ಕೇವಲ 6 ಲಕ್ಷವಿದ್ದರೆ ಎರಡರಲ್ಲಿ ಒಂದು ಕಾರು ಖರೀದಿಸಬಹುದು: ಯಾವುದು ಬೆಸ್ಟ್?

ಭಾರತೀಯ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಭಾರೀ ಸದ್ದು ಮಾಡುತ್ತಿರುವ ಹೊಸ 2024 ನಿಸ್ಸಾನ್ ಮ್ಯಾಗ್ನೈಟ್ ಹಾಗೂ ಮಾರುತಿ ಸುಜುಕಿ ಬ್ರೆಝಾದ ಬೆಲೆ, ವೈಶಿಷ್ಟ್ಯಗಳು ಮತ್ತು ಸುರಕ್ಷತೆಯ ನಡುವಿನ ವ್ಯತ್ಯಾಸಗಳನ್ನು ಇಲ್ಲಿ ಹೋಲಿಕೆ ಮಾಡಲಾಗಿದೆ. ದೊಡ್ಡ ಎಸ್‌ಯುವಿಗಳನ್ನು ಖರೀದಿಸಲು ಬಯಸುವವರಿಗೆ ಕಾಂಪ್ಯಾಕ್ಟ್ ಎಸ್‌ಯುವಿಗಳಲ್ಲಿಯೇ ಆ ಫೀಚರ್‌ಗಳು ಹಾಗೂ ಸುರಕ್ಷತೆಯನ್ನು ನೀಡುತ್ತಿರುವ ಕಾರಣ ಈ ಕಾರುಗಳು ಖರೀದಿಸಲು ಉತ್ತಮವಾಗಿವೆ. ಹಾಗಾದ್ರೆ ಎರಡೂ ಎಸ್‌ಯುವಿಗಳಲ್ಲಿನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಇಲ್ಲಿ ವಿವರವಾಗಿ ನೋಡೋಣ ಬನ್ನಿ.

ಬೆಲೆ: ಹೊಸ 2024ರ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.5.99 ಲಕ್ಷದಿಂದ ರೂ.11.50 ಲಕ್ಷಗಳಾಗಿದೆ. ಮತ್ತೊಂದೆಡೆ ಮಾರುತಿ ಸುಜುಕಿ ಬ್ರೆಝಾ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.8.34 ಲಕ್ಷದಿಂದ ರೂ.14.14 ಲಕ್ಷಗಳಾಗಿದೆ. ಬೆಲೆಯನ್ನು ಪರಿಗಣಿಸಿದರೆ ಮ್ಯಾಗ್ನೈಟ್ ಖಂಡಿತವಾಗಿಯೂ ಬೆಸ್ಟ್‌ ಎಂದು ಹೇಳಬಹುದು.

maruti-brezza-vs-nissan-magnite

ವೈಶಿಷ್ಟ್ಯಗಳು ಮತ್ತು ಸುರಕ್ಷತೆ: ನಿಸ್ಸಾನ್ ಮ್ಯಾಗ್ನೈಟ್ 8 ಇಂಚಿನ ಫ್ಲೋಟಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಡಿಸ್ಪ್ಲೇ, ಲೆದರೆಟ್ ಒಳಾಂಗಣ, ಆಂಬಿಯೆಂಟ್ ಲೈಟಿಂಗ್, 7-ಇಂಚಿನ ಟಿಎಫ್‌ಟಿ ಡ್ರೈವರ್ ಡಿಸ್ಪ್ಲೇ, ಸ್ಮಾರ್ಟ್ ಫೋನ್ ಹೋಲ್ಡರ್ ಆರ್ಮ್ರೆಸ್ಟ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್ ನೀಡಲಾಗಿದೆ.

ಇವಿಷ್ಟೇ ಅಲ್ಲದೇ ರಿಮೋಟ್ ಫಂಕ್ಷನ್‌ಗಳೊಂದಿಗೆ ಹೊಸ ಐ-ಕೀ, 40 ಕ್ಕೂ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳು, 6-ಸ್ಪೀಕರ್ 3D ಸರೌಂಡ್ ಸಿಸ್ಟಮ್, 8 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಡಿಸ್ಪ್ಲೇ, 6 ಏರ್ ಬ್ಯಾಗ್‌ಗಳು, 3 ಪಾಯಿಂಟ್ ಸೀಟ್ ಬೆಲ್ಟ್, ಎಲ್ಲಾ ಸೀಟುಗಳಿಗೆ ಸೀಟ್ ಬೆಲ್ಟ್ ರಿಮೈಂಡರ್, ISOFIX ಚೈಲ್ಡ್ ಸೀಟ್ ಮೌಂಟ್, ಹೈಸ್ಪೀಡ್ ಅಲರ್ಟ್ ಸಿಸ್ಟಮ್, ತುರ್ತು ನಿಲುಗಡೆ ಸಿಗ್ನಲ್ (ESS) ನೀಡಲಾಗಿದೆ.

