ಗ್ರಾಹಕನಿಗೆ ಮೋಸ ಮಾಡಲು ಹೋಗಿ ಭಾರೀ ಮೊತ್ತದಲ್ಲಿ ದಂಡ ಪಾವತಿಸಿದ ಡೀಲರ್

ಹಣ ಇದ್ದವರಿಗೆ ವಾಹನ ಕೊಳ್ಳುವುದು ಸುಲಭದ ವಿಚಾರ. ಆದ್ರೆ ಮಧ್ಯವರ್ಗದವರಿಗೆ ಒಂದು ವಾಹನ ಖರೀದಿಸುವಾಗ ಆಗುವ ಹಣಕಾಸಿನ ಅಡಚಣೆ ಅಷ್ಟಿಷ್ಟಲ್ಲ. ಸರಿ, ಹೇಗೋ ಮಾಡಿ ಹಣ ಹೊಂದಿಸಿ ತಮ್ಮ ಕನಸಿನ ವಾಹನ ಖರೀದಿ ಮಾಡಿದ್ರು ಅದಕ್ಕೂ ನೆಮ್ಮದಿ ಇಲ್ಲ. ಯಾಕೆಂದ್ರೆ ಡೀಲರ್ಸ್‌ಗಳ ಮೋಸದ ವ್ಯಾಪರವು ವಾಹನ ಖರೀದಿಸುವುದೇ ತಪ್ಪು ಎನ್ನುವಂತೆ ಮಾಡಿ ಬಿಡುತ್ತೆ. ಇಲ್ಲೂ ಕೂಡಾ ನಡೆದಿದ್ದು ಅದೇ.

ಗ್ರಾಹಕನಿಗೆ ಮೋಸ ಮಾಡಲು ಹೋಗಿ ಭಾರೀ ಮೊತ್ತದಲ್ಲಿ ದಂಡ ಪಾವತಿಸಿದ ಡೀಲರ್

ಹೊಸ ವಾಹನ ಖರೀದಿಸುವಾಗ ಇನ್ಮುಂದೆ ನೀವು ಹತ್ತು ಬಾರಿ ಯೋಚಿಸಿ ವ್ಯವಹಾರ ಮಾಡುವುದು ಒಳಿತು. ಇಲ್ಲವಾದ್ರೆ ಸಾವಿರಾರು ರೂಪಾಯಿ ಖರ್ಚು ಮಾಡಿ ಹೊಸ ದ್ವಿಚಕ್ರ ವಾಹನ ಖರೀದಿ ಮಾಡಿ ಸಂಕಷ್ಟಕ್ಕೆ ಸಿಲುಕುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದನ್ನೆಲ್ಲಾ ಯಾಕೆ ಹೇಳ್ತಾ ಇದೀವಿ ಅಂದ್ರೆ, ಪಂಚಕುಲಾನಲ್ಲಿರುವ ಹೋಂಡಾ ಶೋರುಂನವರು ರಿಜಿಸ್ಟ್ರೇಷನ್ ಎಂಬ ಹೆಸರಿನಲ್ಲಿ ಸುಮಾರು ರೂ.500 ಹೆಚ್ಚು ಕೇಳಿದ್ದು, ಇದೀಗ ತಾವೆ ಸ್ವತಃ ರೂ.5000 ಮಾಲೀಕನಿಗೆ ಹಿಂತಿರುಗಿಸುವ ಪರಿಸ್ಥಿತಿ ಎದುರಾಗಿದೆ.

