Honda: ಉದ್ಯೋಗಿಗಳಿಗಾಗಿ ರೂ.86,000ಕ್ಕೆ ಹೊಸ ಹೋಂಡಾ ಬೈಕ್ ಬಿಡುಗಡೆ.. 1 ಲೀ. ಪೆಟ್ರೋಲ್‌ಗೆ 65 Km ಮೈಲೇಜ್
ಹೋಂಡಾ ಶೈನ್ 125 (Honda Shine 125) ಜನಪ್ರಿಯ ಬೈಕ್ ಆಗಿದೆ. ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ, ಇದೇ ಮೋಟಾರ್‌ಸೈಕಲ್‌ನ್ನು ಯುವ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿಸಲು ಕಂಪನಿಯು ಮುಂದಾಗಿದೆ. ಅದರ ಭಾಗವಾಗಿ 'ಶೈನ್ 125'ನ್ನು ನವೀನ ರೂಪದಲ್ಲಿ ಬಿಡುಗಡೆಗೊಳಿಸಿದೆ. ಬನ್ನಿ, ಈ ಹೊಸ ಬೈಕ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ನೂತನ ಹೋಂಡಾ ಶೈನ್ 125 ಲಿಮಿಟೆಡ್ ಎಡಿಷನ್ (Honda Shine 125 Limited Edition), ಕೈಗೆಟಕುವ ದರದಲ್ಲಿ ಮಾರಾಟಕ್ಕೆ ಬಂದಿದೆ. ರೂ.86,211 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದ್ದು, ಎಲ್ಲ ವರ್ಗದ ಜನರು ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯವಾಗಲಿದೆ. ಸ್ಟ್ಯಾಂಡರ್ಡ್ 'ಶೈನ್ 125' ಕನಿಷ್ಠ ರೂ.80,542 ಹಾಗೂ ಗರಿಷ್ಠ ರೂ.84,902 ದರವನ್ನು ಒಳಗೊಂಡಿದೆ.

ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದ್ದು, ನೋಡುಗರ ಕಣ್ಮನ ಸೆಳೆಯುವಂತಿದೆ. ಮುಂಭಾಗ (ಫ್ರಂಟ್) ವೈಸರ್, ಸೈಡ್ ಕವರ್‌ಗಳು ಮತ್ತು ಎಕ್ಸಾಸ್ಟ್ ಮಫ್ಲರ್ ಕವರ್‌ನ್ನು ಒಳಗೊಂಡಿದೆ. ಪರ್ಲ್ ಸೈರನ್ ಬ್ಲೂ ಬಣ್ಣದೊಂದಿಗೂ ಸಿಗಲಿದ್ದು, ಫ್ಯುಯೆಲ್ ಟ್ಯಾಂಕ್‌ನ ಮೇಲ್ಭಾಗ ವಿನೂತನವಾದ 'ಶೈನ್' ಗ್ರಾಫಿಕ್ಸ್ ಇದೆ. ಹ್ಯಾಲೊಜೆನ್ ಹೆಡ್‌ಲ್ಯಾಂಪ್, ಇಂಡಿಕೇಟರ್‌ಗಳು ಹಾಗೂ ಟೈಲ್ ಲ್ಯಾಂಪ್‌ನ್ನು ಪಡೆದಿದೆ.
ಈ ಮೋಟಾರ್‌ಸೈಕಲ್ ಹೆಚ್ಚು ವಿಶಾಲವಾಗಿದೆ. 2,046 ಮಿ.ಮೀ ಉದ್ದ, 741 ಮಿ.ಮೀ ಅಗಲ & 1,116 ಮಿ.ಮೀ ಎತ್ತರವಿದೆ. ಜೊತೆಗೆ 162 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,285 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ. ಬರೋಬ್ಬರಿ 113 ಕೆಜಿ ತೂಕವಿದೆ.

ಹೊಚ್ಚ ಹೊಸ 'ಹೋಂಡಾ ಶೈನ್ 125 ಲಿಮಿಟೆಡ್ ಎಡಿಷನ್' ಬಲಿಷ್ಠವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 123.94-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 7,500 ಆರ್‌ಪಿಎಂನಲ್ಲಿ 10.63 ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 6,000 ಆರ್‌ಪಿಎಂನಲ್ಲಿ 11 ಎನ್ಎಂ (ನ್ಯೂಟನ್ ಮೀಟರ್) ಹೊರಹಾಕುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 65 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. ಸರಿ ಸುಮಾರು 10.5 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ಪಡೆದಿದೆ.
ಇದು ಎಲ್‌ಸಿಡಿ ಕನ್ಸೋಲ್, ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್ ಆಫ್, ಸೈಲೆಂಟ್ ಸ್ಟಾರ್ಟ್ ಹಾಗೂ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸೀಟ್ ಉದ್ದ 651 ಮಿ.ಮೀ ಮತ್ತು ಸೀಟ್ ಎತ್ತರ 791 ಮಿ.ಮೀ ಇದೆ. ರಸ್ತೆಯ ಮೇಲೆ ಗಟ್ಟಿಯಾದ ಹಿಡಿತ ಸಾಧಿಸಲು 18-ಇಂಚಿನ ಪೈರೈಟ್ ಬ್ರೌನ್ ಬಣ್ಣದ ಅಲಾಯ್ ವೀಲ್‌ಗಳು & ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ.

ಈ ಬೈಕ್ ಸುರಕ್ಷತೆಯಿಂದಲೂ ಮನೆ ಮಾತಾಗಿದೆ. ಸವಾರರಿಗೂ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಮತ್ತು ಹಿಂಭಾಗ (ರೇರ್) ಡುಯಲ್ ರೇರ್ ಸ್ಪ್ರಿಂಗ್ಸ್ ಸಸ್ಪೆನ್ಷನ್ ಸೆಟಪ್‌ನ್ನು ಒಳಗೊಂಡಿದೆ. ಸಿಬಿಎಸ್ (ಕಾಂಬಿ ಬ್ರೇಕಿಂಗ್ ಸಿಸ್ಟಮ್) ಹಾಗೂ ಡಿಸ್ಕ್/ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.
ಇದಕ್ಕೆ ಸಾಲು - ಸಾಲು ಎದುರಾಳಿಗಳಿವೆ. ಟಿವಿಎಸ್ ರೈಡರ್ 125 (TVS Raider 125), ಹೀರೋ ಎಕ್ಸ್‌ಟ್ರೀಮ್ 125ಆರ್ (Hero Xtreme 125R), ಬಜಾಜ್ ಪಲ್ಸರ್ 125 (Bajaj Pulsar 125), ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ (Hero Super Splendor XTEC), ಬಜಾಜ್ ಪಲ್ಸರ್ ಎನ್ಎಸ್125 (Bajaj Pulsar NS125) ಹಾಗೂ ಹೀರೋ ಗ್ಲಾಮರ್ ಎಕ್ಸ್‌ಟೆಕ್ (Hero Glamour XTEC) ಮಾಡೆಲ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications








