ಕಾರಲ್ಲಿ ಹಿಂದೆ ಕುಳಿತ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದು ಹೇಗೆ? ಮುಂದೆ ಕುಳಿತವರು ಬದುಕುಳಿದಿದ್ದು ಹೀಗೆ!

ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ (54) ಅವರು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಭಾನುವಾರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಿಸ್ತ್ರಿ ಅವರು ಅಹಮದಾಬಾದ್‌ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಮಧ್ಯಾಹ್ನ 3.15 ರ ಸುಮಾರಿಗೆ ಅಪಘಾತ ಸಂಭವಿಸಿದೆ.

ಕಾರಲ್ಲಿ ಹಿಂದೆ ಕುಳಿತರೂ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದು ಹೇಗೆ?: ಮುಂದೆ ಕುಳಿತಿದ್ದವರು ಬದುಕುಳಿದಿದ್ದು ಹೀಗೆ!

ಭಾನುವಾರ ತಮ್ಮ ಮರ್ಸಿಡಿಸ್ ಜಿಎಲ್‌ಜಿ ಕಾರಿನಲ್ಲಿ ತಮ್ಮ ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಮುಂಬೈಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸೈರಸ್ ಮಿಸ್ತ್ರಿ ಅವರೊಂದಿಗೆ ಅವರ ಸ್ನೇಹಿತರಾದ ಜಾಂಗೀರ್ ಪಂಡೋಲ್, ಅನಾಹಿತಾ ಪಂಡೋಲ್ ಮತ್ತು ಡೇರಿಯಸ್ ಪಂಡೋಲ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

ಕಾರಲ್ಲಿ ಹಿಂದೆ ಕುಳಿತರೂ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದು ಹೇಗೆ?: ಮುಂದೆ ಕುಳಿತಿದ್ದವರು ಬದುಕುಳಿದಿದ್ದು ಹೀಗೆ!

ಓವರ್‌ಟೇಕ್ ಮಾಡಲು ಹೋಗಿ ಅಪಘಾತ

ಅನಾಹಿತಾ ಅವರು ಕಾರನ್ನು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಭಾನುವಾರ ಮಧ್ಯಾಹ್ನ 3.15ಕ್ಕೆ ಸೂರ್ಯ ನದಿ ಬಳಿ ಗಂಟೆಗೆ 120 ಕಿ.ಮೀಗೂ ಹೆಚ್ಚು ವೇಗದಲ್ಲಿ ಕಾರು ಸಾಗುತ್ತಿತ್ತು ಎನ್ನಲಾಗಿದೆ. ಅನಾಹಿತಾ ಅವರು ಮುಂದೆ ಹೋಗುತ್ತಿದ್ದ ವಾಹನವನ್ನು ಹಿಂದಿಕ್ಕಲು ಯತ್ನಿಸಿದ್ದಾರೆ.

ಕಾರಲ್ಲಿ ಹಿಂದೆ ಕುಳಿತರೂ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದು ಹೇಗೆ?: ಮುಂದೆ ಕುಳಿತಿದ್ದವರು ಬದುಕುಳಿದಿದ್ದು ಹೀಗೆ!

ಈ ವೇಳೆ ಮುಂದಿರುವ ವಾಹನದ ಬಲಬದಿಯಲ್ಲಿ ಜಾಗವಿಲ್ಲದ ಕಾರಣ ಎಡಭಾಗದಿಂದ ಕಾರನ್ನು ಓವರ್‌ಟೇಕ್ ಮಾಡಲು ಯತ್ನಿಸಿದ್ದಾರೆ. ರಸ್ತೆಗೆ ಅಡ್ಡಲಾಗಿ ಸೇತುವೆ ಬರುತ್ತಿರುವ ಕಾರಣ ಅನಿರೀಕ್ಷಿತವಾಗಿ ಆ ಪ್ರದೇಶದಲ್ಲಿ ಡಿವೈಡರ್ ಎದುರಾಗಿದೆ. ಅನಾಹಿತಾ ಅವರ ಅತಿ ವೇಗದ ಕಾರಣ ಕಾರನ್ನು ನಿಯಂತ್ರಿಸಲು ಸಾಧ್ಯವಾಗದೆ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಾರೆ.

ಕಾರಲ್ಲಿ ಹಿಂದೆ ಕುಳಿತರೂ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದು ಹೇಗೆ?: ಮುಂದೆ ಕುಳಿತಿದ್ದವರು ಬದುಕುಳಿದಿದ್ದು ಹೀಗೆ!

ಪರಿಣಾಮ ಕಾರು ತೀವ್ರವಾಗಿ ಜಖಂಗೊಂಡಿದ್ದು, ಕಾರಿನ ಹಿಂದಿನ ಸೀಟಿನಲ್ಲಿದ್ದ ಸೈರಸ್ ಮಿಸ್ತ್ರಿ ಮತ್ತು ಜಾಂಗೀರ್ ಪಾಂಡೋಲ್ ಡಿಕ್ಕಿಯ ರಭಸಕ್ಕೆ ಸಾವನ್ನಪ್ಪಿದ್ದಾರೆ. ಮುಂಭಾಗದಲ್ಲಿ ಕುಳಿತಿದ್ದ ಅನಾಹಿತಾ ಮತ್ತು ಆಕೆಯ ಪತಿ ಡೇರಿಯಸ್ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ನೆರೆಹೊರೆಯವರು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಾರಲ್ಲಿ ಹಿಂದೆ ಕುಳಿತರೂ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದು ಹೇಗೆ?: ಮುಂದೆ ಕುಳಿತಿದ್ದವರು ಬದುಕುಳಿದಿದ್ದು ಹೀಗೆ!

ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಸೈರಸ್ ಮಿಸ್ತ್ರಿ ಮತ್ತು ಜಾಂಗೀರ್ ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅತಿವೇಗದ ಚಾಲನೆಯಿಂದ ಕಾರು ನಿಯಂತ್ರಣ ತಪ್ಪಿದೆ ಎಂದು ಅಪಘಾತದ ತನಿಖೆ ನಡೆಸಿದ ಪೊಲೀಸರು ತಿಳಿಸಿದ್ದಾರೆ.

ಕಾರಲ್ಲಿ ಹಿಂದೆ ಕುಳಿತರೂ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದು ಹೇಗೆ?: ಮುಂದೆ ಕುಳಿತಿದ್ದವರು ಬದುಕುಳಿದಿದ್ದು ಹೀಗೆ!

ಸ್ನೇಹಿತರಾದ ಅನಾಹಿತಾ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಪ್ರಸಿದ್ಧ ಸ್ತ್ರೀರೋಗತಜ್ಞ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪತಿ ಡೇರಿಯಸ್ ಜೆಎಂ ಫೈನಾನ್ಶಿಯಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಜಾಂಗೀರ್ ಸೈರಸ್ ಮಿಸ್ತ್ರಿ ಅವರ ಸಹೋದರರಾಗಿದ್ದಾರೆ.

ಕಾರಲ್ಲಿ ಹಿಂದೆ ಕುಳಿತರೂ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದು ಹೇಗೆ?: ಮುಂದೆ ಕುಳಿತಿದ್ದವರು ಬದುಕುಳಿದಿದ್ದು ಹೀಗೆ!

ಟಾಟಾ ಸನ್ಸ್ ಗ್ರೂಪ್‌ನ ಅಧ್ಯಕ್ಷರಾಗಿದ್ದ ರತನ್ ಟಾಟಾ ಅವರು ನಿವೃತ್ತಿ ಘೋಷಿಸಿದ ನಂತರ, ಸೈರಸ್ ಮಿಸ್ತ್ರಿ 2012 ರಲ್ಲಿ ಗ್ರೂಪ್‌ನ ಅಧ್ಯಕ್ಷರಾದರು. ಬಳಿಕ 2016 ರವರೆಗೆ ಕಂಪನಿಯಲ್ಲಿ ತಮ್ಮ ಅಧ್ಯಕ್ಷ ಸ್ಥಾನವನ್ನು ಮುಂದುವರೆಸಿದ್ದರು. ಅಪಘಾತದಲ್ಲಿ ಮೃತಪಟ್ಟ ಸೈರಸ್ ಮಿಸ್ತ್ರಿ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಕಾರಲ್ಲಿ ಹಿಂದೆ ಕುಳಿತರೂ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದು ಹೇಗೆ?: ಮುಂದೆ ಕುಳಿತಿದ್ದವರು ಬದುಕುಳಿದಿದ್ದು ಹೀಗೆ!

ಅಪಘಾತದ ಬಗ್ಗೆ ಅನುಮಾನ

ಈ ಅಪಘಾತದ ಬಗ್ಗೆ ಹಲವರಿಗೆ ಅನುಮಾನಗಳಿವೆ. ಕಾರಿನ ಮುಂಭಾಗ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಹೀಗಾದಲ್ಲಿ ಅಪಘಾತದ ಪರಿಣಾಮ ಮುಂದಿನ ಸೀಟಿನಲ್ಲಿದ್ದವರಿಗೆ ಹೆಚ್ಚಾಗಿರುತ್ತದೆ. ಆದರೆ ಈ ಅಪಘಾತದಲ್ಲಿ ಹಿಂದಿನ ಸೀಟಿನಲ್ಲಿ ಕುಳಿತವರು ಸಾವನ್ನಪ್ಪಿದ್ದು, ಮುಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಬದುಕುಳಿದಿದ್ದು ಹೇಗೆ?

ಕಾರಲ್ಲಿ ಹಿಂದೆ ಕುಳಿತರೂ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದು ಹೇಗೆ?: ಮುಂದೆ ಕುಳಿತಿದ್ದವರು ಬದುಕುಳಿದಿದ್ದು ಹೀಗೆ!

ಇದಕ್ಕೆ ಮುಖ್ಯ ಕಾರಣ ಸೀಟ್ ಬೆಲ್ಟ್ ಧರಿಸದಿರುವುದು. ಈ ಪ್ರಯಾಣದ ವೇಳೆ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಸೀಟ್ ಬೆಲ್ಟ್ ಧರಿಸಿರುವ ಸಾಧ್ಯತೆ ಇದೆ. ಆದರೆ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಸೀಟ್ ಬೆಲ್ಟ್ ಧರಿಸಿರುವ ಸಾಧ್ಯತೆ ಕಡಿಮೆ. ಸೀಟ್ ಬೆಲ್ಟ್ ಧರಿಸದ ಕಾರಣ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದಾಗ ಇಬ್ಬರೂ ಪಲ್ಟಿಯಾಗಿ ತಲೆಗೆ ಗಂಭೀರ ಹೊಡೆತ ಬಿದ್ದಿರಬಹುದು.

ಕಾರಲ್ಲಿ ಹಿಂದೆ ಕುಳಿತರೂ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದು ಹೇಗೆ?: ಮುಂದೆ ಕುಳಿತಿದ್ದವರು ಬದುಕುಳಿದಿದ್ದು ಹೀಗೆ!

ಈ ಅಪಘಾತದಲ್ಲಿ ಸೈರಸ್ ಮಿಸ್ತ್ರಿ ಮತ್ತು ಜಾಂಗೀರ್ ಸೀಟ್ ಬೆಲ್ಟ್ ಧರಿಸಿದ್ದರೆ, ಅವರು ಕೂಡ ಗಾಯಗಳೊಂದಿಗೆ ಬದುಕುಳಿಯುವ ಸಾಧ್ಯತೆ ಇರುತಿತ್ತು. ಈ ಅಪಘಾತದಿಂದ ನಾವು ಇನ್ನೊಂದು ಪಾಠ ಕಲಿಯಬೇಕು. ರಸ್ತೆಯಲ್ಲಿ ವಾಹನವನ್ನು ಓವರ್ ಟೇಕ್ ಮಾಡಬೇಕಾದರೆ ಬಲ ಬದಿಯಲ್ಲಿಯೇ ಓವರ್ ಟೇಕ್ ಮಾಡಬೇಕು.

ಕಾರಲ್ಲಿ ಹಿಂದೆ ಕುಳಿತರೂ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದು ಹೇಗೆ?: ಮುಂದೆ ಕುಳಿತಿದ್ದವರು ಬದುಕುಳಿದಿದ್ದು ಹೀಗೆ!

ಏಕೆಂದರೆ ಭಾರತದಲ್ಲಿ ವಾಹನಗಳನ್ನು ರೈಟ್ ಹ್ಯಾಂಡ್ ಡ್ರೈವ್ ವ್ಯವಸ್ಥೆಯಿಂದ ತಯಾರಿಸಲಾಗುತ್ತದೆ. ಹಾಗಾಗಿ ಬಲಭಾಗದಲ್ಲಿ ಹಾದುಹೋಗಲು ಪ್ರಯತ್ನಿಸಿದಾಗ, ಮುಂಭಾಗದಲ್ಲಿ ಅಡಚಣೆಯಿದ್ದರೆ ಚಾಲಕನಿಗೆ ತಿಳಿಯುತ್ತದೆ. ಆದ್ದರಿಂದ ಚಾಲಕ ತಕ್ಷಣ ಎಚ್ಚೆತ್ತು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಬಹುದು.

ಕಾರಲ್ಲಿ ಹಿಂದೆ ಕುಳಿತರೂ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದು ಹೇಗೆ?: ಮುಂದೆ ಕುಳಿತಿದ್ದವರು ಬದುಕುಳಿದಿದ್ದು ಹೀಗೆ!

ಆದರೆ ಎಡಭಾಗದಲ್ಲಿ ಓವರ್‌ಟೇಕ್ ಮಾಡಲು ಪ್ರಯತ್ನಿಸಿದರೆ, ಕಾರು ಸಂಪೂರ್ಣವಾಗಿ ಎಡಕ್ಕೆ ಚಲಿಸಿದ ನಂತರವೇ ಚಾಲಕನಿಗೆ ಮುಂದೆ ಏನಿದೆ ಎಂದು ತಿಳಿಯುತ್ತದೆ. ಆಗ ಚಾಲಕನಿಗೆ ತಕ್ಷಣವೇ ಪ್ರತಿಕ್ರಿಯಿಸಲು ಸಮಯವಿರುವುದಿಲ್ಲ. ಹಾಗಾಗಿ ಚಾಲನೆ ಮಾಡುವಾಗ ವಾಹನವನ್ನು ಓವರ್ ಟೇಕ್ ಮಾಡಬೇಕಾದರೆ ಬಲಭಾಗದಲ್ಲಿ ಮಾತ್ರ ಓವರ್ ಟೇಕ್ ಮಾಡಲು ಪ್ರಯತ್ನಿಸಿ.

ಕಾರಲ್ಲಿ ಹಿಂದೆ ಕುಳಿತರೂ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದು ಹೇಗೆ?: ಮುಂದೆ ಕುಳಿತಿದ್ದವರು ಬದುಕುಳಿದಿದ್ದು ಹೀಗೆ!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ರಸ್ತೆಯಲ್ಲಿ ನಿಯಂತ್ರಿತ ವೇಗದಲ್ಲಿ ಪ್ರಯಾಣಿಸಬೇಕು, ಕಾರು ಸುರಕ್ಷಿತ ವೇಗವನ್ನು ಮೀರಿ ಚಲಿಸುತ್ತಿದೆ ಎಂದು ನೀವು ಭಾವಿಸಿದರೆ, ತಕ್ಷಣವೇ ವೇಗವನ್ನು ಕಡಿಮೆ ಮಾಡಿ. ಅತಿ ವೇಗವು ಅಪಾಯಕಾರಿ ಎಂಬ ಅರಿವಿನೊಂದಿಗೆ ಚಾಲನೆ ಮಾಡಿ.

Most Read Articles

Kannada
English summary
How did Cyrus Mistry die despite sitting in the back This is how those sitting in front survived
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X