maruti-brezza-vs-nissan-magnite

ಮಾರುತಿ ಬ್ರೆಝಾ ವಿಷಯಕ್ಕೆ ಬಂದರೆ 9-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಡಿಸ್ಪ್ಲೇ, ವೈರ್‌ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಟಿಲ್ಟ್ ಸ್ಟೀರಿಂಗ್, ಎಲೆಕ್ಟ್ರಿಕ್ ಸನ್‌ರೂಫ್, ಕ್ರೂಸ್ ಕಂಟ್ರೋಲ್, ವೈರ್ ಲೆಸ್ ಚಾರ್ಜಿಂಗ್ ಡಾಕ್, ಸ್ಟಾರ್ಟ್/ಸ್ಟಾಪ್ ಪುಶ್ ಬಟನ್, "ಹಾಯ್ ಸುಜುಕಿ" ಆನ್ಬೋರ್ಡ್ ವಾಯ್ಸ್ ಅಸಿಸ್ಟೆಂಟ್, 6-ಸ್ಪೀಕರ್ ಅರ್ಕಾಮಿಸ್ ಸರೌಂಡ್ ಸೌಂಡ್ ಸಿಸ್ಟಮ್ ನೀಡಲಾಗಿದೆ.

ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಹಿಂಭಾಗದ ಎಸಿ ವೆಂಟ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್ ಹೋಲ್ಡ್ ಅಸಿಸ್ಟ್, ರಿವರ್ಸ್ ಪಾರ್ಕಿಂಗ್ ಸೆನ್ಸರ್, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, 6 ಏರ್ ಬ್ಯಾಗ್‌ಗಳು, ಹಿಂಭಾಗದ ಡಿಫೋಗರ್, ಹೆಡ್-ಅಪ್ ಡಿಸ್ಪ್ಲೇ, 360 ಡಿಗ್ರಿ ಕ್ಯಾಮೆರಾ ನೀಡಲಾಗಿದೆ. ಫಿಚರ್ಸ್ ವಿಷಯದಲ್ಲಿ ಎರಡೂ ಸಮಾನವಾಗಿವೆ.

maruti-brezza-vs-nissan-magnite

ಎಂಜಿನ್ ಮತ್ತು ಮೈಲೇಜ್: ಹೊಸ 2024ರ ನಿಸ್ಸಾನ್ ಮ್ಯಾಗ್ನೈಟ್ 1.0-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 71 ಬಿಹೆಚ್ ಪವರ್ ಹಾಗೂ 99 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಅಥವಾ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅಯ್ಕೆಯನ್ನು ಹೊಂದಿದೆ. ಕಂಪನಿಯು ಮ್ಯಾನುವಲ್‌ನಲ್ಲಿ 20 ಕಿ.ಮೀ ಮತ್ತು ಸಿವಿಟಿನಲ್ಲಿ 17.4 ಕಿ.ಮೀ ಮೈಲೇಜ್ ನೀಡುವುದಾಗಿ ಹೇಳಿದೆ.

ಮತ್ತೊಂದೆಡೆ, ಮಾರುತಿ ಬ್ರೆಝಾ ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಗಳಲ್ಲಿ ಲಭ್ಯವಿದೆ. 1.5 ಲೀಟರ್‌ 4 ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 103 ಬಿಹೆಚ್ ಪವರ್ ಹಾಗೂ 138 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೀಡಲಾಗಿದೆ. ಸಿಎನ್‌ಜಿ ಆವೃತ್ತಿಯು 89 ಪಿಎಸ್ ಪವರ್ ಮತ್ತು 121.5 ಎನ್ಎಂ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ.

ಮ್ಯಾನುವಲ್‌ನಲ್ಲಿ ಪ್ರತಿ ಲೀಟರ್‌ಗೆ 17.38 ಕಿ.ಮೀ, ಆಟೋಮ್ಯಾಟಿಕ್ ನಿಂದ ಪ್ರತಿ ಲೀಟರ್‌ಗೆ 19.8 ಕಿ.ಮೀ ಮೈಲೇಜ್ ನೀಡಿದರೆ, ಸಿಎನ್‌ಜಿಯಲ್ಲಿ 25.51 ಕಿ.ಮೀ ಮೈಲೇಜ್ ನೀಡುತ್ತದೆ. ಮತ್ತೆ, ಖರೀದಿದಾರರು ಎಲ್ಲಾ ರೀತಿಯ ಎಂಜಿನ್-ಟ್ರಾನ್ಸ್ಮಿಷನ್ ಸಂಯೋಜನೆಗಳಿಗೆ ಹೋಗುವ ಆಯ್ಕೆಯನ್ನು ಕೂಡ ಇದು ನೀಡುತ್ತದೆ. ಈ ವಿಷಯದಲ್ಲಿ ಬ್ರೆಜಾ ಬೆಸ್ಟ್ ಎಂದು ಹೇಳಬಹುದು.

More from DriveSpark

Article Published On: Wednesday, October 16, 2024, 13:02 [IST]
English summary
Maruti brezza vs nissan magnite price features mileage comparison
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+