ಭಯಬೇಡ.. ಎಲೆಕ್ಟ್ರಿಕ್ ಟೂ-ವೀಲರ್ ಬೆಂಕಿಗೆ ಆಹುತಿಯಾಗುವುದನ್ನು ತಡೆಗಟ್ಟುವುದು ಹೇಗೆ? ಇಲ್ಲಿವೆ ಸರಳ ಟಿಪ್ಸ್

ಎಲೆಕ್ಟ್ರಿಕ್ ಚಾಲಿತ ದ್ವಿಚಕ್ರ ವಾಹನಗಳು (Electric Two Wheelers), ಆಗಾಗ್ಗೆ ಬೆಂಕಿಗೆ ಆಹುತಿಯಾಗುವ ಸುದ್ದಿಗಳು ವರದಿಯಾಗುತ್ತಲೇ ಇರುತ್ತವೆ. ಈಚೆಗೆ ಮಹಾರಾಷ್ಟ್ರದ ನಗರವೊಂದರಲ್ಲಿ ರಸ್ತೆಬದಿ ನಿಲ್ಲಿಸಿದ್ದ ಪ್ರತಿಷ್ಠಿತ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಆ ಕಂಪನಿಯು ಸಂಬಂಧಪಟ್ಟ ಗ್ರಾಹಕನನ್ನು ಸಂಪರ್ಕಿಸಿದ್ದು, ಘಟನೆಗೆ ಬಗ್ಗೆ ನಿರ್ದಿಷ್ಟ ಕಾರಣವನ್ನು ತಿಳಿಯಲು ತನಿಖೆಯನ್ನು ಶುರು ಮಾಡಿದೆ.

ಸದ್ಯ, ದೇಶದ ಪ್ರಮುಖ ನಗರಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಕೊಂಡುಕೊಳ್ಳುವ ಟ್ರೆಂಡ್ ಜೋರಾಗಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಆದರೆ, ನಾನಾ ಕಾರಣಗಳಿಗೆ ಬೆರಳೆಣಿಕೆಯಷ್ಟು ಇ-ಸ್ಕೂಟರ್ ಹಾಗೂ ಬೈಕ್‌ಗಳು ಅಗ್ನಿಯಿಂದ ಉಂಟಾಗುವಾಗ ಅವಘಡಗಳಿಗೆ ಸಿಲುಕಿಕೊಳ್ಳುತ್ತಿವೆ. ಈ ಸಲಹೆಗಳನ್ನು ಪಾಲಿಸುವುದರೊಂದಿಗೆ ನಿಮ್ಮ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಸುರಕ್ಷಿತವಾಗಿಡಬಹದು.

If You Are Electric 2-Wheeler Owner Follow These Tips To Avoid Fire Details

ಚಾರ್ಜರ್ ಬಳಸುವಾಗ ಇರಲಿ ಜಾಗ್ರತೆ:

ಎಲೆಕ್ಟ್ರಿಕ್ ಚಾಲಿತ ದ್ವಿಚಕ್ರ ವಾಹನ ಮಾಲೀಕರು ಈ ಅಂಶದ ಬಗ್ಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಬೇಕು. ನೂತನ ಇ-ಸ್ಕೂಟರ್ ಅಥವಾ ಮೋಟಾರ್‌ಸೈಕಲ್‌ನ್ನು ಖರೀದಿಸಿದಾಗ ನಿರ್ದಿಷ್ಟ ವಾಹನ ತಯಾರಕರು ಒದಗಿಸಿದ ಚಾರ್ಜರ್ ಹಾಗೂ ಅಡಾಪ್ಟರ್‌ಗಳನ್ನು ಮಾತ್ರ ಬಳಸಿರಿ. ಇತರೆ ಚಾರ್ಜರ್‌ಗಳು ಮತ್ತು ಕೇಬಲ್‌ಗಳ ಉಪಯೋಗವನ್ನು ತಪ್ಪಿಸಿರಿ. ಇದು ಬ್ಯಾಟರಿ ದೋಷ ಅಥವಾ ಅಧಿಕ ಬಿಸಿಯಾಗುವಿಕೆಗೆ ಕಾರಣವಾಗಬಲ್ಲದು.

ತಂಪಾದ ಪ್ರದೇಶದಲ್ಲಿ ಚಾರ್ಜ್ ಮಾಡಿ:

ನಿಮ್ಮ ಇ-ಬೈಕ್ ಅಥವಾ ಸ್ಕೂಟರ್‌ನ್ನು ಹೆಚ್ಚು ಬಿಸಿಲಿನಲ್ಲಿ ಎಂದಿಗೂ ಚಾರ್ಜ್ ಮಾಡಬೇಡಿ. ವಿಶೇಷವಾಗಿ ಚಾರ್ಜ್ ಮಾಡುವ ಸಂದರ್ಭದಲ್ಲಿ ಬ್ಯಾಟರಿ ಮತ್ತು ಚಾರ್ಜರ್‌ನ್ನು ಮುಚ್ಚಿಡಬೇಡಿ. ಇದು ಶಾಖವನ್ನು ಹಿಡಿದಿಟ್ಟುಕೊಳ್ಳಲು ನೆರವಾಗಬಲ್ಲದು. ಜೊತೆಗೆ ಬೆಂಕಿಯ ಅನಾಹುತವು ಸಂಭವಿಸಬಹುದು.

If You Are Electric 2-Wheeler Owner Follow These Tips To Avoid Fire Details

ರಾತ್ರಿಯಿಡಿ ಚಾರ್ಜ್ ಮಾಡಬೇಡಿ:

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ರಾತ್ರಿಯಿಡಿ ಚಾರ್ಜ್ ಮಾಡಬೇಡಿ. ಏಕೆಂದರೆ ಅತಿಯಾಗಿ ಚಾರ್ಜ್ ಆದರೆ, ಬ್ಯಾಟರಿಯು ತುಂಬಾ ಬಿಸಿಯಾಗಿ, ಬೆಂಕಿ ಹೊತ್ತಿಕೊಳ್ಳಬಹುದು. ಇದರೊಂದಿಗೆ ಚಾರ್ಜರ್‌ನ್ನು ಮನೆಯ ಗೋಡೆಯ ಸಾಕೆಟ್‌ಗಳಿಗೆ ಮಾತ್ರವೇ ಪ್ಲಗ್ ಮಾಡಿರಿ. ಎಕ್ಸ್‌ಟೆನ್ಶನ್ ಕಾರ್ಡ್‌ಗಳು ಹಾಗೂ ಪವರ್ ಸ್ಟ್ರಿಪ್‌ಗಳ ಉಪಯೋಗವನ್ನು ಮಾಡುವುದನ್ನು ತಪ್ಪಿಸಿರಿ.

ತಪಾಸಣೆ ಅಗತ್ಯ:

ಬ್ಯಾಟರಿಯಲ್ಲಿ ಊತ ಅಥವಾ ಒಂದು ರೀತಿಯ ಕೆಟ್ಟ ವಾಸನೆ ಬಂದ ಸಂದರ್ಭದಲ್ಲಿ ನಿಯಮಿತವಾಗಿ ತಪಾಸಣೆ ನಡೆಸುವುದು ತೀರಾ ಅಗತ್ಯವಾಗಿದೆ. ಸಂಬಂಧಪಟ್ಟ ಅಧಿಕೃತ ಡೀಲರ್‌ಶಿಪ್‌ಗೆ ಭೇಟಿ ನೀಡಿ, ಇ-ಸ್ಕೂಟರ್ ಅಥವಾ ಮೋಟಾರ್‌ಸೈಕಲ್‌ನ ಬ್ಯಾಟರಿಯನ್ನು ಬದಲಾಯಿಸಿರಿ. ವೈರಿಂಗ್‌ನಲ್ಲಿ ದೋಷ ಕಾಣಿಸಿಕೊಂಡರೆ, ತಕ್ಷಣ ಸರಿಪಡಿಸಿಕೊಳ್ಳಿರಿ. ಯಾವುದೇ ಖಾಸಗಿ ಸರ್ವಿಸ್ ಸೆಂಟರ್‌ಗೆ ಹೋಗಬೇಡಿ.

If You Are Electric 2-Wheeler Owner Follow These Tips To Avoid Fire Details

ಜಾಸ್ತಿ ದೂರ ತೆರಳಿದಾಗ ಇರಲಿ ಎಚ್ಚರ:

ಬೆಂಗಳೂರು, ನವದೆಹಲಿ, ಹೈದರಾಬಾದ್, ಚೆನ್ನೈ ಹಾಗೂ ಮುಂಬೈನಂತಹ ನಗರಗಳಲ್ಲಿ ದೂರದ ಪ್ರದೇಶಗಳಿಗೆ ಕೆಲಸಕ್ಕೆ ತೆರಳುವುದು ತುಂಬಾ ಅನಿವಾರ್ಯ. ಅಂತಹ ಸಂದರ್ಭದಲ್ಲಿ ಅಧಿಕೃತ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ ಮಾತ್ರ ಇ-ಸ್ಕೂಟರ್ ಅಥವಾ ಬೈಕ್‌ಗಳನ್ನು ಚಾರ್ಜ್ ಮಾಡುವುದು ಉತ್ತಮ. ಇಲ್ಲದಿದ್ದರೆ, ಸಂಭಾವ್ಯ ಅಗ್ನಿ ಅವಘಡ ಉಂಟಾಗಬಹುದು.

ಫೈರ್ ಅಲರಾಂ ಬಳಕೆ ಮಾಡಿರಿ:

ಒಂದೊಮ್ಮೆ ನಿಮ್ಮ ಮನೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ನಿಲ್ಲಿಸಿದ್ದಾಗ ಹಲವು ಕಾರಣಗಳಿಗೆ ಬೆಂಕಿ ಹೊತ್ತಿಕೊಳ್ಳಬಹುದು. ಅಂತಹ ಸಂದರ್ಭದಲ್ಲಿ ಸಣ್ಣ 'ಫೈರ್ ಅಲರಾಂ' ಉಪಯೋಗದೊಂದಿಗೆ ದೊಡ್ಡ ಅಪಘಾತವನ್ನು ತಪ್ಪಿಸಬಹುದು. ಜೊತೆಗೆ ತಕ್ಷಣದಲ್ಲಿ ಅಗ್ನಿ ಶಾಮಕ ಇಲಾಖೆಗೂ ಕರೆ ಮಾಡುವುದನ್ನು ಮರೆಯದಿರಿ.

ಒಟ್ಟಾರೆಯಾಗಿ, ನಾವಿಲ್ಲಿ ವಿವರಿಸಲಾದ ಸರಳ ಸೂತ್ರಗಳನ್ನು ಪಾಲಿಸುವ ಮೂಲಕ ನಿಮ್ಮ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಅಗ್ನಿ ಅವಘಡಕ್ಕೆ ತುತ್ತಾಗುವುದನ್ನು ತಪ್ಪಿಸಬಹುದು. ಜೊತೆಗೆ ಕನಿಷ್ಠ 6 ತಿಂಗಳಿಗೆ ಒಮ್ಮೆಯಾದರೂ ಇ-ಸ್ಕೂಟರ್ ಅಥವಾ ಮೋಟಾರ್‌ಸೈಕಲ್‌ಗಳನ್ನು ಸರ್ವಿಸ್ ಮಾಡಿಸಿದರೆ, ಅವುಗಳನ್ನು ದೀರ್ಘಕಾಲ ಬಳಕೆ ಮಾಡಬಹುದು.

More from DriveSpark

Article Published On: Wednesday, September 17, 2025, 11:23 [IST]
English summary
If you are electric 2 wheeler owner follow these tips to avoid fire details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+