ಗ್ರಾಹಕನಿಗೆ ಮೋಸ ಮಾಡಲು ಹೋಗಿ ಭಾರೀ ಮೊತ್ತದಲ್ಲಿ ದಂಡ ಪಾವತಿಸಿದ ಡೀಲರ್

ಕರ್ನಲ್ ಮೂಲದಲ್ಲಿರುವ ಸೊಂಕ್ರ ಹಳ್ಳಿಯ ನಿವಾಸಿಯಾದ ಸ್ಮಾಜ್‍ಪಲ್ ಸಿಂಗ್ ಎಂಬುವವರು ನವೆಂಬರ್ 21, 2017ರಂದು ಹೊಸ ಹೋಂಡಾ ಆಕ್ಟೀವಾ 4ಜಿ ಸ್ಕೂಟರ್ ಅನ್ನು ಪಂಚಕುಲನಲ್ಲಿರುವ ಹೋಂಡಾ ಮೋಟಾರ್‍‍ಸೈಕಲ್ & ಸ್ಕೂಟರ್ ಇಂಡಿಯಾ ಪ್ರೈ.ಲಿ. ಜೋಷಿ ಆಟೋ ಸ್ಕ್ಯಾನ್ಸ್ ನಲ್ಲಿ ಖರೀದಿ ಮಾಡಿದ್ದರು.

ಗ್ರಾಹಕನಿಗೆ ಮೋಸ ಮಾಡಲು ಹೋಗಿ ಭಾರೀ ಮೊತ್ತದಲ್ಲಿ ದಂಡ ಪಾವತಿಸಿದ ಡೀಲರ್

ಹೊಸದಾಗಿ ಹೋಂಡಾ 4 ಆಕ್ಟೀವಾ 4ಜಿ ಸ್ಕೂಟರ್ ಅನ್ನು ಖರೀಸಿದುವ ಸಮಯದಲ್ಲಿ ಸ್ಕೂಟರ್‍‍ನ ಮೊತ್ತವನ್ನು ಸೇರಿ ರಿಜಿಸ್ಟ್ರೇಶಷ ವೆಚ್ಚವನ್ನು ಸಹ ಪಾವತಿ ಮಾಡಲಾಗಿದೆ. ಆದರೆ ಇಲ್ಲಿ ವಿಚಾರ ಏನಪ್ಪಾ ಅಂದ್ರೆ ರಿಜಿಸ್ಟ್ರೇಷನ್‍‍ಗಾಗಿ ರೂ. 300, ತಾತ್ಕಾಲಿಕ ನೋಂದಣಿ ಶುಲ್ಕವಾಗಿ ರೂ. 150, ಪೋಸ್ಟಲ್ ಫೀ ಅಂತಾ ರೂ.30, ಸ್ಮಾರ್ಟ್ ಕಾರ್ಡ್‍‍ಗಾಗಿ ರೂ. 200 ಮತ್ತು ಮೋಟರ್ ವೆಹಿಕಲ್ ಟ್ಯಾಕ್ಸ್ ಎಂದು ರೂ.2,050 ಪಾವತಿಸಲಾಗಿದೆ.

ಗ್ರಾಹಕನಿಗೆ ಮೋಸ ಮಾಡಲು ಹೋಗಿ ಭಾರೀ ಮೊತ್ತದಲ್ಲಿ ದಂಡ ಪಾವತಿಸಿದ ಡೀಲರ್

ರಿಜಿಸ್ಟ್ರೇಶಷನ್ ಫೀ ಎಂದು ಮೊತ್ತವಾಗಿ ರೂ. 2,730 ಪಾವತಿಸಬೇಕಾದ ಜಾಗದಲ್ಲಿ ಡೀಲರ್‍‍ಗಳು ರೂ. 479 ಹೆಚ್ಚಾಗಿ ಕೇಳಿ ಒಟ್ಟಾರೆಯಾಗಿ ರೂ. 3,209 ಪಡೆದುಕೊಂಡಿದ್ದಾರೆ. ಮೊದಲೇ ಅನುಮಾನಗೊಂಡ ಸ್ಕೂಟರ್ ಮಾಲೀಕನು ಹೆಚ್ಚಿನ ಹಣ ಏಕೆ ಪಡೆಯುತ್ತಿದ್ಡೀರಿ ಎಂದು ಕೇಳಿದಾಗ ಉತ್ತರ ನೀಡದ ಡೀಲರ್‍‍ಗಳ ಮೇಲೆ ದೂರನ್ನು ನೀಡಲಾಗಿದೆ.

ಗ್ರಾಹಕನಿಗೆ ಮೋಸ ಮಾಡಲು ಹೋಗಿ ಭಾರೀ ಮೊತ್ತದಲ್ಲಿ ದಂಡ ಪಾವತಿಸಿದ ಡೀಲರ್

ಹೌದು, ತನಗಾದ ಮೋಸವನ್ನು ಸಹಿಸಲಾಗದ ಸ್ಮಾಜ್‍ಪಲ್ ಸಿಂಗ್‍ರವರು ತಕ್ಷಣವೇ ಮೊದಲಿಗೆ ಸ್ಥಳೀಯ ಪೋಲಿಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ನಂತರ ಪಂಚಕುಲಾನಲ್ಲಿರುವ ಪಂಚಕುಲಾ ಜಿಲ್ಲಾ ನ್ಯಾಯಾಲಯಕ್ಕೆ ಹೋಗಿ ಡೀಲರ್‍‍ಗಳ ಮೇಲೆ ದೂರು ನೀಡಲಾಗಿದೆ.

ಗ್ರಾಹಕನಿಗೆ ಮೋಸ ಮಾಡಲು ಹೋಗಿ ಭಾರೀ ಮೊತ್ತದಲ್ಲಿ ದಂಡ ಪಾವತಿಸಿದ ಡೀಲರ್

ಸ್ಮಾಜ್‍ಪಲ್ ಸಿಂಗ್‍‍ರವರ ದೂರಿನ ಮೇಲೆ ನ್ಯಾಯಾಲಯ ಹೋಂಡಾ ಡೀಲರ್ ಅವರನ್ನು ಕಣಿಸಿಕೊಳ್ಳಲು ಹೇಳಲಾಗಿದ್ದು, ನ್ಯಾಯಾಲಯದ ಮುಂದೆ ಶರಣಾದ ಹೋಂಡಾ ಸ್ಕೂಟರ್ ಡೀಲರ್‍‍ಗಳು ತಮ್ಮ ತಪ್ಪನ್ನು ಒಪ್ಪಿಕೊಳ್ಳಲಾಗಿದೆ. ಇದರಿಂದಾಗಿ ನ್ಯಾಯಲವು ಸರಿಯಾದ ಶಿಕ್ಷೆಯನ್ನು ವಿಧಿಸಲಾಗಿದೆ.

MOST READ: ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ..

ಗ್ರಾಹಕನಿಗೆ ಮೋಸ ಮಾಡಲು ಹೋಗಿ ಭಾರೀ ಮೊತ್ತದಲ್ಲಿ ದಂಡ ಪಾವತಿಸಿದ ಡೀಲರ್

ಮಾಲೀಕನಿಗೆ ರೂ. 5000 ದಂಡ ನೀಡುವಂತೆ ಕೋರ್ಟ್ ಆದೇಶ

ಡೀಲರ್‍‍ಗಳು ಹೌದು, ರಿಜಿಸ್ಟ್ರೇಷನ್‍‍ಗಾಗಿ ಸ್ಮಾಜ್‍ಪಲ್ ಅವರ ಹತ್ತಿರ ನಾವು ರೂ. 479 ಹೆಚ್ಚಾಗಿಯೆ ಪಡೆದ್ದಿದ್ದೆವೆ ಎಂದು ಒಪ್ಪಿಕೊಳ್ಳಲಾಗಿದ್ದು, ನ್ಯಾಯಾಲಯವು ಹೋಂಡಾ ಡೀಲರ್‍‍ಗಳು ಸ್ಮಾಜ್‍ಪಲ್ ಸಿಂಗ್‍‍ರವರಿಗೆ ರೂ. 5000 ಹಿಂತಿರುಗಿಸಬೇಕಾಗಿ ಆದೇಶವನ್ನು ನೀಡಿದೆ.

ಗ್ರಾಹಕನಿಗೆ ಮೋಸ ಮಾಡಲು ಹೋಗಿ ಭಾರೀ ಮೊತ್ತದಲ್ಲಿ ದಂಡ ಪಾವತಿಸಿದ ಡೀಲರ್

ಅರೆ ಇಷ್ಟು ಸಣ್ಣ ಹಣಕ್ಕೆ ಕೋರ್ಟ್‍ಗೆ ಹೋಗುವ ಅನಿವಾರ್ಯತೆ ಏನಿದೆ ಎಂಬುದು ನಿಮ್ಮ ಪ್ರಶ್ನೆ ಇರಬಹುದು. ಒಂದು ರೂಪಾಯಿ ಹೆಚ್ಚಾಗಿ ತೆಗೆದುಕೊಂಡರೂ ಸಹ ಪ್ರಶ್ನಿಸುವ ಹಕ್ಕು ನಮಗೆ ಇದ್ದೇ ಇದೆ. ಏಕೆಂದರೆ ಅದು ನಮ್ಮ ಹಣ. ಒಂದೊಂದು ರೂಪಾಯಿಯನ್ನು ಕೂಡಿಡಲು ಪಡುವ ಕಷ್ಟ ನಮಗೆ ಮಾತ್ರವೇ ಗೊತ್ತು.

ಗ್ರಾಹಕನಿಗೆ ಮೋಸ ಮಾಡಲು ಹೋಗಿ ಭಾರೀ ಮೊತ್ತದಲ್ಲಿ ದಂಡ ಪಾವತಿಸಿದ ಡೀಲರ್

ಅದರಲ್ಲಿಯು 500 ರೂ. ತಾನೆ ಏನಾಗುತ್ತೆ ಎಂದುಕೊಂಡರೆ ಅದು ತಪ್ಪು. ಏಕೆಂದರೆ ನಾವು ಪ್ರಶ್ನಿಸದಿದ್ದರೆ ನಾಳೆ ಮತ್ತೊಬ್ಬರಿಗೆ ಹೀಗೆ ಮೋಸ ಮಾಡುತ್ತಾರೆ. ಮೋಸ ಮಾಡಿ ಹೆಚ್ಚು ಹಣ ಸಂಪಾದನೆ ಮಾಡುತ್ತಾರೆ. ಹೀಗಾಗಿ ವಾಹನ ಖರೀದಿಸುವಾಗ ವ್ಯವಹಾರವನ್ನು ಸರಿಯಾಗಿ ಮಾಡಿದರೆ ಒಳಿತು.

MOST READ: ಒಂದು ಲೀಟರ್‍‍ಗೆ ಸುಮಾರು 48.2 ಕಿಲೋಮೀಟರ್ ಮೈಲೇಜ್ ನೀಡುತ್ತಂತೆ ಈ ಸ್ವಿಫ್ಟ್ ಕಾರು..!

ಗ್ರಾಹಕನಿಗೆ ಮೋಸ ಮಾಡಲು ಹೋಗಿ ಭಾರೀ ಮೊತ್ತದಲ್ಲಿ ದಂಡ ಪಾವತಿಸಿದ ಡೀಲರ್

ಹೀಗಾಗಿರುವುದು ಇದೇನು ಮೊದಲ ಬರಿಯಲ್ಲ ಇದಕ್ಕು ಮುನ್ನವೇ ಡೀಲರ್‍‍ಗಳು ಮತ್ತು ಸರ್ವೀಸ್ ಸೆಂಟರ್‍‍ನವರು ಯಾವ ರೀತಿ ತಮ್ಮ ಗ್ರಾಹಕರಿಗೆ ಟೋಪಿ ಹಾಕಿ ಸಿಕ್ಕಿಕೊಂಡಿದ್ದಾರೆ ಎಂಬುವ ಘಟನೆಗಳ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. ಇನ್ನಾದರು ವಾಹನ ಖರೀದಿಸುವಾಗ ಇಂತಹ ವಿಚಾರಗಳು ಮತ್ತು ನಿಮ್ಮ ಹಣದ ಬಗ್ಗೆ ಗಮನವಿರಲಿ.

Source: TOI

Most Read Articles

Kannada
English summary
Consumer Court Orders Honda Dealer To Pay Customer Rs.5,000 For Charging Extra Registration Fee. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more