿಯಂತ್ರಣ ತಪ್ಪಿ ಮನೆ ಮೇಲೆ ಜಂಪ್ ಮಾಡಿದ ಮಾರುತಿ ಸುಜುಕಿ ಬಲೆನೊ..

Written By:

ಸಾಮಾನ್ಯವಾಗಿ ಅಪಘಾತಗಳ ಸಂದರ್ಭದಲ್ಲಿ ವಾಹನಗಳು ನಜ್ಜುಗುಜ್ಜಾಗಿರೋದನ್ನ ಅಥವಾ ತಲೆಕೆಳಗಾಗಿ ಬಿದ್ದಿರುವುದನ್ನು ನೋಡಿರುತ್ತೇವೆ. ಆದ್ರೆ ಇಲ್ಲೊಂದು ಕಾರ್ ಮಾತ್ರ ಅಪಘಾತದ ರಭಸಕ್ಕೆ 15 ಅಡಿ ಎತ್ತರದ ಕಟ್ಟಡ ಒಂದರ ಮೇಲೆ ಜಂಪ್ ಮಾಡಿದೆ.

ನಿಯಂತ್ರಣ ತಪ್ಪಿ ಮನೆ ಮೇಲೆ ಜಂಪ್ ಮಾಡಿದ ಮಾರುತಿ ಸುಜುಕಿ ಬಲೆನೊ..

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿರುವ ಸರ್ಕಾ ಘಾಟ್‌ನಲ್ಲಿ ಈ ಘಟನೆ ನಡೆದಿದ್ದು, ಘಾಟಿ ಪ್ರದೇಶದಲ್ಲಿ ನಿಯಂತ್ರಣ ತಪ್ಪಿದ ಮಾರುತಿ ಸುಜುಕಿ ಬಲೆನೊ ಕಾರು ಕಟ್ಟಡದ ಮೇಲೆ ಜಂಪ್ ಮಾಡಿದೆ. ಸಮಾಧಾನಕರ ಸಂಗತಿ ಅಂದ್ರೆ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Recommended Video - Watch Now!
[Kannada] Maruti Swift 2018 - Full Specifications, Features, Price, Mileage, Colours - DriveSpark
ನಿಯಂತ್ರಣ ತಪ್ಪಿ ಮನೆ ಮೇಲೆ ಜಂಪ್ ಮಾಡಿದ ಮಾರುತಿ ಸುಜುಕಿ ಬಲೆನೊ..

ರಸ್ತೆ ತಿರುವಿನಲ್ಲಿ ವೇಗವಾಗಿ ಬರುತ್ತಿದ್ದಾಗ ಈ ಘಟನೆ ನಡೆದಿದ್ದು, ಎದುರು ಬಂದ ಮತ್ತೊಂದು ಕಾರಿಗೆ ಡಿಕ್ಕಿ ತಪ್ಪಿಸಲು ಹೋದಾಗ ಈ ಘಟನೆ ನಡೆದಿದ್ದಾಗಿ ಕಾರಿನ ಮಾಲೀಕ ಹೇಳಿದ್ದಾನೆ.

ನಿಯಂತ್ರಣ ತಪ್ಪಿ ಮನೆ ಮೇಲೆ ಜಂಪ್ ಮಾಡಿದ ಮಾರುತಿ ಸುಜುಕಿ ಬಲೆನೊ..

ಒಂದು ವೇಳೆ ಕಾರುಗಳ ಮಧ್ಯೆ ಡಿಕ್ಕಿಯಾಗಿದ್ದರೆ ಭೀಕರ ದುರಂತ ನಡೆಯುತ್ತಿತ್ತು ಎಂದು ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬನ್ಸಿ ಲಾಲ್ ರಾಣಾ ಅವರು, ಕಾರಿನಲ್ಲಿರುವ ಸುರಕ್ಷಾ ಸಾಧನಗಳೇ ನಮ್ಮ ಜೀವ ಉಳಿಸಿದವು ಎಂದಿದ್ದಾರೆ.

ನಿಯಂತ್ರಣ ತಪ್ಪಿ ಮನೆ ಮೇಲೆ ಜಂಪ್ ಮಾಡಿದ ಮಾರುತಿ ಸುಜುಕಿ ಬಲೆನೊ..

ಪ್ರವಾಸ ಮುಗಿಸಿ ಹಿಂದಿರುಗುವಾಗ ಈ ಅವಘಡ ಸಂಭವಿಸಿದ್ದು, ಕಾರು ಗುದ್ದಿದ ರಭಸಕ್ಕೆ ತಡೆಗೊಡೆ ಒಡೆದು ಮನೆಯ ಟಾಪ್ ಮೇಲೆ ಜಂಪ್ ಮಾಡಿದೆ. ಈ ವೇಳೆ ಮನೆಯಲ್ಲಿದ್ದವರು ತಕ್ಷಣವೇ ಹೊರಗೆ ಓಡಿಬಂದಿದ್ದಾರೆ.

ನಿಯಂತ್ರಣ ತಪ್ಪಿ ಮನೆ ಮೇಲೆ ಜಂಪ್ ಮಾಡಿದ ಮಾರುತಿ ಸುಜುಕಿ ಬಲೆನೊ..

ಘಟನೆಯ ವೇಳೆ ಮನೆಯಲ್ಲಿದ್ದವರಿಗೂ ಯಾವುದೇ ತೊಂದರೆಯಾಗಿಲ್ಲವಾರೂ ಮನೆ ಮೇಲೆ ನಿರ್ಮಿಸಲಾಗಿದ್ದ ಸೆಡ್‌‌ಗೆ ಹಾನಿಯಾಗಿದ್ದು, ಸ್ಥಳೀಯರ ಸಹಾಯದೊಂದಿಗೆ ಬಲೆನೊ ಕಾರ್ ಅನ್ನು ಕೆಳಗೆ ಇಳಿಸಲಾಗಿದೆ.

ನಿಯಂತ್ರಣ ತಪ್ಪಿ ಮನೆ ಮೇಲೆ ಜಂಪ್ ಮಾಡಿದ ಮಾರುತಿ ಸುಜುಕಿ ಬಲೆನೊ..

ಒಂದು ವೇಳೆ ಮನೆ ಮೇಲೆ ಕಾರು ಜಂಪ್ ಮಾಡದೇ ಪಕ್ಕದ ಖಾಲಿ ಜಾಗಕ್ಕೆ ಕಾರು ಪಲ್ಟಿ ಹೊಡಿದಿದ್ದರೇ 100 ಮೀಟರ್‌ಗಿಂತ ಆಳದ ಕಣಿವೆಗೆ ಉರುಳುತ್ತಿತ್ತು ಎನ್ನಲಾಗಿದ್ದು, ಅದೃಷ್ಟವಶಾತ್ ಮನೆ ಮೇಲೆ ಜಂಪ್ ಮಾಡಿದ್ದರಿಂದ ಭೀಕರ ದುರಂತ ತಪ್ಪಿದೆ ಎನ್ನಬಹುದು.

ನಿಯಂತ್ರಣ ತಪ್ಪಿ ಮನೆ ಮೇಲೆ ಜಂಪ್ ಮಾಡಿದ ಮಾರುತಿ ಸುಜುಕಿ ಬಲೆನೊ..

ಇನ್ನು ಅಪಘಾತದ ನಂತರ ಗಾಯಗೊಂಡಿದ್ದವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಘಾಟಿ ಪ್ರದೇಶಗಳಲ್ಲಿ ಕಾರು ಚಾಲನೆ ವೇಳೆ ಎಚ್ಚರಿಕೆ ವಹಿಸದೇ ಇದ್ದಲ್ಲಿ ದುರಂತಗಳಿಗೆ ನಾವೇ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.

ನಿಯಂತ್ರಣ ತಪ್ಪಿ ಮನೆ ಮೇಲೆ ಜಂಪ್ ಮಾಡಿದ ಮಾರುತಿ ಸುಜುಕಿ ಬಲೆನೊ..

ಜೊತೆಗೆ ಅಪಘಾತದಲ್ಲಿ ಸಿಲುಕಿದ ಮಾರುತಿ ಸುಜುಕಿ ಬಲೆನೊ ಕಾರು ಕೂಡಾ ಉತ್ತಮ ಸುರಕ್ಷಾ ಸೌಲಭ್ಯದೊಂದಿಗೆ ಉತ್ತಮ ಬಾಡಿ ಕಿಟ್ ಹೊಂದಿದ್ದು, 1.2 ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 83 ಬಿಎಚ್‌ಪಿ ಮತ್ತು 115 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

Source:rushlane

Read more on accident off beat
English summary
Maruti Baleno Crash Landed On Terrace.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark