30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?
ಚೀನಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಐಎಟಿಯು 1,800 ಯೂರೋಪಿಯನ್ ತಂತ್ರಜ್ಞರ ಜೊತೆಗೂಡಿ ಈ ಐಷಾರಾಮಿ ಎಸ್‍ಯುವಿ ಕಾರನ್ನು ಸಿದ್ದಗೊಳಿಸಿದೆ.
ಹಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ನಾನಾ ನಮೂನೆಯ ಮಾಡಿಫೈ ಕಾರುಗಳನ್ನು ಬಳಕೆ ಮಾಡುವುದನ್ನು ಬಹುತೇಕರಿಗೆ ಗೊತ್ತಿರುವ ವಿಚಾರ. ಆದ್ರೆ ಇಲ್ಲೊಂದು ಮಾಡಿಫೈ ಸಂಸ್ಥೆಯು ನಿರ್ಮಾಣ ಮಾಡಿರುವ ಕಾರೊಂದು ಆಟೋ ಉದ್ಯಮವನ್ನೇ ಬೆರಗುಗೊಳಿಸಿದ್ದು, ಕಾರಿನಲ್ಲಿರುವ ವರ್ಲ್ಡ್ ಕ್ಲಾಸ್ ಸೌಲಭ್ಯಗಳನ್ನು ಜೋಡಿಸಲು ಬರೋಬ್ಬರಿ 30 ಕೋಟಿಗೂ ಹೆಚ್ಚು ಹಣ ವ್ಯಯಮಾಡಲಾಗಿದೆ.

ಹೌದು, ಚೀನಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಐಎಟಿಯು 1,800 ಯೂರೋಪಿಯನ್ ತಂತ್ರಜ್ಞರ ಜೊತೆಗೂಡಿ ಈ ಐಷಾರಾಮಿ ಎಸ್‍ಯುವಿ ಕಾರನ್ನು ಸಿದ್ದಗೊಳಿಸಿದ್ದು, ಕಾರಿನ ಒಳಗೆ ನೀಡಲಾಗಿರುವ ಐಷಾರಾಮಿ ಸೌಲಭ್ಯಗಳು ಸ್ವರ್ಗಕ್ಕೆ ಮೂರೇ ಗೇಣು ಎಂಬುವಂತೆ ಕಾರಿನ ಒಳ ವಿನ್ಯಾಸ ಮಾಡಲಾಗಿದೆ.

ಹಾಲಿವುಡ್ ಸಿನಿಮಾಗಳಲ್ಲಿ ತೋರಿಸುವ ಹಾಗೆಯೇ, ಆ ಕಾರಿನಲ್ಲಿ ಎಲ್ಲಾ ಐಷಾರಾಮಿ ಸೌಲಭ್ಯಗಳನ್ನು ನೀಡಲಾಗಿದ್ದು, ಕಾರಿಗೆ ಕಾರ್ಲ್‍ಮನ್ ಕಿಂಗ್ ಎಂದು ನಾಮಕರಣ ಮಾಡಲಾಗಿರುವ ಕಾರಿನ ಖದರ್ ಹೆಚ್ಚಿಸಿದೆ.

ಈ ಹಿಂದೆ ಇದೇ ಕಾರನ್ನು 2017ರ ದುಬೈ ಅಂತಾರಾಷ್ಟ್ರೀಯ ಮೋಟಾರ್ ಶೋನಲ್ಲಿ ಪ್ರದರ್ಶನಗೊಳಿಸಿದ್ದ ಐಎಟಿ ಸಂಸ್ಥೆಯು, ಇದು ಜಗತ್ತಿನ ಅತಿ ಉನ್ನತ ಮಾದರಿಯ ಎಸ್‌ಯುವಿ ಕಾರು ಮಾದರಿ ಎಂದು ಹೇಳಿಕೊಂಡಿತ್ತು.

ಇದೀಗ ವಿನೂತನ ಕಾರಿನ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಹೊರಹಾಕಿರುವ ಐಎಟಿ ಸಂಸ್ಥೆಯು ಕೇವಲ 12 ಕಾರುಗಳನ್ನು ಮಾತ್ರ ತಯಾರಿಸುವುದಾಗಿ ಹೇಳಿಕೊಂಡಿದ್ದು, ಪ್ರತಿ ಕಾರಿನ ಬೆಲೆಯನ್ನು 2.2 ಮಿಲಿಯನ್ ಡಾಲರ್ಸ್‌ಗೆ ಮಾರಾಟ ಮಾಡಲು ನಿರ್ಧರಿಸಿದೆ.

ಅಂದರೆ ಭಾರತದ ರೂಪಾಯಿ ಮೊತ್ತದಲ್ಲಿ 30 ಕೋಟಿಗೂ ಹೆಚ್ಚು ಬೆಲೆ ಬಾಳಲಿದ್ದು, ಸ್ಫಟಿಕದ ರೂಪದಲ್ಲಿ ಸಿದ್ದವಾಗಿರುವ ಕಾರಿನ ಹೊರ ವಿನ್ಯಾಸಗಳು ಜಗತ್ತಿನಲ್ಲಿ ಇದುವರೆಗೆ ಸಿದ್ದವಾಗಿರುವ ಮಾಡಿಫೈ ಕಾರುಗಳಲ್ಲೇ ಅತಿ ಹೆಚ್ಚು ದುಬಾರಿ ಮಾದರಿಯಾಗಿದೆ.

ಕಾರಿನ ವೈಶಿಷ್ಟ್ಯತೆಗಳು
'ಸ್ಟೆಲ್ತ್ ಫೈಟರ್' ಕಾರ್ಲ್‍ಮನ್ ಕಿಂಗ್ ಕಾರಿಗೆ ಸ್ಫೂರ್ತಿ ನೀಡಿದ್ದು, ಇದು ಫೋರ್ಡ್ ಎಫ್ -5 ಫ್ಯಾಟ್ ಫಾರ್ಮ್ ಅನ್ನು ಆಧರಿಸಿದೆ. ಇನ್ನು ಈ ಕಾರು 4,500 ಕೆಜಿ ತೂಕ ಹೊಂದಿದ್ದು, ಗುಂಡು ನಿರೋಧಕ ದೇಹದ ರಕ್ಷಾ ಕವಚ ಸೇರಿಸಿ ಮತ್ತು ಒಟ್ಟು 6,000 ಕೆಜಿ ತೂಕವನ್ನು ಹೊಂದಿದೆ.
MOST READ: ಗ್ರಾಹಕನಿಗೆ ಮೋಸ ಮಾಡಲು ಹೋಗಿ ಭಾರೀ ಮೊತ್ತದಲ್ಲಿ ದಂಡ ಪಾವತಿಸಿದ ಡೀಲರ್

ಆರು ಮೀಟರ್‍ಗಳ ಉದ್ದವಿರುವ ಈ ಎಸ್‍ಯುವಿ ಕಾರು ಖಂಡಿತವಾಗಿಯೂ ಅಭೂತಪೂರ್ವ ವಿನ್ಯಾಸ ಹೊಂದಿದ್ದು, ಕಾರಿನ ಒಳಗೆ ನೀಡಲಾಗಿರುವ ಐಷಾರಾಮಿ ಸೌಲಭ್ಯಗಳು ಹೊಸ ಲೋಕಕ್ಕೆ ಕರೆದುಕೊಂಡು ಹೋಗುತ್ತವೆ.

ಇನ್ನು ಕಾರಿನ ಎಂಜಿನ್ ವಿಚಾರಕ್ಕೆ ಬಂದಲ್ಲಿ, ಇದರಲ್ಲಿ ಬಳಸಲಾದ 6.8-ಲೀಟರ್ ವಿ10 ಎಂಜಿನ್ 400ಬಿಹೆಚ್‍ಪಿ ಮತ್ತು ಗಂಟೆಗೆ 140 ಕಿಲೋಮೀಟರ್ ಚಲಿಸಬಲ್ಲ ಸಾಮರ್ಥ್ಯ ಪಡೆದಿದ್ದು, 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಜೋಡಿಸಲಾಗಿದೆ.

ಕಾರಿನ ಒಳಭಾಗದಲ್ಲಿ ಹೈಫೈ ಸೌಂಡ್, ಪ್ರೈವೆಟ್ ಸೇಫ್ ಬಾಕ್ಸ್, ಫೋನ್ ಪ್ರೊಜೆಕ್ಷನ್ ಸಿಸ್ಟಂ, ಸ್ಯಾಟ್‌ಲೈಟ್ ಟಿವಿ ಮತ್ತು ಫೋನ್ ಆಯ್ಕೆ, ಪಿಎಸ್4 ಎಂಟರ್‍ಟೈನ್ಮೆಂಟ್ ಸಿಸ್ಟಂ ಮತ್ತು ಅಲ್ಟ್ರಾ ಹೆಚ್‍ಡಿ 4ಕೆ ಟೆಲಿವಿಷನ್ ಸೆಟ್ ಎಂಬ ಹಲವಾರು ಐಷಾರಾಮಿ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಇದಲ್ಲದೆ ಎಲೆಕ್ಟ್ರಿಕ್ ಟೇಬಲ್, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಇಂಡಿಪೆಂಡೆಂಟ್ ಎಸಿ, ಇಂಡೋರ್ ಲೈಟ್ ಕಂಟ್ರೋಲ್ ಸಿಸ್ಟಂ, ಕಾಫಿ ಟೇಬಲ್, ಟಿವಿ ಲಿಫ್ಟ್ ಸಿಸ್ಟಂ, ಏರ್ ಫ್ಲೂರಿಫೈರ್, ಮತ್ತು ಸ್ಮಾರ್ಟ್‍ಫೋನ್ ಆಪ್‍ನಿಂದ ನಿಯಂತ್ರಿಸಬಲ್ಲ ಹಲವಾರು ಸೌಲಭ್ಯಗಳನ್ನು ಪಡೆದುಕೊಂಡಿದೆ.
MOST READ: ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಕಾರಿನ ಹೊರಭಾಗವನ್ನು ಕಾರ್ಬನ್ ಫೈಬರ್ ಮತ್ತು ಸ್ಟಿಲ್‍ನಿಂದ ಸಜ್ಜುಗೊಳಿಸಿದ್ದು, 3,961-ಎಂಎಂ ವೀಲ್ ಬೇಸ್, 300-ಎಂಎಂ ಗ್ರೌಂಡ್ ಕ್ಲಿಯರೆನ್ಸ್, 151 ಲೀಟರ್ ಫ್ಯುಯಲ್ ಟ್ಯಾಂಕ್, ಮತ್ತು ಈ ಎಸ್‍ಯುವಿ ಕಾರಿನ -40 ಡಿಗ್ರಿ ಸೆಲ್ಷಿಯಸ್ ತಾಪಮಾನದಲ್ಲೂ ಯಾವುದೇ ತೊಂದರೆ ಇಲ್ಲದೇ ಕಾರ್ಯನಿರ್ವಹಿಸಬಲ್ಲದು.


Click it and Unblock the Notifications








